ಮಧುರೈ: ಮಾಜಿ ಮುಖ್ಯಮಂತ್ರಿ ಜೆ.ಜಯಲಲಿತಾ ಅವರ ಆಪ್ತ ಸಹಾಯಕಿ ಶಶಿಕಲಾ ನಟರಾಜನ್ ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಎಎಂಎಂಕೆ ಕಾರ್ಯಕರ್ತರು ಮಧುರೈನ ದೇವಸ್ಥಾನವೊಂದರಲ್ಲಿ ಪ್ರಾರ್ಥನೆ ಸಲ್ಲಿಸಿದರು.
ಶಶಿಕಲಾ ಅವರನ್ನ ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಗೆ (ಬಿಎಂಸಿಆರ್ಐ) ದಾಖಲಿಸಲಾಗಿದೆ. ಅವರ ನಾಡಿ ಮಿಡಿತ ನಿಮಿಷಕ್ಕೆ 77 ಮತ್ತು ರಕ್ತದೊತ್ತಡ 149/64 ಇದೆ ಎಂದು ವೈದ್ಯಕೀಯ ಕಾಲೇಜು ತಿಳಿಸಿದ್ದು, ತೀವ್ರ ನಿಗಾ ಘಟಕದ ವಾರ್ಡ್ನಲ್ಲಿ ಚಿಕಿತ್ಸೆ ಮುಂದುವರಿಸಲಾಗಿದೆ.