ನವದೆಹಲಿ:ಗ್ರಾಹಕರ ಜೇಬಿಗೆ ಕತ್ತರಿ ಹಾಕಿರುವ ಗುಜರಾತ್ ಸಹಕಾರಿ ಹಾಲು ಮಾರಾಟ ಒಕ್ಕೂಟ ಮಾರ್ಚ್ 1ರಿಂದ ಜಾರಿಗೆ ಬರುವಂತೆ ಅಮೂಲ್ ಹಾಲಿನ ಬೆಲೆಯಲ್ಲಿ ಏರಿಕೆ ಮಾಡಿದ್ದು, ಪ್ರತಿ ಲೀಟರ್ಗೆ 2 ರೂಪಾಯಿ ಹೆಚ್ಚಳ ಮಾಡಿದೆ.
ಗ್ರಾಹಕರ ಜೇಬಿಗೆ ಕತ್ತರಿ: ಅಮೂಲ್ ಹಾಲಿನ ದರದಲ್ಲಿ ಲೀಟರ್ಗೆ 2 ರೂ. ಏರಿಕೆ - ಅಮೂಲ್ ದರ ಏರಿಕೆ
ದೇಶಾದ್ಯಂತ ಮಾರಾಟವಾಗುವ ಅಮೂಲ್ ಹಾಲಿನ ದರದಲ್ಲಿ ಮತ್ತಷ್ಟು ಏರಿಕೆಯಾಗಲಿದೆ. ನಾಳೆಯಿಂದ ಗ್ರಾಹಕರು ಎರಡು ರೂ. ಹೆಚ್ಚುವರಿಯಾಗಿ ನೀಡಬೇಕಾಗಿದೆ.
ಕಳೆದ ವರ್ಷ ಜುಲೈ ತಿಂಗಳಲ್ಲಿ ಹಾಲಿನ ಬೆಲೆಯಲ್ಲಿ ಏರಿಕೆ ಮಾಡಿದ್ದ ಜೆಸಿಎಂಎಂಎಫ್ ಇದೀಗ ಮತ್ತೊಮ್ಮೆ ಗ್ರಾಹಕರ ಜೇಬಿಗೆ ಕತ್ತರಿ ಹಾಕಿದ್ದು, ಪರಿಷ್ಕೃತ ದರ ನಾಳೆಯಿಂದಲೇ ಜಾರಿಗೆ ಬರಲಿದೆ. ಹೊಸ ದರದ ಪ್ರಕಾರ ಅಮೂಲ್ ಗೋಲ್ಡ್ ಅರ್ಧ ಲೀಟರ್ಗೆ 30 ರೂ. ಅಮೂಲ್ ತಾಜಾ 500ml ಗೆ 24 ಹಾಗೂ ಅಮೂಲ್ ಶಕ್ತಿ 27 ರೂ ಆಗಲಿದೆ. ಉಳಿದಂತೆ ಅಮೂಲ್ ಟಿ-ಸ್ಪೇಷಲ್ ಹಾಲಿನ ಬೆಲೆಯಲ್ಲೂ ಎರಡು ರೂ. ಏರಿಕೆಯಾಗಿದೆ.
ದೆಹಲಿ,ತೆಲಂಗಾಣ, ಆಂಧ್ರಪ್ರದೇಶ, ಮಹಾರಾಷ್ಟ್ರ, ಕೋಲ್ಕತಾ, ಗುಜರಾತ್ ಸೇರಿದಂತೆ ದೇಶದ ಎಲ್ಲ ನಗರಗಳಲ್ಲೂ ಈ ಹಾಲು ಮಾರಾಟವಾಗುತ್ತಿದ್ದು, ಇದೀಗ ಗ್ರಾಹಕರು ಎರಡು ರೂ. ಹೆಚ್ಚುವರಿ ನೀಡಬೇಕಾಗಿದೆ.