ನವದೆಹಲಿ: ದೇಶದ ಪ್ರಮುಖ ಹಾಲು ಉತ್ಪಾದಕ ಡೈರಿಗಳಾದ ಅಮುಲ್ ಮತ್ತು ಮದರ್ ಡೈರಿ ದರ ಏರಿಕೆ ಮಾಡಿವೆ. ಪ್ರತಿ ಒಂದು ಲೀಟರ್ ಹಾಲಿಗೆ ಎರಡೂ ಸಂಸ್ಥೆಗಳು ಕೂಡ ತಲಾ ಎರಡು ರೂಪಾಯಿ ದರ ಹಚ್ಚಳ ಮಾಡಿವೆ.
ಹಬ್ಬಗಳ ಸೀಸನ್ನಲ್ಲೇ ಹಾಲಿನ ದರ ಏರಿಕೆಯಿಂದ ಇನ್ಮುಂದೆ ಗ್ರಾಹಕರಿಗೆ ಜೇಬಿಗೆ ಹೆಚ್ಚಿನ ಹೊರೆ ಬೀಳಲಿದೆ. ಗುಜರಾತ್ ಸಹಕಾರಿ ಹಾಲು ಮಾರಾಟ ಒಕ್ಕೂಟ (ಜಿಸಿಎಂಎಂಎಫ್) ಅಡಿ ಅಮುಲ್ ಬ್ರಾಂಡ್ನ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಮಾರಾಟ ಮಾಡಲಾಗುತ್ತಿದೆ.
ಇದೀಗ ಚುನಾವಣೆ ಎದುರಿಸುತ್ತಿರುವ ಗುಜರಾತ್ ಹೊರತುಪಡಿಸಿ ಎಲ್ಲೆಡೆ ಕೆನೆಭರಿತ ಹಾಲು ಮತ್ತು ಎಮ್ಮೆ ಹಾಲಿನ ದರವನ್ನು ಲೀಟರ್‌ಗೆ ಎರಡು ರೂಪಾಯಿ ಹೆಚ್ಚಿಸುವುದಾಗಿ ಅಮುಲ್ ಘೋಷಿಸಿದೆ. ಇದರಿಂದ ಕೆನೆಭರಿತ ಹಾಲು ಹಾಲಿನ ದರ ಲೀಟಲ್ಗೆ 61 ರೂ.ನಿಂದ 63 ರೂ.ಗೆ ಏರಿಕೆಯಾಗಿದೆ.
ಮತ್ತೊಂದು ಮದರ್ ಡೈರಿ ಕೂಡ ತನ್ನ ಹಾಲಿನ ಬೆಲೆಯನ್ನು ಎರಡು ರೂಪಾಯಿ ಹೆಚ್ಚಳ ಮಾಡಿದೆ. ಕೆನೆಭರಿತ ಹಾಲು ಮತ್ತು ಹಸುವಿನ ಹಾಲಿನ ದರ ಪ್ರತಿ ಲೀಟರ್‌ಗೆ ಎರಡು ರೂಪಾಯಿ ಏರಿಕೆ ಮಾಡಲಾಗಿದ್ದು, ಈ ಪರಿಷ್ಕೃತ ದರ ಭಾನುವಾರದಿಂದ (ಅಕ್ಟೋಬರ್ 16) ಜಾರಿಗೆ ಬರಲಿದೆ.