ಕರ್ನಾಟಕ

karnataka

ETV Bharat / bharat

ಖಲಿಸ್ತಾನ್ ಪರ ನಾಯಕ ಅಮೃತಪಾಲ್ ಸಿಂಗ್​ ಪರಾರಿ: ಪಂಜಾಬ್​ ಪೊಲೀಸರ ಪ್ರಕಟಣೆ

ಖಲಿಸ್ತಾನ್ ಪರ ನಾಯಕ ಅಮೃತಪಾಲ್ ಸಿಂಗ್​​ ಬಂಧನ ಸುದ್ದಿಯನ್ನು ಪಂಜಾಬ್​ ಪೊಲೀಸರು ಅಲ್ಲಗೆಳೆದಿದ್ದಾರೆ. ಬೃಹತ್​ ಕಾರ್ಯಾಚರಣೆ ನಡುವೆಯೂ ಆತ ಪರಾರಿಯಾಗಿದ್ದಾನೆ. ಇದೇ ವೇಳೆ 78 ಜನರನ್ನು ಬಂಧಿಸಲಾಗಿದೆ.

ಖಲಿಸ್ತಾನ್ ಪರ ನಾಯಕ ಅಮೃತಪಾಲ್ ಸಿಂಗ್​ ಪರಾರಿ
amritpal-singh-fugitive-police-teams-are-on-manhunt

By

Published : Mar 18, 2023, 10:44 PM IST

ಚಂಡೀಗಢ (ಪಂಜಾಬ್): ಖಲಿಸ್ತಾನ್ ಪರ ನಾಯಕ ಮತ್ತು ವಾರಿಸ್ ಪಂಜಾಬ್ ಸಂಘಟನೆಯ ಮುಖ್ಯಸ್ಥ ಅಮೃತಪಾಲ್ ಸಿಂಗ್​ ವಿರುದ್ಧ ಪಂಜಾಬ್​ ಪೊಲೀಸರು ದೊಡ್ಡ ಮಟ್ಟದ ಕಾರ್ಯಾಚರಣೆ ಆರಂಭಿಸಿದರೂ, ಆತನನ್ನು ಬಂಧಿಸಲು ಸಾಧ್ಯವಾಗಿಲ್ಲ. ಬಂಧನ ಕಾರ್ಯಾಚರಣೆ ವೇಳೆ ಅಮೃತಪಾಲ್ ಸಿಂಗ್ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಆದರೆ, ಇದೇ ಸಂದರ್ಭದಲ್ಲಿ ಆರು ಪ್ರಮುಖ ಆರು ಜನ ಸಹಚರರು ಸೇರಿ ಒಟ್ಟಾರೆ 78 ಮಂದಿಯನ್ನು ಬಂಧಿಸಲಾಗಿದೆ.

ಇತ್ತೀಚೆಗೆ ಅಮೃತಪಾಲ್ ಸಿಂಗ್ ಸಹಾಯಕ ಲವ್‌ಪ್ರೀತ್‌ನನ್ನು ಬಿಡುಗಡೆ ಮಾಡಿಸುವ ನಿಟ್ಟಿನಲ್ಲಿ ತನ್ನ ಬೆಂಬಲಿಗರನ್ನು ಅಮೃತಸರದ ಅಜ್ನಾಲಾ ಪೊಲೀಸ್ ಠಾಣೆಗೆ ನುಗ್ಗಿ ಪೊಲೀಸರಿಗೆ ಸವಾಲಾಗಿದ್ದ. ಆದ್ದರಿಂದ ಅಮೃತಪಾಲ್ ಸಿಂಗ್​ ನೇತೃತ್ವದ ವಾರಿಸ್ ಪಂಜಾಬ್ ದೇ (ಡಬ್ಲ್ಯುಪಿಡಿ) ವಿರುದ್ಧ ಪಂಜಾಬ್ ಪೊಲೀಸರು ಶನಿವಾರ ರಾಜ್ಯಾದ್ಯಂತ ಬೃಹತ್ ಕಾರ್ಡನ್ ಮತ್ತು ಸರ್ಚ್ ಆಪರೇಷನ್ಸ್ (Cordon And Search Operations - CASO) ಆರಂಭಿಸಿದ್ದರು.

ಇದನ್ನೂ ಓದಿ:ಪಂಜಾಬ್‌ನಲ್ಲಿ ಖಲಿಸ್ತಾನ್ ಘೋಷಣೆಯ ಪುನರುತ್ಥಾನ ಅನಾವರಣ..

ಅಮೃತಪಾಲ್ ಸಿಂಗ್ ಮತ್ತು ಸಹಚರರನ್ನು ಬಂಧಿಸಲು ಪೊಲೀಸರು ಬೆನ್ನಟ್ಟಿ ಸಾಗಿದ್ದರು. ಮಧ್ಯಾಹ್ನ ಜಲಂಧರ್ ಜಿಲ್ಲೆಯ ಶಾಕೋಟ್ ಮಲ್ಸಿಯನ್ ರಸ್ತೆಯಲ್ಲಿ ಏಳು ಜನರನ್ನು ಬಂಧಿಸಲಾಗಿದೆ. ಆದರೆ, ಇದೇ ವೇಳೆ ಅಮೃತಪಾಲ್ ಸಿಂಗ್ ಸೇರಿದಂತೆ ಇನ್ನೂ ಹಲವರು ಪರಾರಿಯಾಗಿದ್ದು, ಅವರನ್ನು ಸೆರೆ ಹಿಡಿಯಲು ಬೃಹತ್ ಶೋಧ ನಡೆಸಲಾಗಿದೆ ಎಂದು ಪೊಲೀಸರು ವಕ್ತಾರರು ಸ್ಪಷ್ಟನೆ ನೀಡಿದ್ದಾರೆ.

