ರಾಯಪುರ್ (ಛತ್ತೀಸ್ಗಡ):ನಕ್ಸಲರೊಂದಿಗೆ ನಡೆದ ಭೀಕರ ಕಾಳಗದಲ್ಲಿ ಮಡಿದ ಯೋಧರ ಕುಟುಂಬಸ್ಥರು ಹಾಗು ಭದ್ರತಾ ಪಡೆಗಳಿಗೆ ಇಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಧೈರ್ಯ ತುಂಬಲಿದ್ದಾರೆ.
ಇದೇ ಹಿನ್ನೆಲೆಯಲ್ಲಿ ಚುನಾವಣಾ ಪ್ರಚಾರ ಸಭೆಗಳನ್ನು ಮೊಟಕುಗೊಳಿಸಿರುವ ಅವರು ಛತ್ತೀಸ್‌ಗಢಕ್ಕೆ ತೆರಳಿ ದಾಳಿ ನಡೆದ ಸ್ಥಳ ಹಾಗು ಗಾಯಗೊಂಡ ಯೋಧರನ್ನು ಭೇಟಿ ಮಾಡಲಿದ್ದಾರೆ.
ಇಲ್ಲಿನ ಸುಕ್ಮಾ-ಬಿಜಾಪುರ್ ಎಂಬಲ್ಲಿ ಭದ್ರತಾ ಪಡೆಗಳು ಮತ್ತು ನಕ್ಸಲರ ನಡುವಿನ ಕಾಳಗದಲ್ಲಿ 22 ಮಂದಿ ಭದ್ರತಾ ಸಿಬ್ಬಂದಿ ಹುತಾತ್ಮರಾದ ಘಟನೆ ನಿನ್ನೆ ನಡೆದಿತ್ತು.
ಇದನ್ನೂಓದಿ : ಛತ್ತೀಸ್‌ಗಡದಲ್ಲಿ ನಕ್ಸಲರ ಅಟ್ಟಹಾಸ: ಗುಂಡಿನ ಕಾಳಗದಲ್ಲಿ 22 ಮಂದಿ ಭದ್ರತಾ ಸಿಬ್ಬಂದಿ ಹುತಾತ್ಮ
'ಗುಪ್ತಚರ ವೈಫಲ್ಯವಿಲ್ಲ'
ಗುಪ್ತಚರ ಅಥವಾ ಕಾರ್ಯಾಚರಣೆಯ ವೈಫಲ್ಯವಿದೆ ಎಂದು ಹೇಳುವುದರಲ್ಲಿ ಯಾವುದೇ ಅರ್ಥವಿಲ್ಲ. ಇದು ಗುಪ್ತಚರ ವೈಫಲ್ಯವಾಗಿದ್ದರೆ, ಪಡೆಗಳು ಕಾರ್ಯಾಚರಣೆಗೆ ಹೋಗುತ್ತಿರಲಿಲ್ಲ. ಕಾರ್ಯಾಚರಣೆಯ ವೈಫಲ್ಯವಿದ್ದರೆ, ಅನೇಕ ನಕ್ಸಲರನ್ನು ಬಲಿ ಪಡೆಯುತ್ತಿರಲಿಲ್ಲ ಎಂದು ಸಿಆರ್‌ಪಿಎಫ್ ಡಿಜಿ ತಿಳಿಸಿದ್ದಾರೆ.
ಇದನ್ನೂ ಓದಿ: ನಕ್ಸಲ್ ವಿರುದ್ಧದ ಕಾರ್ಯಾಚರಣೆ ಮುಂದುವರೆಯಲಿದೆ: ಸಿಎಂ ಭೂಪೇಶ್ ಬಾಗೇಲ್