ಆಲಪ್ಪುಳ (ಕೇರಳ):ಕೇರಳದ ಅಲಪ್ಪುಳ ಜಿಲ್ಲೆಯಲ್ಲಿ ಪ್ರಾಥಮಿಕ ಅಮೀಬಿಕ್ ಮೆನಿಂಗೊ ಎನ್ಸೆಫಾಲಿಟಿಸ್ ಪ್ರಕರಣಯೊಂದು ವರದಿಯಾಗಿದೆ. ಪಾನವಳ್ಳಿ ಪಂಚಾಯತ್‌ನ 15 ವರ್ಷದ ಬಾಲಕ ಈ ಅಪರೂಪದ ಕಾಯಿಲೆಯಿಂದ ಸಾವನ್ನಪ್ಪಿದ್ದಾರೆ. ವಿದ್ಯಾರ್ಥಿಗೆ ಅಪರೂಪದ ರೋಗ ತಗುಲಿದೆ. ವಿದ್ಯಾರ್ಥಿಗೆ ಕಳೆದ ಭಾನುವಾರದಿಂದ ಅಲಪ್ಪುಳ ವೈದ್ಯಕೀಯ ಕಾಲೇಜಿನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಪಾನವಳ್ಳಿ ಪೂರ್ವ ಮೈತಾರದ ಅನಿಲ್ ಕುಮಾರ್ ಮತ್ತು ಶಾಲಿನಿ ದಂಪತಿಯ ಪುತ್ರ ಗುರುದತ್ (15) ಮೃತ ದುರ್ದೈವಿ. ಈ ಬಾಲಕ 10ನೇ ತರಗತಿ ಓದುತ್ತಿದ್ದ. ಹೊಳೆಯಲ್ಲಿ ಸ್ನಾನ ಮಾಡಿದ ಬಳಿಕ ಅಸ್ವಸ್ಥಗೊಂಡಿರುವುದಾಗಿ ವರದಿಯಾಗಿದೆ. ಕೆಸರಿನ ಜಲಮೂಲಗಳಲ್ಲಿ ನೇಗ್ಲೇರಿಯಾ ಫೌಲೆರಿ ಕಂಡುಬರುತ್ತವೆ. ಮನುಷ್ಯರು ಧುಮುಕಿದಾಗ ಮೂಗಿನ ಮೂಲಕ ತಲೆಯನ್ನು ತಲುಪಿ, ಮೆದುಳಿನ ಸೋಂಕು ಉಂಟಾಗುತ್ತದೆ. ಜೊತೆಗೆ ಜೀವಕ್ಕೂ ಹಾನಿಯಾಗಬಹುದು ಎಂದು ವೈದ್ಯರು ತಿಳಿಸಿದ್ದಾರೆ.
ಅಲಪ್ಪುಳ ಜಿಲ್ಲೆಯಲ್ಲಿ ಇದು ಎರಡನೇ ಬಾರಿಗೆ ಪ್ರಾಥಮಿಕ ಅಮೀಬಿಕ್ ಮೆನಿಂಗೊಎನ್ಸೆಫಾಲಿಟಿಸ್ ಕಾಯಿಲೆ ವರದಿಯಾಗಿದೆ. ಈ ರೋಗವು 2017ರಲ್ಲಿ ಅಲಪ್ಪುಳ ಪುರಸಭೆಯ ಪ್ರದೇಶದಲ್ಲಿ ಮೊದಲ ಬಾರಿಗೆ ವರದಿಯಾಗಿದೆ. ಅದಾದ ನಂತರ, ಈಗ ಈ ರೋಗವು ವರದಿಯಾಗುತ್ತಿದೆ.
