ಕರ್ನಾಟಕ

karnataka

ETV Bharat / bharat

ಬನಿಹಾಲ್​ ಬಳಿ ವಾಹನ ಪಲ್ಟಿ:  ಮೂವರು ಅಮರನಾಥ ಯಾತ್ರಾರ್ಥಿಗಳಿಗೆ ಗಾಯ - 3 ಅmarnath pilgrims injured in banihal

ಅಮರನಾಥ ಯಾತ್ರೆಗೆ ತೆರಳುತ್ತಿದ್ದ ವೇಳೆ ವಾಹನ ಪಲ್ಟಿಯಾಗಿ ಮೂವರಿಗೆ ಗಾಯಗಳಾಗಿರುವ ಘಟನೆ ಬನಿಹಾಲ್​ನಲ್ಲಿ ನಡೆದಿದೆ.

amarnath incident
ಬನಿಹಾಲ್​ ಬಳಿ ವಾಹನ ಪಲ್ಟಿ 3 ಅಮರನಾಥ ಯಾತ್ರಾರ್ಥಿಗಳಿಗೆ ಗಾಯ

By

Published : Jul 1, 2022, 11:03 AM IST

ಬನಿಹಾಲ್‌(ಜಮ್ಮು-ಕಾಶ್ಮೀರ): ಚಾಲಕನ ನಿಯಂತ್ರಣ ತಪ್ಪಿ ಅಮರನಾಥ ಯಾತ್ರಾರ್ಥಿಗಳ ಹೊತ್ತೊಯ್ಯುತ್ತಿದ ಟೆಂಪೊ - ಟ್ರಾವೆಲರ್​ ವಾಹನ ಪಲ್ಟಿಯಾಗಿರುವ ಘಟನೆ ಬನಿಹಾಲ್​ ಬಳಿಯ ಜಮ್ಮು-ಶ್ರೀನಗರದ ಹೆದ್ದಾರಿಯಲ್ಲಿ ನಡೆದಿದೆ. ಘಟನೆಯಲ್ಲಿ ಮೂವರು ಯಾತ್ರಾರ್ಥಿಗಳು ಗಾಯಗೊಂಡಿದ್ದಾರೆ.

ಇಂದು ಬೆಳಗ್ಗೆ ಜಮ್ಮುವಿನಿಂದ ಕಾಶ್ಮೀರಕ್ಕೆ ಯಾತ್ರಾರ್ಥಿಗಳು ಪ್ರಯಾಣ ಬೆಳೆಸಿದ್ದರು. ಈ ವೇಳೆ, ತಿರುವು ರಸ್ತೆಯಿದ್ದ ಕಾರಣ ಚಾಲಕನ ನಿಯಂತ್ರಣ ತಪ್ಪಿ ವಾಹನ ಜಾರಿ ರಸ್ತೆಯಿಂದ ಕೆಳಗಿಳಿದು ಪಲ್ಟಿಯಾಗಿದೆ. ವಾಹನದಲ್ಲಿ ಪ್ರಯಾಣಿಸುತ್ತಿದ್ದ ಉತ್ತರ ಪ್ರದೇಶದ ಕುಂದನ್​ ಕುಮಾರ್​(59), ಛತ್ತೀಸ್​ಗಢದ ವಿವೇಕ್​(10) ಮತ್ತು ಅನಿತಾ ಗುಪ್ತ(49) ಘಟನೆಯಲ್ಲಿ ಗಾಯಗೊಂಡಿದ್ದಾರೆ. ತಕ್ಷಣ ಆ ಮೂವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಯಾತ್ರಾರ್ಥಿಗಳು ಜುಲೈ 3ರಂದು ಅಮರನಾಥ ಗುಹಾಲಯ ದೇಗುಲಕ್ಕೆ ಭೇಟಿ ನೀಡಿ ಶಿವನ ದರ್ಶನ ಪಡೆಯಬೇಕೆಂದು ತೆರಳಿದ್ದ ವೇಳೆ ಈ ಘಟನೆ ಸಂಭವಿಸಿದೆ ಎಂದು ಆಸ್ಪತ್ರೆಯ ಸಿಬ್ಬಂದಿಯೊಬ್ಬರು ತಿಳಿಸಿದ್ದಾರೆ.

ಇದನ್ನೂ ಓದಿ:ಹೈಕೋರ್ಟ್ ಕಣ್ಗಾವಲಿನಲ್ಲಿ ಪಿಎಸ್ಐ ನೇಮಕ ಹಗರಣದ ತನಿಖೆ: ಸಮಗ್ರ ವರದಿ ಸಲ್ಲಿಸಲು ಸಿಐಡಿಗೆ ಸೂಚನೆ

ABOUT THE AUTHOR

...view details