ಅಮರಾವತಿ:ಆಂಧ್ರಪ್ರದೇಶದ ರಾಜಧಾನಿ ಅಮರಾವತಿ ಕುರಿತು ಐತಿಹಾಸಿಕ ತೀರ್ಪು ನೀಡಿದ್ದ ಹೈಕೋರ್ಟ್ ನ್ಯಾಯಾಧೀಶ ಸತ್ಯನಾರಾಯಣ ಮೂರ್ತಿ ಸೇವೆಯಿಂದ ಇಂದು ನಿವೃತ್ತರಾಗಿದ್ದು, ರೈತರು ಅದ್ದೂರಿ ಬೀಳ್ಕೊಡುಗೆ ಕೊಟ್ಟರು. ಹೈಕೋರ್ಟ್ನಿಂದ ರಾಯಪುಡಿ ರಸ್ತೆಯವರೆಗೂ ಮೆರವಣಿಗೆ ಮಾಡಿ, ಪುಷ್ಪವೃಷ್ಟಿ ಸುರಿಸಿ ಕೃತಜ್ಞತೆ ಸಲ್ಲಿಸಿದರು.
ನಿವೃತ್ತಿ ದಿನದ ಕೊನೆಯ ಸೇವೆ ಮುಗಿಸಿ ಹೈಕೋರ್ಟ್ನಿಂದ ಹೊರಬಂದ ಸತ್ಯನಾರಾಯಣ ಅವರನ್ನು ಕಂಡ ಜನರು ಕೈಗಳನ್ನು ಮೇಲೆತ್ತಿ ನಮಸ್ಕರಿಸುವ ಮೂಲಕ ಉದ್ಘೋಷ ಮೊಳಗಿಸಿದರು. ಹಸಿರು ಬಣ್ಣದ ಟವೆಲ್, ಸ್ಕಾರ್ಫ್ ಹೊಂದಿದ್ದ ರೈತರು, ಮಹಿಳೆಯರು ಸತ್ಯನಾರಾಯಣ ಅವರ ಹೆಸರು ಪ್ರತಿಧ್ವನಿಸುವಂತೆ ಕೂಗಿದರು.
ರಸ್ತೆಯುದ್ದಕ್ಕೂ ಮೆರವಣಿಗೆ:ಹೈಕೋರ್ಟ್ನಿಂದ ರಾಯಪುಡಿ ಬಳಿಯ ಸೀಡ್ ಆಕ್ಸೆಸ್ ರಸ್ತೆಯವರೆಗೂ ಹೂವಿನ ದಳಗಳನ್ನು ಚೆಲ್ಲಿ, ಕಾರಿನಲ್ಲಿ ಸತ್ಯನಾರಾಯಣ ಅವರ ಮೆರವಣಿಗೆ ನಡೆಸಲಾಯಿತು. ರಸ್ತೆಯ ಇಕ್ಕೆಲಗಳಲ್ಲಿ ನಿಂತಿದ್ದ ರೈತರು ಕೈಯಲ್ಲಿ ರಾಷ್ಟ್ರಧ್ವಜ ಹಿಡಿದು ಜೈ ಅಮರಾವತಿ ಘೋಷಣೆ ಮೊಳಗಿಸಿದರು.