ಉಜ್ಜಯಿನಿ(ಮಧ್ಯಪ್ರದೇಶ):ಕರ್ನಾಟಕದ ಹಿಜಾಬ್- ಕೇಸರಿ ಸಂಘರ್ಷ ದೇಶದಲ್ಲಿಯೇ ಸದ್ದು ಮಾಡುತ್ತಿದೆ. ಈ ಸಂಘರ್ಷದ ಬಿಸಿ ಮಧ್ಯಪ್ರದೇಶಕ್ಕೂ ತಾಕಿದ್ದು, ಇಲ್ಲಿನ ಚುನಾವಣಾ ಆಯೋಗದ ಕಚೇರಿಗೆ ಅಪರಿಚಿತ ಗುಂಪೊಂದು ಹಿಜಾಬ್ ಪರವಾದ ವಿವಾದಾತ್ಮಕ ಘೋಷವಾಕ್ಯವುಳ್ಳ ಪೋಸ್ಟರ್ ಅಂಟಿಸಿದೆ.
'ತಮ್ಮ ಹೆಣ್ಣು ಮಕ್ಕಳನ್ನು ಮಾರುಕಟ್ಟೆಯ ಮೂಲಕ ಅರೆಬೆತ್ತಲೆಯಾಗಿ ಮೆರವಣಿಗೆ ಮಾಡುವವರಿಗೆ ಹಿಜಾಬ್‌ನ ಮಹತ್ವ ತಿಳಿದಿಲ್ಲ. ಇದು ಗೌರವಾನ್ವಿತ ಮಹಿಳೆಯ ಮರ್ಯಾದೆಯ ಸಂಕೇತವಾಗಿದೆ. ನಿಮ್ಮ ಮಹಿಳೆಯರಿಗೆ ಇದನ್ನು ಧರಿಸುವ ಭಾಗ್ಯವಿಲ್ಲ ಎಂದು ಹಿಂದು ಮಹಿಳೆಯರನ್ನು ಹೀಯಾಳಿಸುವ ರೀತಿ ಪೋಸ್ಟರ್ನಲ್ಲಿ ಬರೆಯಲಾಗಿದೆ. ಇದರ ಜೊತೆಗೆ 'ನಾರಾ-ಎ- ತಕ್ಬೀರ್ ಅಲ್ಲಾಹು ಅಕ್ಬರ್' ಎಂಬ ಧಾರ್ಮಿಕ ಘೋಷಣೆ ಮೊಳಗಿಸಲಾಗಿದೆ.