ಅಲಿಗಢ(ಉತ್ತರ ಪ್ರದೇಶ):ವಿಕಲಚೇತನರಿಗಾಗಿ ವಿನ್ಯಾಸಗೊಳಿಸಿದ ವಿಶೇಷ ಬೈಸಿಕಲ್‌ಗೆ ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದ ಬಾಲಕರ ಪಾಲಿಟೆಕ್ನಿಕ್ ಶಿಕ್ಷಕರೊಬ್ಬರು ಪೇಟೆಂಟ್ ಪಡೆದಿದ್ದಾರೆ. ಅಸೋಸಿಯೇಟ್ ಪ್ರೊಫೆಸರ್ ಶಂಶಾದ್ ಅಲಿ ಅವರು ಅಂಗವಿಕಲರಿಗಾಗಿ ವಿಶೇಷ ಸೈಕಲ್ ತಯಾರಿಸಿದ್ದಾರೆ. ಇದಕ್ಕಾಗಿ ಭಾರತ ಸರ್ಕಾರದ ಪೇಟೆಂಟ್ ಕಚೇರಿ ಅವರಿಗೆ ಪೇಟೆಂಟ್ ಸಂಖ್ಯೆ 4,41,899 ನೀಡಿದೆ. ಈ ಆವಿಷ್ಕಾರದಲ್ಲಿ ಸೈಕಲ್ನಲ್ಲಿ ಅಟ್ಯಾಚ್ ಮೆಂಟ್ ಮಾಡಲಾಗಿದ್ದು, ಸೈಕಲ್ನ್ನು ಹಿಂದಕ್ಕೆ ಎಳೆಯಲು ಚಕ್ರಗಳನ್ನು ಅಳವಡಿಸಲಾಗಿದೆ ಎಂದು ಶಂಶಾದ್ ಅಲಿ ತಿಳಿಸಿದ್ದಾರೆ.
ಸೈಕಲ್ನ ಚಕ್ರವು ಸ್ಥಿರವಾಗಿದ್ದಾಗ ಅಥವಾ ನಿಧನಾವಾಗಿ ಚಲಿಸುವಾಗ ಹೆಚ್ಚುವರಿಯಾಗಿ ಜೋಡಿಸಲಾಗಿರುವ ಚಕ್ರಗಳು ನೇರವಾಗಿಯೇ ಇರುತ್ತದೆ. ಇದರಿಂದ ಇನ್ನೊಬ್ಬ ವ್ಯಕ್ತಿಯ ಸಹಾಯವಿಲ್ಲದೇ ಕುಳಿತುಕೊಳ್ಳಬಹುದು. ಈ ಮೂಲಕ ಅಂಗವಿಕಲರು ತಾವು ಸೈಕಲ್ ಓಡಿಸಬಹುದು. ಯಾರ ಸಹಾಯವಿಲ್ಲದೇ ಸೈಕಲ್ ಓಡಿಸಲು ಸಾಧ್ಯವಾಗುವುದರಿಂದ ಅವರ ಆತ್ಮವಿಶ್ವಾಸವು ಹೆಚ್ಚುತ್ತದೆ ಎಂದು ಶಂಶಾದ್ ತಿಳಿಸಿದ್ದಾರೆ. ಇನ್ನು, ಯೂನಿವರ್ಸಿಟಿ ಪಾಲಿಟೆಕ್ನಿಕ್‌ನ ಪ್ರಾಂಶುಪಾಲರಾದ ಪ್ರೊಫೆಸರ್ ಅರ್ಷದ್ ಉಮರ್ ಅವರು ಶಂಶಾದ್ ಅಲಿ ಅವರ ಆವಿಷ್ಕಾರ ಹಾಗೂ ಅದಕ್ಕಾಗಿ ಪಡೆದ ಎಂಟನೇ ಪೇಟೆಂಟ್ಗಾಗಿ ಅವರನ್ನು ಅಭಿನಂದಿಸಿದರು.
ತಮ್ಮ ಆವಿಷ್ಕಾರದ ಕುರಿತು ಶಂಶಾದ್ ಅಲಿ ಪ್ರತಿಕ್ರಿಯಿಸಿ, ಬೈಸಿಕಲ್ ತನ್ನ ಸಾಮಾನ್ಯ ವೇಗವನ್ನು ಪಡೆದಾಗ, ವಿಶೇಷ ಹ್ಯಾಂಡಲ್‌ಗಳ ಸಹಾಯದಿಂದ ಕಡಿಮೆ ಶ್ರಮದ ಮೂಲಕ ಮತ್ತು ಸಹಾಯಕ ಚಕ್ರಗಳನ್ನು ನೆಲದ ಮೇಲೆ ಏರಿಸಬಹುದು. ವೇಗ ಕಡಿಮೆ ಮಾಡಲು ಅವುಗಳನ್ನು ಲಾಕ್ ಮಾಡಬಹುದು. ಬ್ರೇಕ್‌ಗಳನ್ನು ಅನ್ವಯಿಸುವ ಮೂಲಕ ಬೈಸಿಕಲ್ನ್ನು ನಿಲ್ಲಿಸಿದಾಗ ಅಥವಾ ನಿಧಾನಗೊಳಿಸಿದಾಗ, ಸೈಕಲ್ ನೇರವಾಗಿ ಇರಲು ಬೆಂಬಲ ಚಕ್ರಗಳು ಸ್ವಯಂಚಾಲಿತವಾಗಿ ಹಿಂತೆಗೆದುಕೊಳ್ಳುತ್ತವೆ. ಇದರಿಂದ ಚಾಲಕ ಬಿದ್ದು ಗಾಯಗೊಳ್ಳುವುದನ್ನು ತಪ್ಪಿಸಬಹುದು.