ಗ್ವಾಲಿಯರ್(ಮಧ್ಯಪ್ರದೇಶ):ಚಿಕ್ಕ ಮಕ್ಕಳು ಆಟ - ಪಾಠಕ್ಕೆ ಮಾತ್ರ ಸೀಮಿತ ಎಂಬಂತೆ ನೋಡುತ್ತೇವೆ. ಆದರೆ, ಈ ಬಾಲಕಿ ಮಾತ್ರ ವಿಭಿನ್ನ. ತನ್ನ 5 ವರ್ಷ ವಯಸ್ಸಿನಲ್ಲೇ 44 ದೇಶಗಳು, 110 ಅಂತಾರಾಷ್ಟ್ರೀಯ ನಗರಗಳನ್ನು ಪ್ರದಕ್ಷಿಣೆ ಹಾಕಿದ್ದಾಳೆ. ಮಗುವಿನ ಈ ಸಾಧನೆ ಬುಕ್ ಆಫ್ ರೆಕಾರ್ಡ್ಸ್ನಲ್ಲಿ ದಾಖಲಾಗಿದೆ.
ಗ್ವಾಲಿಯರ್ ನಿವಾಸಿಯಾದ ಈ ವಿಶಿಷ್ಟ ಬಾಲಕಿಯ ಹೆಸರು ಪಾರಿಜಾ ಖಾನ್. ಅಪ್ಪ ನೌಕಾಪಡೆಯಲ್ಲಿ ಕ್ಯಾಪ್ಟನ್. 2016 ರಲ್ಲಿ ಜನಿಸಿದ ಪಾರಿಜಾ ಬರೋಬ್ಬರಿ 44 ದೇಶಗಳನ್ನು ಪರ್ಯಟನೆ ಮಾಡಿದ್ದಾಳೆ. ಹಲವು ಖ್ಯಾತ ನಗರಗಳಿಗೆ ಭೇಟಿ ನೀಡಿದ್ದಾಳೆ.
ಹೇಗೆ ಶುರುವಾಯ್ತು ಪರ್ಯಟನೆ:ನೌಕಾಪಡೆಯಲ್ಲಿ ಕ್ಯಾಪ್ಟನ್ ಆಗಿದ್ದ ತಂದೆ ಶಾಹಿದ್ ರಜಾ ಅವರು ಪದೇ ಪದೆ ವರ್ಗಾವಣೆಯಾಗುತ್ತಿದ್ದರು. ಇದರಿಂದ ಕುಟುಂಬವೂ ಜೊತೆಗೆ ವರ್ಗವಾಗುತ್ತಿತ್ತು. ಈ ವೇಳೆ, ಮಗಳು ಪಾರಿಜಾ ಅಪ್ಪನ ಜೊತೆ ವಿವಿಧ ದೇಶಗಳ ಪರ್ಯಟನೆ ಶುರು ಮಾಡಿದ್ದಳು. ಇದಲ್ಲದೇ, ಕುಟುಂಬಸ್ಥರು ಹಲವು ಕಡೆ ಪ್ರವಾಸ ಹೋಗಿದ್ದಾರೆ. ಹೀಗೆ ಪಾರಿಜಾ 44 ದೇಶಗಳನ್ನು ಸುತ್ತಿದ್ದಾರೆ.