ಕರ್ನಾಟಕ

karnataka

ETV Bharat / bharat

ಅಮಿತ್ ಶಾ ಮಿಷನ್ ಸೌರಾಷ್ಟ್ರ: ನಾಳೆ ಸೋಮನಾಥ್​ದಲ್ಲಿ ಚಿಂತನ್ ಶಿಬಿರ - ಸೌರಾಷ್ಟ್ರ ಮಟ್ಟದ ಚಿಂತನ್ ಶಿಬಿರ

ಬಿಜೆಪಿಯ ಸೌರಾಷ್ಟ್ರ ಮಟ್ಟದ ಚಿಂತನ್ ಶಿಬಿರದಲ್ಲಿ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್, ಬಿಜೆಪಿ ರಾಜ್ಯಾಧ್ಯಕ್ಷ ಸಿ.ಆರ್. ಪಾಟೀಲ್, ಬಿಜೆಪಿ ಮುಖಂಡರು, ಕಾರ್ಯಕರ್ತರು, ಪ್ರಮುಖರು, ಶಾಸಕರು, ಸಂಸದರು, ಮುಂತಾದವರು ಭಾಗವಹಿಸಲಿದ್ದಾರೆ. ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ಈ ಸಭೆ ಅತ್ಯಂತ ಮಹತ್ವದ್ದಾಗಿದೆ.

ಅಮಿತ್ ಶಾ ಮಿಷನ್ ಸೌರಾಷ್ಟ್ರ: ನಾಳೆ ಸೋಮನಾಥ್​ದಲ್ಲಿ ಚಿಂತನ್ ಶಿಬಿರ
Amit Shah Mission Saurashtra: Chintan camp at Somnath tomorrow

By

Published : Oct 24, 2022, 11:56 AM IST

ಸೋಮನಾಥ್ (ಗುಜರಾತ್): ಸೌರಾಷ್ಟ್ರ ಮಟ್ಟದ ಬಿಜೆಪಿ ಚಿಂತನ್ ಶಿಬಿರ ಸೋಮನಾಥ್​ನಲ್ಲಿ ಅಕ್ಟೋಬರ್ 25 ರಂದು ನಡೆಯಲಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಈ ಸಭೆಯಲ್ಲಿ ಪಾಲ್ಗೊಳ್ಳಲಿರುವುದು ವಿಶೇಷವಾಗಿದೆ. ಸೌರಾಷ್ಟ್ರದ ಎಲ್ಲ ಪ್ರಮುಖ ಬಿಜೆಪಿ ನಾಯಕರು ಸಭೆಯಲ್ಲಿ ಭಾಗವಹಿಸಲಿದ್ದಾರೆ. ಸೌರಾಷ್ಟ್ರದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ಸಾಧನೆ ಹಿಂದಿನ ವಿಧಾನಸಭೆಯ ಫಲಿತಾಂಶಕ್ಕಿಂತ ಉತ್ತಮವಾಗಿಸುವ ಬಗ್ಗೆ ಚರ್ಚಿಸಲಾಗುವುದು ಎಂದು ತಿಳಿದು ಬಂದಿದೆ.

ಗುಜರಾತ್​ಗೆ ಆಗಮಿಸಿದ ಕೇಂದ್ರ ಸಚಿವ ಅಮಿತ್ ಶಾ

ಅಲ್ಲದೆ, ಮುಂಬರುವ ರಾಜ್ಯ ವಿಧಾನಸಭೆ ಸಾರ್ವತ್ರಿಕ ಚುನಾವಣೆಗೆ ಸಂಬಂಧಿಸಿದಂತೆ ಸೌರಾಷ್ಟ್ರ ವ್ಯಾಪ್ತಿಯ ಬಿಜೆಪಿ ನಾಯಕರು, ಶಾಸಕರು, ಪಕ್ಷದ ಪ್ರಮುಖ ಕಾರ್ಯಕರ್ತರು ಮತ್ತು ಮುಖಂಡರ ನಡುವೆ ಒಂದು ದಿನದ ಚಿಂತನ್ ಶಿಬಿರ್ ಸಭೆ ಆಯೋಜಿಸಲಾಗಿದೆ.

ಬಿಜೆಪಿಯ ಸೌರಾಷ್ಟ್ರ ಮಟ್ಟದ ಚಿಂತನ ಶಿಬಿರದಲ್ಲಿ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್, ಬಿಜೆಪಿ ರಾಜ್ಯಾಧ್ಯಕ್ಷ ಸಿ.ಆರ್. ಪಾಟೀಲ್, ಬಿಜೆಪಿ ಮುಖಂಡರು, ಕಾರ್ಯಕರ್ತರು, ಪ್ರಮುಖರು, ಶಾಸಕರು, ಸಂಸದರು, ಮುಂತಾದವರು ಭಾಗವಹಿಸಲಿದ್ದಾರೆ. ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ಈ ಸಭೆ ಅತ್ಯಂತ ಮಹತ್ವದ್ದಾಗಿದೆ.

ಗುಜರಾತ್​ಗೆ ಆಗಮಿಸಿದ ಕೇಂದ್ರ ಸಚಿವ ಅಮಿತ್ ಶಾ

ಬಿಜೆಪಿಯು ಹಿಂದಿನ ಸಾರ್ವತ್ರಿಕ ಚುನಾವಣೆಯಲ್ಲಿ, ಸೌರಾಷ್ಟ್ರ ಪ್ರದೇಶದಲ್ಲಿ ಮತ್ತು ವಿಶೇಷವಾಗಿ ಗ್ರಾಮ ಆಧಾರಿತ ವಿಧಾನಸಭಾ ಸ್ಥಾನಗಳಲ್ಲಿ ಬಿಜೆಪಿ ಭಾರಿ ಸೋಲನುಭವಿಸಿತ್ತು. ಇದನ್ನು ಗಮನದಲ್ಲಿಟ್ಟುಕೊಂಡು ಸೌರಾಷ್ಟ್ರ ಮಹಾಸಮ್ಮೇಳನಕ್ಕೆ ಸೋಮನಾಥವನ್ನು ಆಯ್ಕೆ ಮಾಡಲಾಗಿದೆ. ಅದರಲ್ಲೂ ಜುನಾಗಢ್. ಗಿರ್ ಸೋಮನಾಥ್ ಮತ್ತು ಅಮ್ರೇಲಿ ಜಿಲ್ಲೆಗಳ 14 ಸ್ಥಾನಗಳ ಪೈಕಿ ಕೆಶೋದ್ ಕ್ಷೇತ್ರವನ್ನು ಮಾತ್ರ ಬಿಜೆಪಿ ಅಭ್ಯರ್ಥಿ ಗೆದ್ದು ಶಾಸಕರಾಗಿದ್ದರು. ಇನ್ನುಳಿದ 13 ಸ್ಥಾನಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದರು.

ಇದನ್ನೂ ಓದಿ: ಗುಜರಾತ್​, ಹಿಮಾಚಲದಲ್ಲಿ 'ಕೈ' ಸೋಲು ಖಚಿತ.. 'ಚಿಂತನಾ ಶಿಬಿರ'ದ ಬಗ್ಗೆ ಪ್ರಶಾಂತ್ ಕಿಶೋರ್ ಟೀಕೆ

ABOUT THE AUTHOR

...view details