ಹೈದರಾಬಾದ್:ದೇಶದಲ್ಲಿ ಹಲವಾರು ಕೊರೊನಾ ಲಸಿಕೆಗಳ ಸಂಶೋಧನೆ ನಡೆಯುತ್ತಿದೆ. ಹೈದರಾಬಾದ್ನಲ್ಲಿ ಕೋವ್ಯಾಕ್ಸಿನ್ ಸಂಶೋಧನೆ ನಡೆಯುತ್ತಿದ್ದು, ಈ ಸಂಶೋಧನಾ ಕೇಂದ್ರಕ್ಕೆ ಸುಮಾರು 64 ದೇಶಗಳ ರಾಯಭಾರಿಗಳು ಹಾಗೂ ಹೈಕಮೀಷನರ್ಗಳು ಭಾರತ್ ಬಯೋಟೆಕ್ಗೆ ಭೇಟಿ ನೀಡಿದ್ದಾರೆ.
ಭಾರತ್ ಬಯೋಟೆಕ್ಗೆ ಅವರು ಭೇಟಿ ನೀಡಿದ್ದು, ಸಂಸ್ಥೆಯ ಸಿಎಂಡಿ ಕೃಷ್ಣ ಎಲ್ಲ ಕೋವ್ಯಾಕ್ಸಿನ್ ಬಗ್ಗೆ ರಾಯಭಾರಿಗಳು ಹಾಗೂ ಹೈಕಮೀಷನರ್ಗಳಿಗೆ ಮಾಹಿತಿ ನೀಡಿದ್ದಾರೆ. ಬಂದಿದ್ದ ವಿದೇಶಿ ಪ್ರಜೆಗಳು ಕೋವ್ಯಾಕ್ಸಿನ್ ಬಗ್ಗೆ ವಿಶ್ಲೇಷಣೆ ನಡೆಸಿದ್ದಾರೆ.