ಕರ್ನಾಟಕ

karnataka

ETV Bharat / bharat

ದೆಹಲಿಯ ಸೋಪಾನ್ ಬಂಗಲೆಯನ್ನೇ ಮಾರಿದ ಅಮಿತಾಭ್​ ಬಚ್ಚನ್​: ಕಾರಣ? - ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ಮನೆ ಮಾರಾಟ

Amitabh Bachchan sales his Delhi house: ದೆಹಲಿಯ ಗುಲ್‌ಮೊಹರ್ ಪಾರ್ಕ್‌ನಲ್ಲಿರುವ ಮನೆಯನ್ನು ಅಮಿತಾಭ್ ಬಚ್ಚನ್ 23 ಕೋಟಿ ರೂ.ಗೆ ಮಾರಾಟ ಮಾಡಿದ್ದಾರೆ.

ದೆಹಲಿಯ ಸೋಪಾನ್ ಬಂಗಲೆಯನ್ನೇ  23 ಕೋಟಿಗೆ ಮಾರಿದ ಅಮಿತಾಭ್​ ಬಚ್ಚನ್
ದೆಹಲಿಯ ಸೋಪಾನ್ ಬಂಗಲೆಯನ್ನೇ 23 ಕೋಟಿಗೆ ಮಾರಿದ ಅಮಿತಾಭ್​ ಬಚ್ಚನ್

By

Published : Feb 3, 2022, 4:11 PM IST

ಹೈದರಾಬಾದ್: ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ಬಗ್ಗೆ ದೊಡ್ಡ ಸುದ್ದಿಯೊಂದು ಹೊರಬಿದ್ದಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿನ ಗುಲ್‌ಮೊಹರ್ ಪಾರ್ಕ್‌ನಲ್ಲಿರುವ ಮನೆಯನ್ನು ಬಿಗ್‌ಬಿ 23 ಕೋಟಿ ರೂಪಾಯಿಗೆ ಮಾರಾಟ ಮಾಡಿದ್ದಾರೆ. ಅಮಿತಾಭ್ ಬಚ್ಚನ್ ಅವರ ಪೋಷಕರಾದ ತೇಜಿ ಬಚ್ಚನ್ ಮತ್ತು ಹರಿವಂಶ್ ರಾಯ್ ಬಚ್ಚನ್ ಈ ಮನೆಯಲ್ಲಿ ವಾಸಿಸುತ್ತಿದ್ದರು.

ಮಾಧ್ಯಮಗಳ ವರದಿ ಪ್ರಕಾರ, ಈ ಮನೆಯ ನೋಂದಣಿ ಕಾರ್ಯ ಕಳೆದ ವರ್ಷವಷ್ಟೇ ನಡೆದಿದೆ. ಮನೆಯನ್ನು ನೆಜೋನ್ ಗ್ರೂಪ್‌ನ ಸಿಇಒ ಅವ್ನಿ ಬೇಡರ್‌ಗೆ ಮಾರಾಟ ಮಾಡಿದ್ದಾರೆ. ಕಳೆದ ವರ್ಷ ಡಿಸೆಂಬರ್ 7 ರಂದು ಬೇಡರ್ ಈ ಆಸ್ತಿಯನ್ನು ತಮ್ಮ ಹೆಸರಿಗೆ ನೋಂದಾಯಿಸಿಕೊಂಡಿದ್ದರು.

ಇದನ್ನೂ ಓದಿ: ಅಪ್ಪು ಸಮಾಧಿಗೆ ಭೇಟಿ ನೀಡಿ ಅಲ್ಲು ನಮನ: ಪುನೀತ್​ ಜೊತೆ ಕೊನೆಯ ಮಾತು ನೆನೆದ ಸ್ಟೈಲಿಶ್​ ಸ್ಟಾರ್

ವರದಿ ಪ್ರಕಾರ ಅವ್ನಿ ಮತ್ತು ಬಿಗ್ ಬಿ ಕುಟುಂಬ ಕಳೆದ 35 ವರ್ಷಗಳಿಂದ ಪರಿಚಿತರು. ಬಿಗ್ ಬಿ ತಮ್ಮ ವೃತ್ತಿಜೀವನದ ಆರಂಭದಿಂದಲೂ ಮುಂಬೈನಲ್ಲಿ ವಾಸಿಸುತ್ತಿದ್ದಾರೆ. ಇದರಿಂದಾಗಿ ಈ ಬಂಗಲೆಯನ್ನು ನೋಡಿಕೊಳ್ಳುವುದು ಕಷ್ಟಕರವಾಗಿತ್ತು. ಪರಿಣಾಮ ಅಮಿತಾಬ್ ಬಚ್ಚನ್ ತಮ್ಮ ಮನೆಯನ್ನು ಮಾರಲು ನಿರ್ಧರಿಸಿದ್ದರು.

ABOUT THE AUTHOR

...view details