ಕರ್ನಾಟಕ

karnataka

ETV Bharat / bharat

ಚೀನಾ ಗಡಿ ಸಂಘರ್ಷ.. ಶತ್ರುಗಳ ಕಣ್ಣು ಕುಕ್ಕಲಿದೆ 'ಆಕಾಶ್ ಕ್ಷಿಪಣಿ' - IAF testfires 10 Akash missiles

ಆಕಾಶ್ ಅತ್ಯಂತ ಯಶಸ್ವಿ ಸ್ಥಳೀಯ ಶಸ್ತ್ರಾಸ್ತ್ರ ವ್ಯವಸ್ಥೆಗಳಲ್ಲಿ ಒಂದಾಗಿದೆ ಮತ್ತು ಸ್ಥಳೀಯ ಶಸ್ತ್ರಾಸ್ತ್ರಗಳೊಂದಿಗೆ ಶತ್ರು ರಾಷ್ಟ್ರಗಳೊಂದಿಗೆ ಕದನ ನಡೆಸುವ ರಕ್ಷಣಾ ಪಡೆಗಳ ಆಸೆಯನ್ನು ಇದು ಈಡೇರಿಸಲಿದೆ..

Amid China border conflict, IAF testfires 10 Akash missiles to 'shoot down' enemy fighters
ಆಕಾಶ್ ಕ್ಷಿಪಣಿ

By

Published : Dec 4, 2020, 6:13 PM IST

ನವದೆಹಲಿ: ಭಾರತ ಹಾಗೂ ಚೀನಾದ ನಡುವೆ ಎಲ್‌ಎಸಿಯಲ್ಲಿ ನಡೆಯುತ್ತಿರುವ ಘರ್ಷಣೆಯ ಪರಿಸ್ಥಿತಿಯಲ್ಲಿ ಚೀನಾವನ್ನು ವ್ಯವಸ್ಥಿತವಾಗಿ ಎದುರಿಸಲು ಭಾರತ ಎಲ್ಲಾ ರೀತಿಯಿಂದಲೂ ಸನ್ನದ್ಧವಾಗಿದೆ.

ದೇಶೀಯ ನಿರ್ಮಿತ ಆಕಾಶ್ ವಾಯು ರಕ್ಷಣಾ ಕ್ಷಿಪಣಿಗಳನ್ನು ಪ್ರಾಯೋಗಿಕವಾಗಿ ಬಳಕೆ ಮಾಡಿದ್ದು, ಗುಂಡಿನ ದಾಳಿ ನಡೆಸಲಾಗಿದೆ. ಘರ್ಷಣೆಗಳ ಸಮಯದಲ್ಲಿ ಭಾರತೀಯ ವಾಯು ಜಾಗವನ್ನು ಉಲ್ಲಂಘಿಸಬಹುದಾದ ಶತ್ರು ವಿಮಾನಗಳನ್ನು ಹೊಡೆದುರುಳಿಸಲು ಇದು ಸಮರ್ಥವಾಗಿದೆ.

ಕಳೆದ ವಾರ ಆಂಧ್ರದ ಸೂರ್ಯಲಂಕಾ ಟೆಸ್ಟ್‌ ಫೈರಿಂಗ್ ಪ್ರದೇಶದಲ್ಲಿ ಆಕಾಶ್​ನ ಪರೀಕ್ಷೆ ಮಾಡಲಾಗಿದ್ದು, ಭಾರೀ ಸಾಮರ್ಥ್ಯ ತೋರಿಸಿದೆ. ಶತ್ರು ವಿಮಾನಗಳನ್ನು ಹೊಡೆದುರುಳಿಸಲು ಹಾಗೂ ಘರ್ಷಣೆಗಳ ಸಮಯದಲ್ಲಿ ವಿಭಿನ್ನ ಸನ್ನಿವೇಶಗಳನ್ನು ಎದುರಿಸಲು ಯಾವ ರೀತಿ ಇದು ಕೆಲಸ ಮಾಡುತ್ತದೆ ಎಂದು ಅರಿಯಲು 'ಸಂಯೋಜಿತ ಮಾರ್ಗದರ್ಶಿ ಶಸ್ತ್ರಾಸ್ತ್ರಗಳ ಗುಂಡಿನ 2020 ಅಭ್ಯಾಸ'ದ ವೇಳೆ ಸುಮಾರು 10 ಆಕಾಶ್ ಕ್ಷಿಪಣಿಗಳನ್ನು ಹಾರಿಸಲಾಯಿತು. ಆ ವೇಳೆ ಹೆಚ್ಚಿನ ಕ್ಷಿಪಣಿಗಳು ಗುರಿಯತ್ತ ನುಗ್ಗಿ ತಮ್ಮ ಶಕ್ತಿ ತೋರಿಸಿವೆ.

