ಕರ್ನಾಟಕ

karnataka

By

Published : Mar 22, 2021, 3:38 PM IST

Updated : Mar 22, 2021, 5:04 PM IST

ETV Bharat / bharat

ಭಾರತವನ್ನು 200 ವರ್ಷ ಆಳಿದ್ದು ಅಮೆರಿಕ: ಬಿಜೆಪಿ ಮುಖ್ಯಮಂತ್ರಿ ಅಚ್ಚರಿ ಹೇಳಿಕೆ

ನೈನಿತಾಲ್‌ನ ರಾಮ್‌ ನಗರದಲ್ಲಿನ ಭಾಷಣದಲ್ಲಿ ರಾವತ್ ಅವರು ಕೋವಿಡ್ ನಿಯಂತ್ರಣ ವಿಷಯದಲ್ಲಿ ಭಾರತ ಮತ್ತು ಅಮೆರಿಕವನ್ನು ಹೋಲಿಕೆ ಮಾಡಿದರು. ಬೇರೆ ರಾಷ್ಟ್ರಗಳಿಗೆ ಹೋಲಿಸಿದರೆ ಭಾರತ ಸಾಂಕ್ರಾಮಿಕವನ್ನು ಉತ್ತಮವಾಗಿ ನಿಭಾಯಿಸುತ್ತಿದೆ. ನಮ್ಮನ್ನು 200 ವರ್ಷ ಆಳ್ವಿಕೆ ಮಾಡಿದ್ದ ಹಾಗೂ ಜಗತ್ತನ್ನು ಅಡಿಯಾಳಾಗಿ ಇರಿಸಿದ್ದ ಅಮೆರಿಕ, ಈಗ ಕೊರೊನಾ ಸೋಂಕು ನಿಯಂತ್ರಿಸುವಲ್ಲಿ ಹೆಣಗಾಡುತ್ತಿದೆ ಎಂದರು.

Tirath Singh Rawat
Tirath Singh Rawat

ನವದೆಹಲಿ:ಒಂದರ ಮೇಲೊಂದರಂತೆ ವಿವಾದಗಳನ್ನು ಮೈಮೇಲೆ ಎಳೆದುಕೊಂಡು ಎಡವಟ್ಟು ಮಾಡಿಕೊಳ್ಳುತ್ತಿರುವ ಉತ್ತರಾಖಂಡ ಸಿಎಂ ತಿರಥ್​ ಸಿಂಗ್ ರಾವತ್ ಅವರು ಭಾರತವನ್ನಾಳಿದ ಬ್ರಿಟಿಷ್ ಆಳ್ವಿಕೆ ಬಗ್ಗೆ ತಪ್ಪು ಉಲ್ಲೇಖ ಮಾಡಿ ನಗೆಪಾಟಲಿಗೆ ಈಡಾಗಿದ್ದಾರೆ.

ನೈನಿತಾಲ್‌ನ ರಾಮ್‌ ನಗರದಲ್ಲಿನ ಭಾಷಣದಲ್ಲಿ ರಾವತ್ ಅವರು ಕೋವಿಡ್ ನಿಯಂತ್ರಣ ವಿಷಯದಲ್ಲಿ ಭಾರತ ಮತ್ತು ಅಮೆರಿಕವನ್ನು ಹೋಲಿಕೆ ಮಾಡಿದರು. 'ಬೇರೆ ರಾಷ್ಟ್ರಗಳಿಗೆ ಹೋಲಿಸಿದರೆ ಭಾರತ ಸಾಂಕ್ರಾಮಿಕವನ್ನು ಉತ್ತಮವಾಗಿ ನಿಭಾಯಿಸುತ್ತಿದೆ. ನಮ್ಮನ್ನು 200 ವರ್ಷ ಆಳ್ವಿಕೆ ಮಾಡಿದ್ದ ಹಾಗೂ ಜಗತ್ತನ್ನು ಅಡಿಯಾಳಾಗಿ ಇರಿಸಿದ್ದ ಅಮೆರಿಕ, ಈಗ ಕೊರೊನಾ ಸೋಂಕು ನಿಯಂತ್ರಿಸುವಲ್ಲಿ ಹೆಣಗಾಡುತ್ತಿದೆ' ಎಂದರು.

ಇದನ್ನೂ ಓದಿ: ಹೆಚ್ಚಿನ ಪಡಿತರ ಬಯಸಿದ್ರೆ 20 ಮಕ್ಕಳಿಗೆ ಜನ್ಮ ನೀಡಬೇಕಿತ್ತು: ಉತ್ತರಾಖಂಡ ಸಿಎಂ ಮತ್ತೆ ವಿವಾದಾತ್ಮಕ ಹೇಳಿಕೆ

ಆರೋಗ್ಯದ ವಲಯದಲ್ಲಿ ಅಗ್ರ ಸ್ಥಾನದಲ್ಲಿ ಇರುವ ಅಮೆರಿಕದಲ್ಲಿ 50 ಲಕ್ಷ ಮಂದಿ ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ. ಈಗ ಮತ್ತೊಮ್ಮೆ ಲಾಕ್​ಡೌನ್​ನತ್ತ ಸಾಗುತ್ತಿದೆ. ಈ ಸಮಯದಲ್ಲಿ ನರೇಂದ್ರ ಮೋದಿ ಅವರ ಬದಲು ಬೇರೆ ಯಾರಾದರೂ ಪ್ರಧಾನಿ ಆಗಿದ್ದರೆ ಭಾರತಕ್ಕೆ ಏನಾಗುತ್ತಿತ್ತು ಅಂತ ಯಾರಿಗೆ ತಿಳಿದಿಲ್ಲ. ಮೋದಿಯಿಂದಾಗಿ ನಮಗೆ ಬಿಡುವು ಸಿಕ್ಕಿದೆ ಎಂದು ಹೇಳಿದರು.

130-135 ಕೋಟಿ ಜನಸಂಖ್ಯೆ ಹೊಂದಿರುವ ಭಾರತವು ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಆಡಳಿತದಲ್ಲಿ ನಿರಾಳವಾಗಿದೆ. ಸೂರ್ಯ ಎಂದಿಗೂ ಅಸ್ತಮಿಸದ ಸಾಮ್ರಾಜ್ಯವು ಇಂದು ಹೆಣಗಾಡುತ್ತಿದೆ ಎಂದರು.

ರಾಷ್ಟ್ರೀಯ ಕಾಂಗ್ರೆಸ್ ವಕ್ತಾರ ರಣದೀಪ್ ಸಿಂಗ್ ಸುರ್ಜೆವಾಲಾ ಅವರು ಉತ್ತರಾಖಂಡ ಸಿಎಂ ಅವರ ಈ ಹೇಳಿಕೆಗಳಿಗೆ ಪ್ರತಿಕ್ರಿಯಿಸಿ, ಪ್ರಧಾನಿ ನರೇಂದ್ರ ಮೋದಿಯವರ ಮೇಲೆ ವಾಗ್ದಾಳಿ ನಡೆಸಿ, 'ಅವರು ಅಂತಹ ಕಲಿತ ಪ್ರತಿಭೆಗಳನ್ನು ಆರಿಸಿಕೊಳ್ಳುತ್ತಾರೆ. ಅಮೆರಿಕವು 200 ವರ್ಷಗಳ ಕಾಲ ಭಾರತವನ್ನು ಆಳಿದೆ ಎಂಬ ರಾವತ್ ಅವರ ಹೇಳಿಕೆ ಅಪಹಾಸ್ಯ' ಎಂದರು.

Last Updated : Mar 22, 2021, 5:04 PM IST

ABOUT THE AUTHOR

...view details