ಗುವಾಹಟಿ (ಅಸ್ಸೋಂ) :ಶುಕ್ರವಾರ ರಾತ್ರಿ ಗುವಾಹಟಿಗೆ ಆಗಮಿಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅಲ್ಲಿನ ಭ್ಯವ್ಯ ಸ್ವಗತಕ್ಕೆ ಧನ್ಯವಾದ ತಿಳಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ನಾನು ಗುವಾಹಟಿಯನ್ನು ತಲುಪಿದೆ! ಅಸ್ಸೋಂನ ಜನರ ಆತ್ಮೀಯ ಸ್ವಾಗತಕ್ಕಾಗಿ ನಾನು ಹೃದಯಪೂರ್ವಕ ಧನ್ಯವಾದ ಹೇಳುತ್ತೇನೆ ಎಂದಿದ್ದಾರೆ.
ಗುವಾಹಟಿ ವಿಮಾನ ನಿಲ್ದಾಣದಲ್ಲಿ ಗೃಹ ಸಚಿವರನ್ನು ಅಸ್ಸೋಂ ಮುಖ್ಯಮಂತ್ರಿ ಸರ್ಬಾನಂದ ಸೋನೊವಾಲ್ ಬರಮಾಡಿಕೊಂಡರು.
ಗುವಾಹಟಿ ವಿಮಾನ ನಿಲ್ದಾಣದಲ್ಲಿ ಕೇಂದ್ರ ಗೃಹ ಸಚಿವರನ್ನು ನಾನು ಹೃತ್ಪೂರ್ವಕವಾಗಿ ಸ್ವಾಗತಿಸಿದ್ದೇನೆ. ರಾಜ್ಯದ ಅಭಿವೃದ್ಧಿಗಾಗಿ ಹಲವು ಯೋಜನೆಗಳನ್ನು ಘೋಷಿಸಲಿರುವ ಅವರನ್ನು ಅಸ್ಸೋಂ ಜನರ ಪರವಾಗಿ ಧನ್ಯವಾದ ಅರ್ಪಿಸುವುದಾಗಿ ಸೋನೊವಾಲ್ ಟ್ವೀಟ್ ಮಾಡಿದ್ದಾರೆ.
ಅಮಿತ್ ಶಾ ಎರಡು ದಿನಗಳ ಕಾಲ ಅಸ್ಸೋಂ ರಾಜ್ಯ ಪ್ರವಾಸ ಕೈಗೊಂಡಿದ್ದು ಅವರನ್ನು ಸ್ಥಳೀಯ ಜಾನಪದ ಕಲಾವಿದರ ತಂಡಗಳು ಮನರಂಜನೆಗೊಳಿಸುವ ಮೂಲಕ ಬರಮಾಡಿಕೊಂಡಿವೆ.