ಮುಂಬೈ (ಮಹಾರಾಷ್ಟ್ರ):ಎಂದಿಗೂ ನಿದ್ರಿಸದ ನಗರ ಎಂದೇ ಕರೆಯಲಾಗುವ ಮುಂಬೈನಲ್ಲಿ ಟ್ರಾಫಿಕ್ ಸಮಸ್ಯೆ ತಲೆನೋವಾಗಿ ಪರಿಣಮಿಸಿದೆ. ಮುಂಜಾನೆಯಿಂದ ಹಿಡಿದು ಮಧ್ಯರಾತ್ರಿಯಾದರೂ ಇಲ್ಲಿನ ಜನ ಜೀವನ ಎಂದಿನಂತೆ ಇರುತ್ತದೆ.
ಇಲ್ಲಿ ರಿಕ್ಷಾಗಳು, ಬಸ್‌ಗಳು, ರೈಲುಗಳು ಮತ್ತು ಮೆಟ್ರೋ ಸೇವೆಗಳು ಸದಾ ಲಭ್ಯವಿರುತ್ತವೆ. ಜನರು, ವಾಹನಗಳು ಕಿಂಚಿತ್ತೂ ಬಿಡುವು ಕೊಡದೇ ಸಂಚಾರ ನಡೆಸುವುದರಿಂದ ಟ್ರಾಫಿಕ್ ಸಮಸ್ಯೆ ಜನರ ಜೀವನದ ಮೇಲೆ ಭಾರಿ ಪರಿಣಾಮ ಬೀರಿದೆ. ಇದರಿಂದಾಗಿ ವಾಯು ಮಾಲಿನ್ಯವೂ ಹೆಚ್ಚುತ್ತಿದೆ.
ಮುಂಬೈ ಟ್ರಾಫಿಕ್ ಸಮಸ್ಯೆ ಕುರಿತು ಮಹಾರಾಷ್ಟ್ರ ಮಾಜಿ ಸಿಎಂ ದೇವೇಂದ್ರ ಫಡ್ನವೀಸ್ ಅವರ ಪತ್ನಿ ಅಮೃತಾ ಫಡ್ನವೀಸ್ ಪ್ರತಿಕ್ರಿಯೆ ನೀಡಿದ್ದಾರೆ. "ನಾನು ಸಾಮಾನ್ಯ ನಾಗರಿಕಳಾಗಿ ಹೇಳುತ್ತಿದ್ದೇನೆ, ನಾನು ಒಮ್ಮೆ ಹೊರಗೆ ಹೋದಾಗ ಗುಂಡಿಗಳು, ಟ್ರಾಫಿಕ್ ಸೇರಿದಂತೆ ಹಲವಾರು ಸಮಸ್ಯೆಗಳನ್ನು ಅನುಭವಿಸುತ್ತೇನೆ.