ಗುವಾಹಟಿ :ಹನ್ನೆರಡು ಗೇಜ್ನ 2 ಕಾರ್ಟನ್ಸ್ಗಳು, 70 ಎಂಎಂ ಕಾಟ್ರಿಡ್ಜ್ಗಳು ( ಒಟ್ಟು1000 ಸಾವಿರ) ಸೇರಿದಂತೆ ಅಪಾರ ಪ್ರಮಾಣದ ಮದ್ದುಗುಂಡುಗಳನ್ನು ತುಂಬಿಕೊಂಡಿದ್ದ, ಮ್ಯಾನ್ಮಾರ್‌ನ ನಂಬರ್ ಪ್ಲೇಟ್ ಹೊಂದಿದ್ದ ಯಾವುದೇ ಮಾನ್ಯ ದಾಖಲೆಗಳಿಲ್ಲದ ಬೈಕೊಂದನ್ನು ಅಸ್ಸೋಂ ರೈಫಲ್ಸ್‌ನ ಸೆರ್ಚಿಪ್ ಬೆಟಾಲಿಯನ್ ವಶಪಡಿಸಿಕೊಂಡಿದೆ.
ಮಿಝೋರಾಂನ ಮ್ಯಾನ್ಮಾರ್‌ನ ಗಡಿಯಲ್ಲಿ ಮದ್ದುಗುಂಡು ಇರುವ ಬಗ್ಗೆ ಗುಪ್ತಚರ ಇಲಾಖೆಯ ಖಚಿತ ಮಾಹಿತಿ ಮೇರೆಗೆ ಅಸ್ಸೋಂ ರೈಫಲ್ಸ್ ಶೋಧ ಕಾರ್ಯಾಚರಣೆ ನಡೆಸಿತ್ತು. ಈ ವೇಳೆ ಬೈಕ್ನಲ್ಲಿ ಮದ್ದುಗುಂಡು ಪತ್ತೆಯಾಗಿದೆ. ವಶಪಡಿಸಿಕೊಂಡ ಮದ್ದುಗುಂಡು ಮತ್ತು ಬೈಕ್ ಅನ್ನು ಚಾಂಫೈ ಜಿಲ್ಲೆಯ ಜೋಖಾವ್ತರ್ ಪೊಲೀಸರಿಗೆ ಹಸ್ತಾಂತರಿಸಲಾಗಿದೆ.