ತಾಲೀಮಿನ ಸಮಯದಲ್ಲಿ ಐಎಎಫ್ ಆಕಾಶ್ ಕ್ಷಿಪಣಿಗಳು ಮತ್ತು ಇಗ್ಲಾ ಎರಡನ್ನೂ ಪರೀಕ್ಷೆಗೆ ಒಳಪಡಿಲಾಗಿತ್ತು. ಈ ಎರಡೂ ಕೂಡ ಭಾರತದ ವಾಯು ಪ್ರದೇಶವನ್ನು ಉಲ್ಲಂಘಿಸಲು ಪ್ರಯತ್ನಿಸುವ ಯಾವುದೇ ಶತ್ರು ವಿಮಾನಗಳನ್ನು ಹೊಡೆದುರುಳಿಸಲು ಯೋಗ್ಯವಾಗಿವೆ ಎಂದು ತಿಳಿದು ಬಂದಿದೆ. ಈ ಹಿನ್ನೆಲೆ ಪೂರ್ವ ಲಡಾಖ್ ಮತ್ತು ಇತರ ಕ್ಷೇತ್ರಗಳಲ್ಲಿನ ಎಲ್‌ಎಸಿ ಉದ್ದಕ್ಕೂ ನಿಯೋಜಿಸಲಾಗಿದೆ.

ಆಕಾಶ್ ಅತ್ಯಂತ ಯಶಸ್ವಿ ಸ್ಥಳೀಯ ಶಸ್ತ್ರಾಸ್ತ್ರ ವ್ಯವಸ್ಥೆಗಳಲ್ಲಿ ಒಂದಾಗಿದೆ ಮತ್ತು ಸ್ಥಳೀಯ ಶಸ್ತ್ರಾಸ್ತ್ರಗಳೊಂದಿಗೆ ಶತ್ರು ರಾಷ್ಟ್ರಗಳೊಂದಿಗೆ ಕದನ ನಡೆಸುವ ರಕ್ಷಣಾ ಪಡೆಗಳ ಆಸೆಯನ್ನು ಇದು ಈಡೇರಿಸಲಿದೆ. ಈ ಕ್ಷಿಪಣಿಯನ್ನು ಇತ್ತೀಚೆಗಷ್ಟೇ ಅಪ್‌ಗ್ರೇಡ್ ಮಾಡಲಾಗಿದೆ. ಈ ಕಾರಣದಿಂದ ಮೊದಲಿಗಿಂತ ಇದು ಈಗ ಸುಲಭವಾಗಿ ತನ್ನ ಕೆಲಸ ಮಾಡುತ್ತದಂತೆ.

ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಆಕಾಶ್ ಪ್ರೈಮ್ ಕ್ಷಿಪಣಿ ವ್ಯವಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಇದು ಅತ್ಯಂತ ಎತ್ತರದ ಸ್ಥಳಗಳಲ್ಲಿಯೂ ಕೆಲಸ ಮಾಡಲು ಸಮರ್ಥವಾಗಿದೆ. ಇತ್ತೀಚಿನ ದಿನಗಳಲ್ಲಿ ಭಾರತದ ಜೊತೆ ಶತ್ರು ರಾಷ್ಟ್ರಗಳು ನಡೆಸುತ್ತಿರುವ ಕಿತಾಪತಿಗೆ ತಕ್ಕ ಉತ್ತರ ನೀಡಲು ಭಾರತ ಪ್ರತ್ಯುತ್ತರ ನೀಡಬೇಕಿದೆ. ಈ ಕಾರಣಕ್ಕೆ ಡಿಆರ್‌ಡಿಒ ಕೆಲವು ಮಹತ್ವದ ಮಾರ್ಪಾಡು ಮಾಡಿದೆ.

ಕ್ಷಿಪಣಿ ವ್ಯವಸ್ಥೆಯನ್ನು ಇತರ ವ್ಯವಸ್ಥೆಗಳೊಂದಿಗೆ ಸಂಯೋಜಿಸಿದ ಕಾರಣ ಕ್ಷಿಪಣಿಯ ರಹಸ್ಯ ಲಕ್ಷಣಗಳು ಗಮನಾರ್ಹವಾಗಿ ಬದಲಾಗಿವೆ. ವಿಕಿರಣ ವಿರೋಧಿ ಕ್ಷಿಪಣಿಗಳನ್ನು ಹೊಂದಿದ ಶತ್ರು ಫೈಟರ್ ಜೆಟ್‌ಗಳನ್ನೂ ಇವು ಆಶ್ಚರ್ಯಗೊಳಿಸುತ್ತವಂತೆ. ಶತ್ರು ವಿಮಾನಗಳು, ಡ್ರೋನ್‌ಗಳು ಮತ್ತು ಕಣ್ಗಾವಲು ವಿಮಾನಗಳ ಮೇಲೆ ಕಣ್ಣಿಡಲು ಈ ಕ್ಷಿಪಣಿಗಳನ್ನು ಪಾಕಿಸ್ತಾನ ಮತ್ತು ಚೀನಾದ ಗಡಿಯಲ್ಲಿ ನಿಯೋಜಿಸಲಿದೆ.

ABOUT THE AUTHOR

...view details