ಹೈದರಾಬಾದ್ :ತೆಲುಗು ಸ್ಟೈಲೀಶ್ ಸ್ಟಾರ್ ಅಲ್ಲು ಅರ್ಜುನ್ ಅಭಿನಯದ ಬಹುನಿರೀಕ್ಷಿತ 'ಪುಷ್ಪ' ಹಾಗೂ ಬಾಲಿವುಡ್ ಹೀರೋ ರಣವೀರ್ ಸಿಂಗ್ ಅಭಿನಯದ '83' ಸಿನಿಮಾ ಒಂದೇ ದಿನ ತೆರೆ ಮೇಲೆ ಬರಲು ಸಜ್ಜಾಗಿದ್ದವು. ಆದರೆ, ಎರಡು ಚಿತ್ರಗಳ ನಡುವೆ ಘರ್ಷಣೆ ಯಾಕೆ ಅಂತಾ ಒಂದು ವಾರ ಮುಂಚಿತವಾಗಿ ಬಿಡುಗಡೆ ಮಾಡಲು ಪುಷ್ಪ ಚಿತ್ರತಂಡ ನಿರ್ಧರಿಸಿದೆ.
ಕಬೀರ್ ಖಾನ್ ನಿರ್ದೇಶನದ '83' ಸಿನಿಮಾವು ಕ್ರಿಕೆಟ್ ದಿಗ್ಗಜ ಕಪಿಲ್ ದೇವ್ ಜೀವನಾಧಾರಿತ. ಈ ವರ್ಷ ಕ್ರಿಸ್ಮಸ್ಗೆ ತೆರೆ ಮೇಲೆ ಬರಲಿದೆ. ಹೀಗಾಗಿ, ಡಿಸೆಂಬರ್ 17ರಂದು 'ಪುಷ್ಪ' ಸಿನಿಮಾ ರಿಲೀಸ್ ಆಗಲಿದೆ. ಈ ವಿಚಾರವನ್ನು ಭಾರತೀಯ ಚಲನಚಿತ್ರ ವಿಮರ್ಶಕ ತರಣ್ ಆದರ್ಶ್ ತಮ್ಮ ಟ್ವಿಟರ್ ಖಾತೆಯಲ್ಲಿ ದೃಢಪಡಿಸಿದ್ದಾರೆ.