ನವದೆಹಲಿ :ದೇಶದಲ್ಲಿ ಹಿಜಾಬ್ ವಿವಾದ ಭಾರೀ ಚರ್ಚೆಯಲ್ಲಿರುವ ಈ ವೇಳೆಯಲ್ಲಿ ಕಾಂಗ್ರೆಸ್ ನಾಯಕ ಮತ್ತು ವಾಯವ್ಯ ದೆಹಲಿಯ ಸಂಸದ ಉದಿತ್ ರಾಜ್ ಅವರು ಮಹಿಳೆಯರಿಗೆ "ಸೀರೆ ಮತ್ತು ಸಲ್ವಾರ್ ಬದಲಿಗೆ ಜೀನ್ಸ್ ಧರಿಸಿ" ಎಂದು ಕರೆ ನೀಡಿದ್ದಾರೆ.
"ನನ್ನ ಲಕ್ಷಗಟ್ಟಲೆ ಬೆಂಬಲಿಗರಿಗೆ ಸೀರೆ ಮತ್ತು ಸಲ್ವಾರ್ ಬದಲಿಗೆ ಜೀನ್ಸ್ ಧರಿಸಲು ನಾನು ಕೇಳುತ್ತೇನೆ" ಎಂದು ಉದಿತ್ ರಾಜ್ ಟ್ವೀಟ್ ಮಾಡಿದ್ದಾರೆ. ಕರ್ನಾಟಕದಲ್ಲಿ ಮುಸ್ಲಿಂ ಹೆಣ್ಣು ಮಕ್ಕಳಿಗೆ ಹಿಜಾಬ್ ಧರಿಸಲು ನಿರಾಕರಿಸಿದ ಬಗ್ಗೆ ತೀವ್ರ ಗದ್ದಲದ ನಡುವೆಯೇ ಬಿಜೆಪಿಯಿಂದ ಕಾಂಗ್ರೆಸ್ ಸೇರ್ಪಡೆಯಾಗಿರುವ ಉದಿತ್ ರಾಜ್ ಈ ರೀತಿ ಹೇಳಿದ್ದಾರೆ.