ಕರ್ನಾಟಕ

karnataka

ETV Bharat / bharat

ಕಾಲೇಜು ದಿನಗಳ 'ಮೋಡದ ಮೇಲಿನ ಮಹಾರಾಜ'ನ ಬ್ಯಾನರ್​​ ಜಾಹೀರಾತು ನೆನಪಿಸಿಕೊಂಡ ಬಿಗ್‌ಬಿ - Amitabh Bachchan recalls Air India iconic ad from college days

ಏರ್​ ಇಂಡಿಯಾ ಜನವರಿಯಲ್ಲಿ ಅದರ ಸಂಸ್ಥಾಪಕರಾದ ಟಾಟಾ ಗ್ರೂಪ್‌ನ ಕೈಗೆ ಮರಳಿತು. ಸ್ಪರ್ಧಾತ್ಮಕ ಬಿಡ್ಡಿಂಗ್ ಪ್ರಕ್ರಿಯೆಯ ನಂತರ, ಸರ್ಕಾರವು ಕಳೆದ ವರ್ಷ ಅಕ್ಟೋಬರ್ 8ರಂದು ಏರ್ ಇಂಡಿಯಾವನ್ನು ಟಾಟಾ ಸಮೂಹದ ಹಿಡುವಳಿ ಕಂಪನಿಯ ಅಂಗಸಂಸ್ಥೆಯಾದ ಟ್ಯಾಲೇಸ್ ಪ್ರೈವೇಟ್ ಲಿಮಿಟೆಡ್‌ಗೆ 18,000 ಕೋಟಿ ರೂ.ಗೆ ಮಾರಾಟ ಮಾಡಿತ್ತು..

Amitabh Bachchan recalls Air India iconic ad from college days
ಐಕಾನಿಕ್​ ಏರ್​ಲೈನರ್ ಬ್ಯಾನರ್​​ ಜಾಹೀರಾತೊಂದನ್ನು ನಟ ಅಮಿತಾಬ್​ ಬಚ್ಚನ್​

By

Published : Feb 14, 2022, 3:51 PM IST

ಮುಂಬೈ (ಮಹಾರಾಷ್ಟ್ರ):ಇತ್ತೀಚೆಗೆ ಏರ್​​ ಇಂಡಿಯಾವನ್ನು ಮರಳಿ ಟಾಟಾ ಕಂಪನಿಗೆ ಮಾರಾಟ ಮಾಡಲಾಗಿದೆ. ಇದರ ನಡುವೆ ನಟ ಅಮಿತಾಬ್​​ ಬಚ್ಚನ್​​ ತಮ್ಮ ಕಾಲೇಜು ದಿನಗಳಲ್ಲಿದ್ದ ಐಕಾನಿಕ್​ ಏರ್​ಲೈನರ್ ಬ್ಯಾನರ್​​ ಜಾಹೀರಾತೊಂದನ್ನು ನೆನಪಿಸಿಕೊಂಡಿದ್ದಾರೆ.

ದೆಹಲಿ ವಿಶ್ವವಿದ್ಯಾನಿಲಯದ ಕಿರೋರಿ ಮಾಲ್ ಕಾಲೇಜಿನಲ್ಲಿ ನಟ ಓದುತ್ತಿದ್ದರು. ಈ ವೇಳೆ ಕಾಲೇಜಿಗೆ ಪ್ರಯಾಣಿಸುವಾಗ ನಗರದ ಹೃದಯಭಾಗದಲ್ಲಿರುವ ಕನ್ನಾಟ್ ಪ್ಲೇಸ್‌ನಲ್ಲಿರುವ ಕಟ್ಟಡವೊಂದರಲ್ಲಿ ಏರ್ ಇಂಡಿಯಾದ ಬ್ಯಾನರ್ ಜಾಹೀರಾತನ್ನು ನೋಡುತ್ತಿದ್ದರು.

"ನಾನು 50ರ ದಶಕದ ನವದೆಹಲಿಯ ಕನ್ನಾಟ್ ಪ್ಲೇಸ್‌ನಲ್ಲಿರುವ ಕಟ್ಟಡವೊಂದರ ಮೇಲಿನ ಬ್ಯಾನರ್ ಜಾಹೀರಾತನ್ನು ನೆನಪಿಸಿಕೊಳ್ಳುತ್ತಿದ್ದೇನೆ. ನಾನು ಯುನಿವ್ ಸ್ಪೆಷಲ್‌ನಲ್ಲಿ ವಿಶ್ವವಿದ್ಯಾಲಯಕ್ಕೆ ಪ್ರಯಾಣಿಸುವಾಗ ಪ್ರತಿನಿತ್ಯ ಜಾಹೀರಾತು ನೋಡುತ್ತಿದ್ದೆ ಎಂದು ಬಿಗ್ ಬಿ ಭಾನುವಾರ ತಡರಾತ್ರಿ ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ:ಕೇರಳದಲ್ಲಿ ಪ್ರೇಮಿಗಳ ದಿನದಂದು ಸಪ್ತಪದಿ ತುಳಿದ ಸಲಿಂಗಿ ಜೋಡಿ.. ದೇಶದಲ್ಲಿ ಇದೇ ಮೊದಲು

ಏರ್​ ಇಂಡಿಯಾ ಜನವರಿಯಲ್ಲಿ ಅದರ ಸಂಸ್ಥಾಪಕರಾದ ಟಾಟಾ ಗ್ರೂಪ್‌ನ ಕೈಗೆ ಮರಳಿತು. ಸ್ಪರ್ಧಾತ್ಮಕ ಬಿಡ್ಡಿಂಗ್ ಪ್ರಕ್ರಿಯೆಯ ನಂತರ, ಸರ್ಕಾರವು ಕಳೆದ ವರ್ಷ ಅಕ್ಟೋಬರ್ 8ರಂದು ಏರ್ ಇಂಡಿಯಾವನ್ನು ಟಾಟಾ ಸಮೂಹದ ಹಿಡುವಳಿ ಕಂಪನಿಯ ಅಂಗಸಂಸ್ಥೆಯಾದ ಟ್ಯಾಲೇಸ್ ಪ್ರೈವೇಟ್ ಲಿಮಿಟೆಡ್‌ಗೆ 18,000 ಕೋಟಿ ರೂ.ಗೆ ಮಾರಾಟ ಮಾಡಿತ್ತು.

ಒಪ್ಪಂದದ ಭಾಗವಾಗಿ, ಟಾಟಾ ಸಮೂಹಕ್ಕೆ ಏರ್ ಇಂಡಿಯಾ ಎಕ್ಸ್‌ಪ್ರೆಸ್ ಮತ್ತು ಗ್ರೌಂಡ್ ಹ್ಯಾಂಡ್ಲಿಂಗ್ ಆರ್ಮ್ ಏರ್ ಇಂಡಿಯಾ ಎಸ್‌ಎಟಿಎಸ್‌ನಲ್ಲಿ ಶೇ.50ರಷ್ಟು ಪಾಲನ್ನು ಹಸ್ತಾಂತರಿಸಲಾಯಿತು.

For All Latest Updates

ABOUT THE AUTHOR

...view details