ಕರ್ನಾಟಕ

karnataka

ETV Bharat / bharat

ಕಾಶ್ಮೀರದಲ್ಲಿ ಅಮಿತ್ ಶಾ ಭಾಷಣ.. ಶೋಪಿಯಾನ್, ಪುಲ್ವಾಮಾದಲ್ಲಿ ಉಗ್ರರಿಂದ ಗ್ರೆನೇಡ್​ ಸ್ಫೋಟ - Twin grenade attacks in Kashmir

ಜಮ್ಮು ಪ್ರವಾಸದಲ್ಲಿರುವ ಅಮಿತ್ ಶಾ ಸಿಆರ್​ಪಿಎಫ್​ ರೈಸಿಂಗ್​ ದಿನದ ಪರೇಡ್ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದರು. ಇದರ ಬೆನ್ನಲ್ಲೇ ದಕ್ಷಿಣ ಕಾಶ್ಮೀರದ ಎರಡು ಪ್ರದೇಶಗಳಲ್ಲಿ ಉಗ್ರರಿಂದ ಗ್ರೆನೇಡ್ ದಾಳಿ ನಡೆದಿದೆ.

Twin grenade attacks in Kashmir
Twin grenade attacks in Kashmir

By

Published : Mar 19, 2022, 9:56 PM IST

ಶ್ರೀನಗರ(ಜಮ್ಮು-ಕಾಶ್ಮೀರ):ಕೇಂದ್ರ ಗೃಹ ಸಚಿವ ಅಮಿತ್ ಶಾ ಎರಡು ದಿನಗಳ ಜಮ್ಮು-ಕಾಶ್ಮೀರ ಪ್ರವಾಸದಲ್ಲಿದ್ದಾರೆ. ಇಂದು ಸೆಂಟ್ರಲ್​ ರಿಸರ್ವ್​ ಪೊಲೀಸ್ ಪೋರ್ಸ್​​​(CRPF)83ನೇ ರೈಸಿಂಗ್​ ಡೇ ಪರೇಡ್​​ನಲ್ಲಿ ಭಾಗಿಯಾಗಿ ಮಾತನಾಡಿದರು. ಅವರು ಭಾಷಣ ಮಾಡಿದ ಕೆಲ ಗಂಟೆಯಲ್ಲೇ ಕಾಶ್ಮೀರದ ಎರಡು ಪ್ರದೇಶಗಳಲ್ಲಿ ಉಗ್ರರು ದಾಳಿ ನಡೆಸಿದ್ದಾರೆ. ಶೋಪಿಯಾನ್​ ಮತ್ತು ಪುಲ್ವಾಮಾದಲ್ಲಿ ದಾಳಿ ನಡೆದಿದ್ದು, ಇಬ್ಬರು ಸಿಆರ್​​ಪಿಎಫ್​ ಸಿಬ್ಬಂದಿ ಗಾಯಗೊಂಡಿದ್ದಾರೆ.

ರಾತ್ರಿ 8 ಗಂಟೆ ವೇಳೆ ಶೋಪಿಯಾನ್​​ನ ಜೈನಾಪೋರಾ ಪ್ರದೇಶದಲ್ಲಿನ ಸಿಆರ್​​ಪಿಎಫ್​​ ಶಿಬಿರದ ಮೇಲೆ ಉಗ್ರರು ಗ್ರೆನೇಡ್ ದಾಳಿ ನಡೆಸಿದ್ದು, ಈ ವೇಳೆ ಓರ್ವ ಸಿಬ್ಬಂದಿ ಗಾಯಗೊಂಡಿದ್ದಾಗಿ ತಿಳಿದು ಬಂದಿದೆ.

ಇದರ ಬೆನ್ನಲ್ಲೇ ಪುಲ್ವಾಮಾದ ನೌದಲ್​ ಗ್ರಾಮದಲ್ಲೂ ಸ್ಫೋಟವಾಗಿದ್ದು, ಸಿಆರ್​ಪಿಎಫ್​ ಸಿಬ್ಬಂದಿ ಗಾಯಗೊಂಡಿದ್ದಾರೆ. ಇಬ್ಬರನ್ನು ವೈದ್ಯಕೀಯ ಚಿಕಿತ್ಸೆಗೋಸ್ಕರ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ:ಆರ್ಟಿಕಲ್​ 370ರ ನಿರ್ಮೂಲನೆ ನಂತರ ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರಜಾಪ್ರಭುತ್ವಕ್ಕೆ ನಿಜವಾದ ಅರ್ಥ ಬಂತು : ಅಮಿತ್​ ಶಾ

ಗೃಹ ಸಚಿವ ಅಮಿತ್ ಶಾ ಜಮ್ಮು ಪ್ರವಾಸ ಕೈಗೊಂಡ ಸಂದರ್ಭದಲ್ಲೇ ಈ ಘಟನೆ ನಡೆದಿದೆ. ಜಮ್ಮು-ಕಾಶ್ಮೀರದಲ್ಲಿ ಮಾತನಾಡಿದ್ದ ಗೃಹ ಸಚಿವರು, ಕಾಶ್ಮೀರದಲ್ಲಿ ಪಾಕ್​ ಪ್ರಾಯೋಜಿತ ಭಯೋತ್ಪಾದನೆ ಹೊಡೆದು ಹಾಕಲು ನಿರ್ಣಾಯಕ ಕ್ರಮ ಕೈಗೊಳ್ಳಲಾಗುತ್ತಿದೆ ಎಂದಿದ್ದರು.

ABOUT THE AUTHOR

...view details