78 ಜನರ ಬಂಧನ: ರಾಜ್ಯಾದ್ಯಂತ ನಡೆಸಿದ ಸದ್ಯದ ಇಡೀ ಕಾರ್ಯಾಚರಣೆಯಲ್ಲಿ ಇದುವರೆಗೆ ಒಟ್ಟು 78 ಜನರನ್ನು ಬಂಧಿಸಲಾಗಿದೆ. ಇನ್ನೂ ಹಲವರನ್ನು ವಿಚಾರಣೆಗಾಗಿ ವಶಕ್ಕೆ ತೆಗೆದುಕೊಳ್ಳಲಾಗಿದೆ. ಒಂದು 315 ಬೋರ್ ರೈಫಲ್ ಮತ್ತು ಏಳು 12 ಬೋರ್‌ ರೈಫಲ್‌ಗಳು, ಒಂದು ರಿವಾಲ್ವರ್ ಮತ್ತು ವಿವಿಧ ಕ್ಯಾಲಿಬರ್‌ನ 373 ಜೀವಂತ ಕಾಟ್ರಿಡ್ಜ್‌ಗಳು ಸೇರಿದಂತೆ ಒಂಬತ್ತು ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ:ಖಲಿಸ್ತಾನ್​ ಬೆಂಬಲಿತ ಅಮೃತಪಾಲ್ ಸಿಂಗ್​ಗೆ​ ಪಾಕಿಸ್ತಾನದಿಂದ ಹಣದ ನೆರವು ಶಂಕೆ

ಸಮುದಾಯದ ವರ್ಗಗಳ ನಡುವೆ ವೈಮನಸ್ಸು ಹರಡುವುದು, ಕೊಲೆ ಯತ್ನ, ಪೊಲೀಸ್ ಸಿಬ್ಬಂದಿ ಮೇಲೆ ಮೇಲೆ ಹಲ್ಲೆ ಮತ್ತು ಸಾರ್ವಜನಿಕ ಸೇವೆಯಲ್ಲಿರುವವರ ಕಾನೂನುಬದ್ಧ ಕರ್ತವ್ಯ ನಿರ್ವಹಣೆಗೆ ಅಡ್ಡಿಪಡಿಸುವ ಸೇರಿದಂತೆ ನಾಲ್ಕು ಕ್ರಿಮಿನಲ್ ಪ್ರಕರಣಗಳಲ್ಲಿ ವಾರಿಸ್ ಪಂಜಾಬ್ ದೇ ಸಂಘಟನೆಯಲ್ಲಿ ಭಾಗಿಯಾಗಿದ್ದಾರೆ. ಕ್ರಿಮಿನಲ್ ಅಪರಾಧಗಳಲ್ಲಿ ಭಾಗಿಯಾಗಿರುವ ಎಲ್ಲ ವ್ಯಕ್ತಿಗಳನ್ನು ಕಾನೂನಿನ ಪ್ರಕಾರ ನಡೆದುಕೊಳ್ಳಬೇಕು. ಪೊಲೀಸರಿಗೆ ಬೇಕಾದ ಆರೋಪಿಗಳು ತಮ್ಮನ್ನು ತಾವೇ ಶರಣಾಗತಿಯಾಗಬೇಕೆಂದು ಪೊಲೀಸರು ತಮ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇದೇ ವೇಳೆ ಎಲ್ಲ ನಾಗರಿಕರು ಸುಳ್ಳು ಸುದ್ದಿ ಮತ್ತು ವದಂತಿಗಳಿಗೆ ಕಿವಿಗೊಡಬೇಡಿ ಎಂದು ಪೊಲೀಸರು ವಿನಂತಿಸಿದ್ದಾರೆ. ರಾಜ್ಯದಲ್ಲಿ ಪರಿಸ್ಥಿತಿ ಸಂಪೂರ್ಣ ಸ್ಥಿರವಾಗಿದೆ. ರಾಜ್ಯದಲ್ಲಿ ಶಾಂತಿ ಮತ್ತು ಸೌಹಾರ್ದತೆಯನ್ನು ಕದಡುವ ದುಷ್ಕೃತ್ಯಗಳಲ್ಲಿ ತೊಡಗಿರುವ ಎಲ್ಲ ವ್ಯಕ್ತಿಗಳ ವಿರುದ್ಧ ಕಟ್ಟುನಿಟ್ಟಾಗಿ ಕ್ರಮ ಜರುಗಿಸಲಾಗುತ್ತದೆ ಎಂದು ಎಚ್ಚರಿಸಿದ್ದಾರೆ. ಇನ್ನು, ಈ ಮೊದಲು ಅಮೃತಪಾಲ್ ಸಿಂಗ್​ನ​ ಬಂಧನವಾಗಿದೆ ಎಂದು ವರದಿಯಾಗಿತ್ತು. ಆದರೆ, ಇದೀಗ ಪೊಲೀಸರು ತಮ್ಮ ಕಾರ್ಯಾಚರಣೆ ಬಗ್ಗೆ ಪ್ರಕಟಣೆ ಹೊರಡಿಸಿದ್ದಾರೆ.

ಇದನ್ನೂ ಓದಿ:ಪಂಜಾಬ್‌ನಲ್ಲಿ ಖಲಿಸ್ತಾನ್ ಘೋಷಣೆಯ ಪುನರುತ್ಥಾನ ಅನಾವರಣ..

ABOUT THE AUTHOR

...view details