ನವದೆಹಲಿ:ಡ್ರಗ್ಸ್ ಪಾರ್ಟಿ ಪ್ರಕರಣದಲ್ಲಿ ಬಾಲಿವುಡ್ ನಟ ಶಾರುಕ್ ಖಾನ್ ಪುತ್ರ ಆರ್ಯನ್ ಖಾನ್ ಅವರ ಪರವಾಗಿ ನ್ಯಾಯಾಲಯದಲ್ಲಿ ಇಷ್ಟು ದಿನ ಕನ್ನಡಿಗರಾದ ಧಾರವಾಡ ಮೂಲದ ವಕೀಲ ಸತೀಶ್ ಮಾನೆಶಿಂಧೆ ವಾದ ಮಾಡಿದ್ದರು. ಆದರೆ, ಪ್ರಕರಣದಲ್ಲಿ ಜಾಮೀನು ಕೊಡಿಸುವಲ್ಲಿ ವಿಫಲರಾಗಿರುವ ಕಾರಣ ಇದೀಗ ಬೇರೆ ಲಾಯರ್ಗೆ ಮಣೆ ಹಾಕಲಾಗಿದೆ.
ಯಶಸ್ವಿ ಕ್ರಿಮಿನಲ್ ಲಾಯರ್ ಎಂದು ಪ್ರಸಿದ್ಧರಾಗಿರುವ ಅಮಿತ್ ದೇಸಾಯಿಗೆ ಇದೀಗ ಮಣೆ ಹಾಕಲಾಗಿದ್ದು, ಇನ್ಮುಂದೆ ಆರ್ಯನ್ ಖಾನ್ ಕೇಸ್ ಮುನ್ನಡೆಸಲಿದ್ದಾರೆ. ಈ ಹಿಂದೆ ಬಾಲಿವುಡ್ ನಟ ಸಲ್ಮಾನ್ ಖಾನ್ ಅವರ ಹಿಟ್ ಅಂಡ್ ರನ್ ಕೇಸ್ನಲ್ಲಿ ವಾದ ಮಂಡನೆ ಮಾಡಿರುವ ಇವರು, ಜಾಮೀನು ಕೊಡಿಸುವಲ್ಲಿ ಯಶಸ್ವಿಯಾಗಿದ್ದು, ಅವರನ್ನ ಎಲ್ಲ ಆರೋಪಗಳಿಂದ ಮುಕ್ತರನ್ನಾಗಿಸಿದ್ದಾರೆ.
ಇದನ್ನೂ ಓದಿರಿ:ಶಾರುಖ್ ಪುತ್ರನ ಕೇಸ್ ನಡೆಸ್ತಿದಾರೆ ಧಾರವಾಡದ ವಕೀಲ.. ಆರ್ಯನ್ಗೆ ಸಿಗುತ್ತಾ ರಿಲೀಫ್?
ಕ್ರೂಸ್ ಹಡಗಿನಲ್ಲಿ ಡ್ರಗ್ಸ್ ಪಾರ್ಟಿ ಮಾಡಿದ್ದ ಆರೋಪದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್ ಅವರ ಪುತ್ರ ಆರ್ಯನ್ ಖಾನ್ ಜಾಮೀನು ಅರ್ಜಿಯನ್ನು ಮುಂಬೈ ಸ್ಥಳೀಯ ಕೋರ್ಟ್ ವಜಾ ಮಾಡಿದ್ದರು. ಹೀಗಾಗಿ ಬೇರೆ ವಕೀಲರು ಮುಂದಿನ ಕೋರ್ಟ್ನಲ್ಲಿ ವಕಾಲತ್ತು ನಡೆಸಲಿದ್ದಾರೆ.
ಮುಂಬೈ ಸೆಷನ್ಸ್ ಕೋರ್ಟ್ನಲ್ಲಿ ಪ್ರಕರಣದ ವಾದ - ಪ್ರತಿವಾದ ನಡೆಯುತ್ತಿದ್ದು, ಈಗಾಗಲೇ ಜಾಮೀನು ಅರ್ಜಿ ನಾಳೆಗೆ ಮುಂದೂಡಿಕೆಯಾಗಿದೆ. ಹೀಗಾಗಿ ನಾಳೆ ಅಮಿತ್ ದೇಸಾಯಿ ವಾದ ಮಂಡನೆ ಮಾಡಲಿದ್ದಾರೆ. 2020ರ ಹಿಟ್ ಅಂಡ್ ರನ್ ಕೇಸ್ನಲ್ಲಿ ಸಲ್ಮಾನ್ ಖಾನ್ ಪರ ವಕಾಲತ್ತು ವಹಿಸಿಕೊಂಡಿದ್ದ ಅಮಿತ್ ದೇಸಾಯಿ, 2015ರಲ್ಲಿ ನಟನಿಗೆ ಜಾಮೀನು ಕೊಡಿಸುವಲ್ಲಿ ಯಶಸ್ವಿಯಾಗಿದ್ದರು. ಜೊತೆಗೆ ಎಲ್ಲ ಆರೋಪಗಳಿಂದ ಅವರನ್ನ ಮುಕ್ತ ಮಾಡಿದ್ದಾರೆ.