ಕರ್ನಾಟಕ

karnataka

ETV Bharat / bharat

ಪಂಜಾಬ್​​ ಕಾಂಗ್ರೆಸ್​​ನಲ್ಲಿ ಆಂತರಿಕ ತಳಮಳ: ಖರ್ಗೆ ನೇತೃತ್ವದ ಸಮಿತಿಯೊಂದಿಗೆ ಸಿಎಂ ಸಮಾಲೋಚನೆ - ದೆಹಲಿಗೆ ತೆರಳಿರುವ ಪಂಜಾಬ್ ಸಿಎಂ

ಅಮರಿಂದರ್ ಸಿಂಗ್​​​ ಮತ್ತು ನವಜೋತ್​ ಸಿಂಗ್ ಸಿಧು ನಡುವಿನ ಭಿನ್ನಾಭಿಪ್ರಾಯ ಬಗೆಹರಿಸಲು ಮಲ್ಲಿಕಾರ್ಜುನ ಖರ್ಗೆ, ಹರೀಶ್ ರಾವತ್, ಜೆ.ಪಿ.ಅಗರ್ವಾಲ್​​ ಅವರನ್ನೊಳಗೊಂಡ ಸಮಿತಿ ರಚಿಸಲಾಗಿದೆ.

ಪಂಜಾಬ್ ಸಿಎಂ
ಪಂಜಾಬ್ ಸಿಎಂ

By

Published : Jun 3, 2021, 4:43 PM IST

Updated : Jun 3, 2021, 4:50 PM IST

ನವದೆಹಲಿ: ಪಂಜಾಬ್​​​​​ ಸರ್ಕಾರದಲ್ಲಿ ಬಿರುಕು ಮೂಡಿದ್ದು, ಸಿಎಂ ವಿರುದ್ಧವೇ ಸಚಿವರು, ಶಾಸಕರು ತಿರುಗಿಬಿದ್ದಿದ್ದಾರೆ. ಈ ಮಧ್ಯೆ, ಅಮರಿಂದರ್ ಸಿಂಗ್ ರಾಷ್ಟ್ರರಾಜಧಾನಿಗೆ ತೆರಳಿದ್ದು, ಕಾಂಗ್ರೆಸ್ ಹಿರಿಯ ನಾಯಕರನ್ನು ಭೇಟಿ ಮಾಡಲಿದ್ದಾರೆ.

ಮೂಲಗಳ ಪ್ರಕಾರ ಸಿಂಗ್, ಇಂದು ಕಪುರ್ಥಾಲಾ ಸದನದಲ್ಲಿ ಹಿರಿಯ ಪಂಜಾಬ್ ನಾಯಕರನ್ನು ಭೇಟಿ ಮಾಡಲಿದ್ದಾರೆ ಮತ್ತು ನಾಳೆ ರಾಜ್ಯಸಭೆಯಲ್ಲಿ ಪ್ರತಿಪಕ್ಷದ ನಾಯಕ ಮಲ್ಲಿಕಾರ್ಜುನ್ ಖರ್ಗೆ ನೇತೃತ್ವದ ಮೂವರು ಸದಸ್ಯರ ಸಮಿತಿ ಜತೆ ಸಮಾಲೋಚನೆ ನಡೆಸಲಿದ್ದಾರೆ ಎನ್ನಲಾಗಿದೆ.

ಅಮರಿಂದರ್ ಸಿಂಗ್​​​ ಮತ್ತು ನವಜೋತ್​ ಸಿಂಗ್ ಸಿಧು ನಡುವಿನ ಭಿನ್ನಾಭಿಪ್ರಾಯ ಬಗೆಹರಿಸಲು ಮಲ್ಲಿಕಾರ್ಜುನ ಖರ್ಗೆ, ಹರೀಶ್ ರಾವತ್, ಜೆ.ಪಿ.ಅಗರ್ವಾಲ್​​ ಅವರನ್ನೊಳಗೊಂಡ ಸಮಿತಿ ರಚಿಸಲಾಗಿದೆ.

ಇದನ್ನೂ ಓದಿ:ಇಲ್ಲಿನ ಸರ್ಕಾರದಲ್ಲಿ ಮತ್ತೆ ಭಿನ್ನಮತ ಸ್ಫೋಟ: ಸಂಪುಟ ಸಭೆಯಲ್ಲೇ ಸಚಿವರ ಮಧ್ಯೆ ವಾಗ್ವಾದ..!

ಈ ಮಧ್ಯೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಸಂಸದ ಮನೀಶ್ ತಿವಾರಿ, ಕಾಂಗ್ರೆಸ್​ನಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ, ನಾವು ಪ್ರತಿ ಬಾರಿ ಚುನಾವಣೆಗೆ ಹೋದಾಗ ಎಲ್ಲ ನಾಯಕರೊಂದಿಗೆ ಸಮಾಲೋಚಿಸುತ್ತೇವೆ. ಯಾರು ಏನೇ ಹೇಳಿದ್ರೂ, ಅದೊಂದು ತಪ್ಪು ಕಲ್ಪನೆಯಷ್ಟೇ ಎಂದಿದ್ದಾರೆ.

Last Updated : Jun 3, 2021, 4:50 PM IST

ABOUT THE AUTHOR

...view details