ಶ್ರೀನಗರ(ಜಮ್ಮು):ಕೇಂದ್ರ ಗೃಹ ಸಚಿವ ಅಮಿತ್ ಶಾ ನಾಳೆಯಿಂದ ಎರಡು ದಿನಗಳ ಕಾಲ ಜಮ್ಮು ಪ್ರವಾಸ ಕೈಗೊಳ್ಳಲಿದ್ದು, ಭದ್ರತೆ ಸೇರಿದಂತೆ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆ.
ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ, ಕೇಂದ್ರ ಸಶಸ್ತ್ರ ಪಡೆ, ಕಾಶ್ಮೀರ ಪೊಲೀಸ್, ಗುಪ್ತಚರ ಸಂಸ್ಥೆಗಳ ಅಧಿಕಾರಿಗಳೊಂದಿಗೆ ಅಲ್ಲಿನ ಭದ್ರತಾ ಪರಿಸ್ಥಿತಿ ಬಗ್ಗೆ ಉನ್ನತ ಮಟ್ಟದ ಸಭೆ ನಡೆಸಲಿರುವ ಅಮಿತ್ ಶಾ, ಮಾರ್ಚ್ 19ರಂದು ಜಮ್ಮುವಿನಲ್ಲಿ ಆಯೋಜನೆಗೊಂಡಿರುವ ಸಿಆರ್ಪಿಎಫ್ನ ರೈಸಿಂಗ್ ಡೇ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗಿಯಾಗಲಿದ್ದಾರೆ.