ಅಲ್ಲೆಪ್ಪಿ(ಕೇರಳ) :ರಸ್ತೆಗಳಿಲ್ಲ, ಕುಡಿಯುವ ನೀರಿನ ಕೊರತೆ ಮತ್ತು ಇತರ ಸೌಲಭ್ಯಗಳು ಮಾಯವಾಗಿದೆ ಎಂದು ಅಲಪ್ಪುಳ ಜಿಲ್ಲೆಯಿಂದ 13 ಕಿ.ಮೀ ದೂರದಲ್ಲಿರುವ ಅಂಬಲಪುಳ ಪಟ್ಟಣದ ಕಾಂಜಿಪಾಡಂ ಎಂಬ ಗ್ರಾಮದ ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಅಲ್ಲೆಪ್ಪಿ ಜಿಲ್ಲೆಯ ಅಂಬಲಪ್ಪುಳ (ಉತ್ತರ) ಗ್ರಾಮ ಪಂಚಾಯತ್‌ನ ಕಾಂಞಪದಂ ಗ್ರಾಮದ ಪಶ್ಚಿಮ ಭಾಗದ ನಿವಾಸಿಗಳು ಮಾಧ್ಯಮಕ್ಕೆ ತನ್ನ ಗ್ರಾಮದಲ್ಲಿನ ಸಮಸ್ಯೆಗಳ ಬಗ್ಗೆ ತಿಳಿಸಿದ್ದಾರೆ. "ನಮಗೆ ಇಲ್ಲಿ ರಸ್ತೆ ಇಲ್ಲ. ಯಾರಾದರೂ ಅನಾರೋಗ್ಯಕ್ಕೆ ಒಳಗಾಗಿದ್ದರೆ, ಆಸ್ಪತ್ರೆಗೆ ಹೋಗಲು ನಮಗೆ ಕಷ್ಟವಾಗುತ್ತದೆ. ಕುಡಿಯುವ ನೀರಿನ ಸಮಸ್ಯೆಗಳನ್ನೂ ಎದುರಿಸುತ್ತಿದ್ದೇವೆ" ಎಂದಿದ್ದಾರೆ.
"ಚುನಾವಣಾ ಸಮಯದಲ್ಲಿ ರಾಜಕಾರಣಿಗಳು ಯಾವಾಗಲೂ ನಮಗೆ ರಸ್ತೆಗಳು ಮತ್ತು ಇತರ ಮೂಲ ಸೌಲಭ್ಯಗಳನ್ನು ಒದಗಿಸುವ ಬಗ್ಗೆ ಭರವಸೆ ನೀಡುತ್ತಾರೆ. ಆದರೆ, ಚುನಾವಣೆಯ ನಂತರ ಯಾರೂ ಈ ಭಾಗಕ್ಕೆ ತಿರುಗುವುದಿಲ್ಲ" ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.