ಭೋಪಾಲ್ (ಮಧ್ಯ ಪ್ರದೇಶ): ದೇಶದಲ್ಲಿ ಮೊದಲ ಬಾರಿಗೆ ಹಿಂದಿ ಭಾಷೆಯಲ್ಲಿ ವೈದ್ಯಕೀಯ ಕೋರ್ಸ್‌ಗಳನ್ನು ಮಧ್ಯ ಪ್ರದೇಶದಲ್ಲಿ ಆರಂಭಿಸಲಾಗಿದೆ. ಇಂದು ಎಂಬಿಬಿಎಸ್ ಪಠ್ಯ ಪ್ರಸ್ತಕಗಳನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಬಿಡುಗಡೆ ಮಾಡಿದರು.
ಮಧ್ಯ ಪ್ರದೇಶ ರಾಜಧಾನಿ ಭೋಪಾಲ್‌ನ ಲಾಲ್ ಪರೇಡ್ ಮೈದಾನದಲ್ಲಿ ಆಯೋಜಿಸಲಾಗಿದ್ದ ಹಿಂದಿ ಮೆ ಜ್ಞಾನ್ ಕೆ ಪ್ರಕಾಶ್ ಅಥವಾ ಹಿಂದಿಯಲ್ಲಿ ಜ್ಞಾನದ ಬೆಳಕು ಕಾರ್ಯಕ್ರಮದಲ್ಲಿ ವೈದ್ಯಕೀಯ ಕೋರ್ಸ್‌ಗಳ ಮೊದಲ ವರ್ಷದ ಅನಾಟಮಿ, ಫಿಸಿಯಾಲಜಿ ಮತ್ತು ಬಯೋ ಕೆಮಿಸ್ಟ್ರಿಯ ಹಿಂದಿ ಪುಸ್ತಕಗಳನ್ನು ಅಮಿತ್ ಶಾ ಬಿಡುಗಡೆಗೊಳಿಸಿದರು.
ಹೊಸ ಶಿಕ್ಷಣ ನೀತಿಯಲ್ಲಿ ಪ್ರಧಾನಿ ಮೋದಿ ಮಕ್ಕಳಿಗೆ ಅವರ ಮಾತೃಭಾಷೆಯಲ್ಲಿ ಶಿಕ್ಷಣ ನೀಡಲು ಒತ್ತು ನೀಡಿದ್ದಾರೆ. ಇದಲ್ಲದೇ ಮಧ್ಯ ಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಹಿಂದಿಯಲ್ಲಿ ವೈದ್ಯಕೀಯ ಶಿಕ್ಷಣ ಆರಂಭಿಸುವ ಮೂಲಕ ಐತಿಹಾಸಿಕ ಕೆಲಸ ಮಾಡಿದ್ದಾರೆ ಎಂದು ಅಮಿತ್ ಶಾ ತಿಳಿಸಿದರು.
ಇದನ್ನೂ ಓದಿ:ನಾಳೆ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ: ಸೋನಿಯಾ, ರಾಹುಲ್ ಗಾಂಧಿ ಮತ ಚಲಾವಣೆ ಎಲ್ಲಿ?
ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಮಾತನಾಡಿ, ಪ್ರಾಥಮಿಕ ಶಿಕ್ಷಣವನ್ನು ಆಂಗ್ಲ ಮಾಧ್ಯಮದಲ್ಲಿ ಓದದ ಮಧ್ಯ ಪ್ರದೇಶದ ಲಕ್ಷಾಂತರ ಮಕ್ಕಳ ಬಾಳಿನಲ್ಲಿ ಇಂದು ಹೊಸ ಬೆಳಕು ಮೂಡಿಸಿದೆ. ಇಂಗ್ಲಿಷ್ ಸರಿಯಾಗಿ ತಿಳಿದಿಲ್ಲದ ಕಾರಣ ಅನೇಕರು ತಮ್ಮ ಅಧ್ಯಯನವನ್ನು ಮಧ್ಯದಲ್ಲಿಯೇ ಬಿಡಬೇಕಾದ ಸ್ಥಿತಿ ಇತ್ತು. ಇಂಗ್ಲಿಷ್ ಭಾಷೆಯಲ್ಲಿ ಪರಿಣತಿ ಇಲ್ಲದ ಬಡ ಮತ್ತು ದುರ್ಬಲ ಕುಟುಂಬದ ಮಕ್ಕಳು ಸಹ ವೈದ್ಯಕೀಯ ಶಿಕ್ಷಣದಿಂದ ವಂಚಿತರಾಗಬೇಕಾಗಿತ್ತು. ಇದರಿಂದ ಪ್ರತಿಭೆಗಳ ಉಜ್ವಲ ಭವಿಷ್ಯಕ್ಕೆ ತೊಡುಕಾಗಿತ್ತು. ಇನ್ಮುಂದೆ ಹಾಗಾಗುವುದಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇಂದು ಐತಿಹಾಸಿಕ ದಿನ: ಇದಕ್ಕೂ ಮುನ್ನ ಸಹ ಮಾತನಾಡಿದ್ದ ಅಮಿತ್ ಶಾ, ಮಧ್ಯಪ್ರದೇಶದಲ್ಲಿ ಹಿಂದಿಯಲ್ಲಿ ವೈದ್ಯಕೀಯ ಅಧ್ಯಯನವನ್ನು ಪ್ರಾರಂಭಿಸುತ್ತಿರುವ ಭಾರತೀಯ ಶಿಕ್ಷಣ ಕ್ಷೇತ್ರಕ್ಕೆ ಇಂದು ಐತಿಹಾಸಿಕ ದಿನವಾಗಿದೆ. ಭಾರತೀಯ ಭಾಷೆಗಳನ್ನು ಸಶಕ್ತಗೊಳಿಸುವ ಪ್ರಧಾನಿ ಮೋದಿಯವರ ಸಂಕಲ್ಪಕ್ಕೆ ಇದು ಒಂದು ಪ್ರಮುಖ ಹೆಜ್ಜೆಯಾಗಿದೆ. ಇದರಿಂದಾಗಿ ಮಕ್ಕಳು ಅವರ ಸ್ವಂತ ಭಾಷೆಯಲ್ಲಿ ಅಧ್ಯಯನ ಮಾಡಲು ಸಾಧ್ಯವಾಗುತ್ತದೆ.
ಇದನ್ನೂ ಓದಿ:ಎರಡು ಗುಂಪುಗಳ ನಡುವೆ ಘರ್ಷಣೆ: ಬಜರಂಗ ದಳದ ಕಾರ್ಯಕರ್ತ ಸಾವು