ಅಮೀಬಿಕ್ ಮೆನಿಂಗೊಎನ್ಸೆಫಾಲಿಟಿಸ್ ರೋಗ ಲಕ್ಷಣಗಳೇನು?:ಪರಾವಲಂಬಿ ಸ್ವಭಾವವಿಲ್ಲದೇ ನೀರಿನಲ್ಲಿ ಮುಕ್ತವಾಗಿ ವಾಸಿಸುವ ಅಮೀಬಾ ವರ್ಗಕ್ಕೆ ಸೇರಿದ ರೋಗಕಾರಕಗಳು ಚರಂಡಿ ಅಥವಾ ಕೊಳಕು ನೀರಿನಲ್ಲಿ ಸ್ನಾನ ಮಾಡುವುದರಿಂದ ಮೂಗಿನ ತೆಳ್ಳಗಿನ ಚರ್ಮದ ಮೂಲಕ ಮಾನವ ದೇಹವನ್ನು ಪ್ರವೇಶಿಸುವ ಈ ಜೀವಿ ಮೆದುಳು ಜ್ವರವನ್ನು ಉಂಟು ಮಾಡುತ್ತದೆ. ಇದು ಮೆದುಳಿನ ಮೇಲೆ ಗಂಭೀರವಾದ ಪರಿಣಾಮ ಬೀರುತ್ತದೆ. ಇದರ ಮುಖ್ಯ ಲಕ್ಷಣಗಳು ಜ್ವರ, ತಲೆನೋವು, ವಾಂತಿ ಮತ್ತು ಮೂರ್ಛೆ. ಪ್ರಾಥಮಿಕ ಅಮೀಬಿಕ್ ಮೆನಿಂಗೊಎನ್ಸೆಫಾಲಿಟಿಸ್ (ಪಿಎಎಂ) ನೈಗ್ಲೇರಿಯಾ ಫೌಲೆರಿಯಿಂದ ಉಂಟಾಗುವ ಅಪರೂಪದ ಮೆದುಳಿನ ಸೋಂಕು. ನೇಗ್ಲೇರಿಯಾ ಫೌಲೆರಿ ಒಂದು ಅಮೀಬಾ. (ಸೂಕ್ಷ್ಮದರ್ಶಕವಿಲ್ಲದೆ ನೋಡಲು ತುಂಬಾ ಚಿಕ್ಕದಾಗಿರುವ ಏಕಕೋಶೀಯ ಜೀವಿ ಅಮೀಬಾ).
ಈ ಅಪರೂಪದ ಕಾಯಿಲೆ ಬಗ್ಗೆ ತಜ್ಞರು ಹೇಳುವುದೇನು?:ಕಲುಷಿತ ನೀರಿಗೆ ಒಡ್ಡಿಕೊಂಡ 1 ರಿಂದ 2 ವಾರಗಳಲ್ಲಿ ರೋಗ ಲಕ್ಷಣಗಳು ಪ್ರಾರಂಭವಾಗುತ್ತವೆ. ಕೆಲವೊಮ್ಮೆ ಮೊದಲ ಲಕ್ಷಣವೆಂದರೆ ವಾಸನೆ ಅಥವಾ ರುಚಿಯಲ್ಲಿ ಬದಲಾವಣೆ. ನಂತರ, ತಲೆನೋವು, ವಾಕರಿಕೆ ಮತ್ತು ವಾಂತಿ ಅನುಭವಿಸಬಹುದು. ಈ ರೋಗವನ್ನು ಆಂಫೋಟೆರಿಸಿನ್ ಬಿ, ಅಜಿಥ್ರೊಮೈಸಿನ್, ಫ್ಲುಕೋನಜೋಲ್, ರಿಫಾಂಪಿನ್, ಮಿಲ್ಟೆಫೋಸಿನ್ ಮತ್ತು ಡೆಕ್ಸಾಮೆಥಾಸೊನ್ ಸೇರಿದಂತೆ ಔಷಧಿಗಳೊಂದಿಗೆ ಚಿಕಿತ್ಸೆ ನೀಡಬಹುದು. ಈ ಔಷಧಿಗಳನ್ನು ಬಳಸುವುದರಿಂದ ನೇಗ್ಲೇರಿಯಾ ಫೌಲೆರಿ ವಿರುದ್ಧ ಪರಿಣಾಮಕಾರಿ ಎಂದು ತಜ್ಞರು ಹೇಳುತ್ತಾರೆ.
ಅಲಪ್ಪುಳ ಡಿಎಂಒ ಮಾಹಿತಿ:"ಕಲುಷಿತ ನೀರಿನಲ್ಲಿ ಸ್ನಾನ ಮಾಡುವುದು ಮತ್ತು ಅಶುದ್ಧ ನೀರಿನಿಂದ ಮುಖ ಮತ್ತು ಬಾಯಿ ತೊಳೆಯುವುದನ್ನು ಸಂಪೂರ್ಣವಾಗಿ ತಪ್ಪಿಸಬೇಕು. ಏಕೆಂದರೆ ಇದು ರೋಗಕ್ಕೆ ಕಾರಣವಾಗಬಹುದು. ಮಳೆ ಪ್ರಾರಂಭವಾದಾಗ ಸ್ಪ್ರಿಂಗ್ ತೆಗೆದ ಚರಂಡಿಗಳಲ್ಲಿ ಸ್ನಾನ ಮಾಡುವುದನ್ನು ಬಿಡಬೇಕು, ನೀರು ನಿಲ್ಲುವ ಪರಿಸ್ಥಿತಿಯನ್ನು ತಪ್ಪಿಸಬೇಕು" ಎಂದು ಅಲಪ್ಪುಳ ಡಿಎಂಒ ಹೇಳಿದರು.
ಇದನ್ನೂ ಓದಿ:ತುಮಕೂರು: ಕರ್ತವ್ಯನಿರತ ಸಹಾಯಕ ಸಬ್ ಇನ್ಸ್ಪೆಕ್ಟರ್ ಹೃದಯಾಘಾತದಿಂದ ಸಾವು