ಕರ್ನಾಟಕ

karnataka

ETV Bharat / bharat

ನಮಗೆ ರಾಮ್​ಲೀಲಾ ಮೈದಾನದಲ್ಲಿ ಪ್ರತಿಭಟಿಸಲು ಅನುಮತಿ ನೀಡಿ: ಸುಪ್ರೀಂಗೆ ರೈತರ ಮನವಿ - ವಕೀಲ ದುಷ್ಯಂತ್ ದವೆ

ರೈತರಿಗೆ ಪ್ರತಿಭಟನೆ ಮಾಡುವ ಹಕ್ಕು ಇದ್ದರೂ, ಅವರು ರಸ್ತೆಗಳನ್ನು ಅನಿರ್ದಿಷ್ಟ ಕಾಲ ನಿರ್ಬಂಧಿಸುವಂತಿಲ್ಲ ಎಂದು ನ್ಯಾ. ಸಂಜಯ್ ಕಿಶನ್ ಕೌಲ್ ನೇತೃತ್ವದ ಪೀಠ ಹೇಳಿದೆ.

Supreme Court
Supreme Court

By

Published : Oct 21, 2021, 5:27 PM IST

ನವದೆಹಲಿ: ನಮಗೆ ರಾಮ್​ಲೀಲಾ ಮೈದಾನದಲ್ಲಿ ಪ್ರತಿಭಟನೆ ನಡೆಸಲು ಅನುಮತಿ ನೀಡಿದ್ರೆ, ನಾವು ಗಡಿಯಲ್ಲಿ ರಸ್ತೆ ತಡೆದು ಪ್ರತಿಭಟನೆ ಮಾಡಲ್ಲ ಎಂದು ರೈತ ಹೋರಾಟಗಾರರು ನ್ಯಾಯಾಲಯದ ಗಮನಕ್ಕೆ ತಂದಿದ್ದಾರೆ.

ರೈತರಿಗೆ ಪ್ರತಿಭಟನೆ ಮಾಡುವ ಹಕ್ಕು ಇದ್ದರೂ, ಅವರು ರಸ್ತೆಗಳನ್ನು ಅನಿರ್ದಿಷ್ಟಾವಧಿ ಕಾಲ ನಿರ್ಬಂಧಿಸುವಂತಿಲ್ಲ ಎಂದು ನ್ಯಾ. ಸಂಜಯ್ ಕಿಶನ್ ಕೌಲ್ ನೇತೃತ್ವದ ಪೀಠ ಹೇಳಿದೆ. ಅಲ್ಲದೇ, ಈ ಸಂಬಂಧ ಎರಡು ವಾರಗಳಲ್ಲಿ ಅಫಿಡವಿಟ್ ಸಲ್ಲಿಸುವಂತೆ ರೈತ ಸಂಘಕ್ಕೆ ನ್ಯಾಯಾಲಯ ಸೂಚನೆ ನೀಡಿದೆ.

ರೈತರು ಹೋರಾಟದ ವೇಳೆ ರಸ್ತೆಗಳನ್ನು ನಿರ್ಬಂಧಿಸಬಾರದು ಎಂದು ಸೂಚಿಸಿರುವ ಸುಪ್ರೀಂಕೋರ್ಟ್, ಡಿಸೆಂಬರ್ 7 ಕ್ಕೆ ವಿಚಾರಣೆ ಮುಂದೂಡಿದೆ. ಚರ್ಚೆಗಳ ಮೂಲಕ ಪ್ರತಿರೋಧವನ್ನು ಪರಿಹರಿಸಬಹುದು ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಹೇಳಿದ್ದಾರೆ.

ರೈತ ಸಂಘದ ಪರ ಹಾಜರಾದ ವಕೀಲ ದುಷ್ಯಂತ್ ದವೆ, ದೆಹಲಿ ಪೊಲೀಸರು ಉದ್ದೇಶಪೂರ್ವಕವಾಗಿ ರಸ್ತೆಗಳನ್ನು ನಿರ್ಬಂಧಿಸುತ್ತಿದ್ದಾರೆ ಎಂದು ವಾದ ಮಂಡಿಸಿದರು. ರೈತರು ರಾಮ್ ಲೀಲಾ ಮೈದಾನಕ್ಕೆ ಬರಲು ಅವಕಾಶ ನೀಡಬೇಕು. ಕೃಷಿ ಕಾನೂನುಗಳನ್ನು ಕೆಲವು ದುರುದ್ದೇಶಗಳಿಂದಾಗಿ ಅಂಗೀಕರಿಸಲಾಗಿದೆ. ಈ ಕೃಷಿ ಕಾನೂನುಗಳಿಂದ ರೈತರಿಗಿಂತ ಹೆಚ್ಚಾಗಿ ಕಾರ್ಪೊರೇಟ್​ ಕಂಪನಿಗಳಿಗೆ ಲಾಭ ಎಂದು ದವೆ ಹೇಳಿದ್ರು.

ರಾಮ್​ಲೀಲಾ ಮೈದಾನಕ್ಕೆ ಪ್ರತಿಭಟನಾಕರರಿಗೆ ಅನುಮತಿ ನಿರಾಕರಿಸಿದ ನಂತರ, ಬಿಜೆಪಿ ಆ ಸ್ಥಳದಲ್ಲಿ ರ್ಯಾಲಿ ನಡೆಸಿತು. ರೈತರ ವಿಚಾರದಲ್ಲಿ ಮಾತ್ರ ಸರ್ಕಾರ ಯಾಕೆ ಹೀಗೆ ಮಾಡುತ್ತಿದೆಯೋ ಗೊತ್ತಿಲ್ಲ ಎಂದು ವಕೀಲ ದವೆ ಅಸಮಾಧಾನ ವ್ಯಕ್ತಪಡಿಸಿದರು.

ಜನರಿಗೆ ರಸ್ತೆಗಳಲ್ಲಿ ಸಂಚರಿಸುವ ಹಕ್ಕಿದ್ದು, ಹೋರಾಟಗಾರರು ಪ್ರತಿಭಟನೆಯ ವೇಳೆ ರಸ್ತೆಗಳನ್ನು ನಿರ್ಬಂಧಿಸಲು ಸಾಧ್ಯವಿಲ್ಲ ಎಂದು ನ್ಯಾಯಮೂರ್ತಿ ಕೌಲ್ ಹೇಳಿದರು. ಜೀವ ಮತ್ತು ಸಾರ್ವಜನಿಕ ಆಸ್ತಿಗೆ ಹಾನಿಯಾಗದಂತೆ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ ಎಂದು ದೇವ್ ಹೇಳಿದ್ದಾರೆ.

ದೆಹಲಿಗೆ ಅರ್ಧ ಗಂಟೆ ಪ್ರಯಾಣ ಆದರೆ, ರೈತರ ಪ್ರತಿಭಟನೆಯಿಂದಾಗಿ ಎರಡು ಗಂಟೆ ಸಂಚರಿಸುವ ಅನಿವಾರ್ಯತೆ ಇದೆ ಎಂದು ಮೋನಿಕಾ ಅಗರ್ವಾಲ್ ಎಂಬುವರು ಸುಪ್ರೀಂಗೆ ಅರ್ಜಿ ಸಲ್ಲಿಸಿದ್ದರು.

ABOUT THE AUTHOR

...view details