ಅಲ್ವಾರ್ (ರಾಜಸ್ಥಾನ): ಅಪ್ರಾಪ್ತ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ, ದುಷ್ಕೃತ್ಯದ ಚಿತ್ರೀಕರಣದ ಮಾಡಿ ಕಳೆದ ಒಂದು ವರ್ಷದಿಂದಲೂ ಬ್ಲ್ಯಾಕ್ ಮೇಲ್ ಮಾಡುತ್ತಿದ್ದ ಪ್ರಕರಣ ರಾಜಸ್ಥಾನದ ಅಲ್ವಾರ್‌ನಲ್ಲಿ ಬೆಳಕಿಗೆ ಬಂದಿದೆ. ಅಲ್ಲದೇ, ಬ್ಲ್ಯಾಕ್ ಮೇಲ್ ಮಾಡುತ್ತಲೇ ಸಾವಿರಾರು ರೂಪಾಯಿ ಹಣವನ್ನೂ ಬಾಲಕಿಯಿಂದ ಕಾಮುಕರು ಸುಲಿಗೆ ಮಾಡಿದ್ದಾರೆ. ಈ ಸಂಬಂಧ 8 ಜನರ ವಿರುದ್ಧ ಪೊಲೀಸ್ ಕೇಸ್ ದಾಖಲಿಸಿಕೊಂಡು, ತನಿಖೆ ಕೈಗೊಂಡಿದ್ದಾರೆ.
2021ರ ಡಿಸೆಂಬರ್ 31ರಂದು ಕಾಮುಕರು ಪುಸಲಾಯಿಸಿ ಕರೆದುಕೊಂಡು ಹೋಗಿ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ಜೊತೆಗೆ ಇಡೀ ದುಷ್ಕೃತ್ಯದ ವಿಡಿಯೋ ಮಾಡಿದ್ದಾರೆ. ನಂತರ ಗಂಟೆಗಟ್ಟಲೆ ಪ್ರಜ್ಞಾಹೀನಳಾಗಿದ್ದ ನಾನು ಹೇಗೋ ಮನೆ ಬಂದು ತಲುಪಿದೆ. ಆದರೆ, ಇದಾದ ನಂತರ ಅತ್ಯಾಚಾರಿಗಳು ವಿಡಿಯೋ ಇಟ್ಟುಕೊಂಡು ನನಗೆ ಬ್ಲ್ಯಾಕ್‌ಮೇಲ್ ಮಾಡಲು ಪ್ರಾರಂಭಿಸಿದರು ಎಂದು ಸಂತ್ರಸ್ತೆ ತಿಳಿಸಿದ್ದಾರೆ.
ಇದನ್ನೂ ಓದಿ:ಕೋಣೆಯಲ್ಲಿ ಕೂಡಿ ಹಾಕಿ ಬಾಲಕಿ ಮೇಲೆ ಗ್ಯಾಂಗ್ರೇಪ್: ಮೂವರು ಆರೋಪಿಗಳು ಅಂದರ್
ವಿಡಿಯೋ ವೈರಲ್ ಮಾಡುವುದಾಗಿ ಬೆದರಿಕೆ: ನನ್ನ ವಿಡಿಯೋ ಇಟ್ಟುಕೊಂಡಿದ್ದ ಆರೋಪಿಗಳು ನನಗೆ ಬೆದರಿಕೆ ಹಾಕುತ್ತಿದ್ದರು. ಈ ಘಟನೆಯನ್ನು ಯಾರೊಂದಿಗಾದರೂ ಹಂಚಿಕೊಂಡರೆ ವಿಡಿಯೋ ಕ್ಲಿಪ್‌ಗಳನ್ನು ವೈರಲ್ ಆಗುತ್ತವೆ ಎಂದು ಹೆದರಿಸುತ್ತಿದ್ದರು. ಬಳಿಕ ಈ ವಿಡಿಯೋಗಳ ಹೆಸರು ಹೇಳಿ ನನ್ನಿಂದ ಹಣ ವಸೂಲಿ ಮಾಡಲು ಶುರು ಮಾಡಿದರು. ಇದುವರೆಗೆ ಸುಮಾರು 50 ಸಾವಿರ ರೂಪಾಯಿ ಸುಲಿಗೆ ಮಾಡಿದ್ದಾರೆ. ಇಷ್ಟೇ ಅಲ್ಲ, 2022ರ ಜನವರಿ 3 ರಂದು ಮತ್ತು ನಂತರ ಏಪ್ರಿಲ್ 6ರಂದು ಕೂಡ ನನ್ನ ಮೇಲೆ ಅತ್ಯಾಚಾರ ಎಸಗಲಾಗಿದೆ ಎಂದು ಬಾಲಕಿ ಆರೋಪಿಸಿದ್ದಾರೆ.