ಗುರುಗ್ರಾಮ(ಹರಿಯಾಣ): ಆ್ಯಂಬುಲೆನ್ಸ್ನಲ್ಲಿ ಗುರುಗ್ರಾಮನಿಂದ ಪಂಜಾಬ್ನ ಲುಧಿಯಾನಕ್ಕೆ ಕೋವಿಡ್ ರೋಗಿ ಕರೆದೊಯ್ಯಲು 1 ಲಕ್ಷ 20 ಸಾವಿರ ರೂ. ಪಡೆದಿರುವ ಆರೋಪ ಕೇಳಿ ಬಂದಿದೆ.
ಆ್ಯಂಬುಲೆನ್ಸ್ ಚಾಲಕ ಇಷ್ಟೊಂದು ಹಣ ಪಡೆದುಕೊಂಡಿದ್ದಾನೆಂದು ರೋಗಿಯ ಸಂಬಂಧಿಕರು ಆರೋಪ ಮಾಡಿದ್ದಾರೆ. ಇದೀಗ ಪ್ರಕರಣದ ತನಿಖೆ ನಡೆಯುತ್ತಿದೆ.
ಕೋವಿಡ್ನಿಂದ ಬಳಲುತ್ತಿದ್ದ ವ್ಯಕ್ತಿವೋರ್ವನನ್ನು ಗುರುಗ್ರಾಮದಿಂದ ಲುಧಿಯಾನಕ್ಕೆ ಕರೆದುಕೊಂಡು ಹೋಗಬೇಕಾಗಿತ್ತು. ಈ ವೇಳೆ ಆ್ಯಂಬುಲೆನ್ಸ್ ಚಾಲಕ ಇಷ್ಟೊಂದು ಹಣ ಪಡೆದುಕೊಂಡಿದ್ದಾನೆಂದು ಸಂತ್ರಸ್ತೆ ಕುಟುಂಬ ಸದಸ್ಯರು ಆರೋಪಿಸಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಜಿಲ್ಲಾಡಳಿತಕ್ಕೆ ದೂರು ನೀಡಿದ್ದಾರೆ. ಜತೆಗೆ ಸಹಾಯವಾಣಿಗೆ ಹಲವು ಸಲ ಫೋನ್ ಮಾಡಿದಾಗಲೂ ಯಾರೂ ಪ್ರತಿಕ್ರಿಯೆ ನೀಡಿಲ್ಲ ಎಂದಿದ್ದಾರೆ.
ಇದನ್ನೂ ಓದಿ: ಹೊಸದಾಗಿ ಮದುವೆ: ಶೌಚಾಲಯಕ್ಕೆ ಹೋಗುವುದಾಗಿ ಹೇಳಿ ಲವರ್ ಜೊತೆ ಯುವತಿ ಪರಾರಿ
ಕೊರೊನಾ ಸಂಕಷ್ಟದ ಸಮಯದಲ್ಲಿ ದೇಶದಲ್ಲಿ ಬೆಡ್, ಔಷಧಿ ಹಾಗೂ ಆ್ಯಂಬುಲೆನ್ಸ್ ತೊಂದರೆ ಉಂಟಾಗುತ್ತಿದ್ದು, ಲಕ್ಷಾಂತರ ರೂ. ನೀಡಬೇಕಾದ ಅನಿವಾರ್ಯತೆ ನಿರ್ಮಾಣವಾಗಿದೆ ಎಂಬ ಆರೋಪ ಕೇಳಿ ಬಂದಿವೆ.