ಕರ್ನಾಟಕ

karnataka

ETV Bharat / bharat

ಕೋಟಿ ವೆಚ್ಚದಲ್ಲಿ ಏಕ ಶಿಲೆಯ 'ಅಮ್ಮನ ದೇಗುಲ' ನಿರ್ಮಿಸುತ್ತಿರುವ ಪುತ್ರ..

ಶ್ರವಣಕುಮಾರ್ ತಾಯಿ ಅನಸೂಯಾ ದೇವಿ 2008ರಲ್ಲಿ ನಿಧನರಾಗಿದ್ದರು. ಅನಸೂಯಾ ದೇವಿ ಅವರಿಗೆ ಮೊದಲು ಅವಳಿ ಮಕ್ಕಳು ಜನಿಸಿದ್ದವು. ಆದರೆ, ಒಂದು ಮಗು ಹುಟ್ಟಿದ ಕೆಲವೇ ದಿನಗಳಲ್ಲಿ ಮೃತಪಟ್ಟಿತ್ತು. ಮತ್ತೊಬ್ಬ ಮಗ 9ನೇ ವಯಸ್ಸಿನಲ್ಲಿ ಕ್ಯಾನ್ಸರ್​ನಿಂದ ಸಾವನ್ನಪ್ಪಿದ್ದ. ಇದರ ನಂತರ ಜನಿಸಿದ್ದೇ ಈ ಶ್ರವಣಕುಮಾರ್..

Amma temple built in AP
ಏಕ ಶಿಲೆಯ ಅಮ್ಮನ ದೇಗುಲ

By

Published : May 8, 2022, 5:44 PM IST

ಶ್ರೀಕಾಕುಳಂ (ಆಂಧ್ರ ಪ್ರದೇಶ): ಅಮ್ಮ ಎಂದರೆ ಪ್ರತಿಯೊಬ್ಬರಿಗೂ ವಿಶೇಷ ಪ್ರೀತಿ, ಗೌರವ ಇದ್ದೇ ಇರುತ್ತದೆ. ಅಮ್ಮನ ನೆಪನಲ್ಲಿ ಸ್ಮಾರಕಗಳು, ಸಣ್ಣ ದೇವಸ್ಥಾನಗಳನ್ನು ಕಟ್ಟುವ ಮೂಲಕ ಇತ್ತೀಚಿಗೆ ಸ್ಮರಿಸುವುದು ಸಾಮಾನ್ಯ. ಆದರೆ, ಇಲ್ಲೊಬ್ಬ ಪುತ್ರ ತಮ್ಮ ತಾಯಿ ಹೆಸರಲ್ಲಿ ಕೋಟ್ಯಂತರ ವೆಚ್ಚದಲ್ಲಿ ಭವ್ಯ ಮತ್ತು ವಿಶೇಷವಾದ ದೇಗುಲ ನಿರ್ಮಾಣ ಮಾಡುತ್ತಿದ್ದಾರೆ.

ಆಂಧ್ರಪ್ರದೇಶದ ಶ್ರೀಕಾಕುಳಂ ಜಿಲ್ಲೆಯ ಚಿಮಲವಲಸ ಗ್ರಾಮದ ಸನಪಾಲ ಶ್ರವಣಕುಮಾರ್ ಎಂಬುವರು ತಮ್ಮ ತಾಯಿಗೆ ಏಕಶಿಲಾ ಮಂದಿರ ನಿರ್ಮಿಸುತ್ತಿದ್ದಾರೆ. ಸಂಪೂರ್ಣ ದೇವಾಲಯವನ್ನು ಒಂದೇ ಕಪ್ಪು ಶಿಲೆಯಲ್ಲಿ ನಿರ್ಮಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಹೈದರಾಬಾದ್‌ನಲ್ಲಿ ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ತೊಡಗಿರುವ ಶ್ರವಣಕುಮಾರ್, ತಮ್ಮ ತಾಯಿಯ ಮೇಲಿನ ಪ್ರೀತಿಯಿಂದ 2019ರಿಂದಲೇ ದೇವಸ್ಥಾನ ನಿರ್ಮಿಸಲು ಆರಂಭಿಸಿದ್ದಾರೆ.

ಶ್ರವಣಕುಮಾರ್ ತಾಯಿ ಅನಸೂಯಾ ದೇವಿ 2008ರಲ್ಲಿ ನಿಧನರಾಗಿದ್ದರು. ಅನಸೂಯಾ ದೇವಿ ಅವರಿಗೆ ಮೊದಲು ಅವಳಿ ಮಕ್ಕಳು ಜನಿಸಿದ್ದವು. ಆದರೆ, ಒಂದು ಮಗು ಹುಟ್ಟಿದ ಕೆಲವೇ ದಿನಗಳಲ್ಲಿ ಮೃತಪಟ್ಟಿತ್ತು. ಮತ್ತೊಬ್ಬ ಮಗ 9ನೇ ವಯಸ್ಸಿನಲ್ಲಿ ಕ್ಯಾನ್ಸರ್​ನಿಂದ ಸಾವನ್ನಪ್ಪಿದ್ದ. ಇದರ ನಂತರ ಜನಿಸಿದ್ದೇ ಈ ಶ್ರವಣಕುಮಾರ್.

ಹೀಗಾಗಿ, ಶ್ರವಣಕುಮಾರ್​ರನ್ನು ಅನಸೂಯಾ ತುಂಬಾ ಪ್ರೀತಿಯಿಂದ ಬೆಳೆಸಿದ್ದರು. ತಾಯಿ ಬಗ್ಗೆಯೂ ಮಗನಿಗೆ ತುಂಬಾ ಗೌರವ ಇತ್ತು. ಆದ್ದರಿಂದ ಅಮ್ಮನ ನೆನಪುಗಳನ್ನು ಅಮರವಾಗಿರಿಸಲು ಈ ಮಂದಿರ ನಿರ್ಮಾಣ ಮಾಡುತ್ತಿದ್ದಾರೆ. ಯಾದಾದ್ರಿಯ ಲಕ್ಷ್ಮೀನರಸಿಂಹಸ್ವಾಮಿ ದೇವಾಲಯದ ನಿರ್ಮಾಣ ಕಾರ್ಯದ ಸಂಸ್ಥಾಪಕ ಚಿರಂಜೀವಿ ಮಾರ್ಗದರ್ಶನದಲ್ಲಿ ಈ ಅಮ್ಮನ ದೇವಸ್ಥಾನ ನಿರ್ಮಿಸಲಾಗುತ್ತಿದೆ. ಇದು ಇನ್ನೆರಡು ವರ್ಷಗಳಲ್ಲಿ ಪೂರ್ಣಗೊಳ್ಳಲಿದೆ ಅಂತೆ.

ಇದನ್ನೂ ಓದಿ:ಮಂಟಪದಲ್ಲಿ ತಾಯಿಯ ಪಕ್ಕ ತಂದೆಯ ಮೇಣದ ಪ್ರತಿಮೆ ಕೂರಿಸಿ ಮದುವೆಯಾದ ಮಗ!

ABOUT THE AUTHOR

...view details