ಕರ್ನಾಟಕ

karnataka

ETV Bharat / bharat

ಅಪರಾಧ ಕಾನೂನು ವ್ಯವಸ್ಥೆಯಲ್ಲಿ ಬದಲಾವಣೆ: ಸಲಹೆ ನೀಡುವಂತೆ ಸಂಸದರಿಗೆ ಪತ್ರ ಬರೆದ ಅಮಿತ್ ಶಾ - ಸಂಸದರಿಗೆ ಪತ್ರ ಬರೆದ ಅಮಿತ್ ಶಾ

ಅಪರಾಧ ಕಾನೂನು ವ್ಯವಸ್ಥೆಯಲ್ಲಿ ಬದಲಾವಣೆ ತರಲು ಕೇಂದ್ರ ಸರ್ಕಾರ ಮುಂದಾಗಿದ್ದು, ಈ ಕುರಿತು ಸಲಹೆ ನೀಡುವಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಸಂಸದರು ಮತ್ತು ಇತರ ಪಕ್ಷಗಳ ನಾಯಕರಿಗೆ ಪತ್ರ ಬರೆದಿದ್ದಾರೆ.

ಅಮಿತ್ ಶಾ
ಅಮಿತ್ ಶಾ

By

Published : Jan 13, 2022, 7:01 AM IST

ನವದೆಹಲಿ: ಭಾರತೀಯ ದಂಡ ಸಂಹಿತೆ, ಅಪರಾಧ ಪ್ರಕ್ರಿಯಾ ಸಂಹಿತೆ ಮತ್ತು ಭಾರತೀಯ ಸಾಕ್ಷ್ಯ ಕಾಯ್ದೆಗಳನ್ನು ಈಗಿನ ಕಾಲಕ್ಕೆ ಸರಿ ಹೊಂದುವ ರೀತಿಯಲ್ಲಿ ಬದಲಾವಣೆ ತರುವ ಉದ್ದೇಶದಿಂದ ತಿದ್ದುಪಡಿಗಳ ಕುರಿತು ಸಂಸದರು ಮತ್ತು ವಿರೋಧ ಪಕ್ಷಗಳ ನಾಯಕರು ಸಲಹೆ ನೀಡುವಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಆಹ್ವಾನಿಸಿದ್ದಾರೆ.

ಸಂಸದರಿಗೆ ಬರೆದ ಪತ್ರದಲ್ಲಿ ಗೃಹ ಸಚಿವರು, ಇದೀಗ ಅಪರಾಧ ಕಾನೂನುಗಳಲ್ಲಿ ಕೆಲ ತಿದ್ದುಪಡಿ ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ವಿಶೇಷವಾಗಿ ಐಪಿಸಿ 1860, ಕ್ರಿಮಿನಲ್ ಪ್ರೊಸೀಜರ್ ಕೋಡ್ 1973 ಮತ್ತು ಭಾರತೀಯ ಸಾಕ್ಷ್ಯ ಕಾಯ್ದೆಗಳ ಸಮಗ್ರ 1872ರ ಕಾಯ್ದೆ ಪರಿಶೀಲನೆಗೆ ಸಮಯ ಬಂದಿದೆ.

ಇಂದಿನ ಅಗತ್ಯ ಹಾಗೂ ಜನರ ಮಹತ್ವಾಕಾಂಕ್ಷೆಗೆ ಅನುಗುಣವಾಗಿ ಈ ಕಾನೂನುಗಳನ್ನು ಅಳವಡಿಸಿಕೊಳ್ಳುವ ಅಗತ್ಯವಿದೆ. 'ಸಾರ್ವಜನಿಕರನ್ನು ಗಮನದಲ್ಲಿಟ್ಟುಕೊಂಡು ಕಾನೂನು ಚೌಕಟ್ಟನ್ನು ರಚಿಸಲು ಭಾರತ ಸರ್ಕಾರ ಉದ್ದೇಶಿಸಿದೆ' ಎಂದು ಶಾ ತಿಳಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು 'ಸಬ್ಕಾ ಸಾಥ್ - ಸಬ್ಕಾ ವಿಕಾಸ್, ಸಬ್ಕಾ ವಿಶ್ವಾಸ ಮತ್ತು ಸಬ್ಕಾ ಪ್ರಯಾಸ್' ಮಂತ್ರದೊಂದಿಗೆ ಭಾರತದ ಎಲ್ಲ ನಾಗರಿಕರಿಗೆ, ವಿಶೇಷವಾಗಿ ಹಿಂದುಳಿದವರಿಗೆ ತ್ವರಿತ ನ್ಯಾಯವನ್ನು ಒದಗಿಸಲು ಬದ್ಧವಾಗಿದೆ.

ಈ ನಿಟ್ಟಿನಲ್ಲಿ ಭಾರತದ ಮುಖ್ಯ ನ್ಯಾಯಮೂರ್ತಿಗಳು, ಹೈಕೋರ್ಟ್‌ಗಳ ಮುಖ್ಯ ನ್ಯಾಯಮೂರ್ತಿಗಳು, ರಾಜ್ಯ ಮುಖ್ಯಮಂತ್ರಿಗಳು, ಕೇಂದ್ರಾಡಳಿತ ಪ್ರದೇಶಗಳು, ಬಾರ್ ಕೌನ್ಸಿಲ್‌ಗಳು ಮತ್ತು ಕಾನೂನು ವಿಶ್ವವಿದ್ಯಾಲಯಗಳ ಆಡಳಿತಾಧಿಕಾರಿಗಳು ಸಲಹೆ ನೀಡುವಂತೆ ಮನವಿ ಮಾಡಿರುವುದಾಗಿ ಕೇಂದ್ರ ಗೃಹ ಸಚಿವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಇನ್ನೊಂದೆಡೆ, ಗೃಹ ವ್ಯವಹಾರಗಳ ಸಂಸದೀಯ ಸ್ಥಾಯಿ ಸಮಿತಿ ಅಧ್ಯಕ್ಷ ಆನಂದ್ ಶರ್ಮಾ ಅವರು ಗೃಹ ಕಾರ್ಯದರ್ಶಿ ಅಜಯ್ ಕುಮಾರ್ ಭಲ್ಲಾ ಅವರಿಗೆ ಪತ್ರ ಬರೆದಿದ್ದು, ಸಾಮಾಜಿಕ ಮಾಧ್ಯಮ ಟ್ರೆಂಡ್‌ಗಳನ್ನು ಕುಶಲತೆಯಿಂದ ಬಳಸಲಾಗುತ್ತಿರುವ ಟೆಕ್ ಫಾಗ್ ಅಪ್ಲಿಕೇಶನ್ ಬಗ್ಗೆ ಮಾಹಿತಿ ನೀಡುವಂತೆ ಕೇಳಿದ್ದಾರೆ.

ಓದಿ:ಜಮ್ಮು-ಕಾಶ್ಮೀರದ ಕುಲ್ಗಾಮ್‌ ಗುಂಡಿನ ದಾಳಿಯಲ್ಲಿ ಉಗ್ರನ ಹತ್ಯೆ; ಓರ್ವ ಪೊಲೀಸ್ ಹುತಾತ್ಮ

ABOUT THE AUTHOR

...view details