ಕರ್ನಾಟಕ

karnataka

ETV Bharat / bharat

Amarnath Yatra: ಕೋವಿಡ್​ನಿಂದ ಈ ವರ್ಷವೂ ಅಮರನಾಥ ಯಾತ್ರೆ ರದ್ದು

ಕೊರೊನಾ ವೈರಸ್​ ಉಲ್ಬಣಗೊಳ್ಳುವ ಉದ್ದೇಶದಿಂದಾಗಿ ಈ ವರ್ಷವೂ ಅಮರನಾಥ ಯಾತ್ರೆ ರದ್ದುಗೊಳಿಸಲಾಗಿದೆ. ಆನ್​ಲೈನ್​ ಮೂಲಕ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿದು ಬಂದಿದೆ.

Amarnath Yatra
Amarnath Yatra

By

Published : Jun 21, 2021, 7:32 PM IST

Updated : Jun 21, 2021, 7:45 PM IST

ಶ್ರೀನಗರ:ಅಮರನಾಥ ಯಾತ್ರೆ ಕೈಗೊಳ್ಳಲು ಕಾತರದಿಂದ ಕಾಯುತ್ತಿದ್ದ ಭಕ್ತರಿಗೆ ಇದೀಗ ಕಹಿ ಸುದ್ದಿ ಸಿಕ್ಕಿದೆ. ಕೊರೊನಾ ವೈರಸ್ ಅಲೆ ಕಾರಣದಿಂದಾಗಿ ಈ ವರ್ಷವೂ ಅಮರನಾಥ ಯಾತ್ರೆ ರದ್ದುಗೊಳಿಸಿದೆ. ಇದೇ ವಿಚಾರವಾಗಿ ಜಮ್ಮು-ಕಾಶ್ಮೀರ ಲೆಪ್ಟಿನೆಂಟ್​ ಗವರ್ನರ್ ಟ್ವೀಟ್ ಮಾಡಿ ಮಾಹಿತಿ ಹಂಚಿಕೊಂಡಿದ್ದಾರೆ.

ಜಮ್ಮು - ಕಾಶ್ಮೀರ ಲೆಫ್ಟಿನೆಂಟ್​ ಗವರ್ನರ್​ ಮನೋಜ್​ ಸಿನ್ಹಾ ಟ್ವೀಟ್​ ಮಾಡಿದ್ದು, ಜನರ ಜೀವ ಉಳಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಸಾಂಕ್ರಾಮಿಕ ಸೋಂಕು ಕೊರೊನಾ ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ. ಹೀಗಾಗಿ 56 ದಿನಗಳ ಅಮರನಾಥ ಯಾತ್ರ ಈ ವರ್ಷವೂ ರದ್ದುಗೊಂಡಿದೆ. ಆದರೆ, ಆನ್​ಲೈನ್​ ಮೂಲಕ ದರ್ಶನ ಪಡೆದುಕೊಳ್ಳಬಹುದಾಗಿದೆ.

ಜಮ್ಮು-ಕಾಶ್ಮೀರದ ಅನಂತನಾಗ್ ಜಿಲ್ಲೆಯಲ್ಲಿರುವ ಅಮರನಾಥ​ ದೇವಾಲಯಕ್ಕೆ ಪ್ರತಿ ವರ್ಷ ಲಕ್ಷಾಂತರ ಭಕ್ತರು ಭೇಟಿ ನೀಡುತ್ತಾರೆ. ಆದರೆ, ಅನೇಕ ಜನರು ಒಂದೆಡೆ ಸೇರುವುದರಿಂದ ಸೋಂಕು ಹಬ್ಬುವ ಸಾಧ್ಯತೆಯಿದ್ದು, ಈ ನಿರ್ಧಾರ ಕೈಗೊಳ್ಳಲಾಗಿದೆ. ಕಳೆದ ವರ್ಷವೂ ಯಾತ್ರೆ ರದ್ದುಗೊಳಿಸಲಾಗಿತ್ತು.

ಇದನ್ನೂ ಓದಿರಿ: 10 ನಿಮಿಷದಲ್ಲಿ 108 ಸಲ 'ಸೂರ್ಯ ನಮಸ್ಕಾರ'.. ವಿಶ್ವ ದಾಖಲೆ ಬರೆದ ಮಹಿಳೆ

ಈ ವರ್ಷದ ಅಮರನಾಥ ಯಾತ್ರೆ ಜೂನ್​ 28ಕ್ಕೆ ಆರಂಭಗೊಂಡು, ಆಗಸ್ಟ್​​ 22ಕ್ಕೆ ಮುಕ್ತಾಯಗೊಳ್ಳಬೇಕಾಗಿತ್ತು. ಆದರೆ, ಸದ್ಯದ ಪರಿಸ್ಥಿತಿಯಲ್ಲಿ ಕೊರೊನಾ ಸೋಂಕು ಹರಡುವ ಸಾಧ್ಯತೆ ಇದ್ದು, ಈ ನಿರ್ಧಾರ ಕೈಗೊಳ್ಳಲಾಗಿದೆ. ಬೆಳಗ್ಗೆ ಮತ್ತು ಸಂಜೆ ಆರತಿಯ ನೇರ ದರ್ಶನಕ್ಕೆ ವ್ಯವಸ್ಥೆ ಮಾಡಲು ಮಂಡಳಿಯು ನಿರ್ಧರಿಸಿದ್ದು, ಅದರ ನೇರ ದರ್ಶನಕ್ಕೆ ಆನ್​ಲೈನ್​ ವ್ಯವಸ್ಥೆ ಮಾಡಲಾಗಿದೆ.

Last Updated : Jun 21, 2021, 7:45 PM IST

ABOUT THE AUTHOR

...view details