ಕರ್ನಾಟಕ

karnataka

ETV Bharat / bharat

ಹಿಜಾಬ್​ ಧರಿಸುತ್ತಿದ್ದ ಪ್ರಾಂಶುಪಾಲೆಗೆ ಕಿರುಕುಳ ಆರೋಪ.. ಮನನೊಂದು ರಾಜೀನಾಮೆ!? - ಹಿಜಾಬ್ ಹಾಕಿಕೊಂಡು ಬಂದಿದ್ದಕ್ಕಾಗಿ ಕಿರುಕುಳ

ಹಿಜಾಬ್ ಹಾಕಿಕೊಂಡು ಕಾಲೇಜ್​ಗೆ ಬರುತ್ತಿದ್ದ ಮುಸ್ಲಿಂ ಪ್ರಾಂಶುಪಾಲೆಗೆ ಪ್ರತಿದಿನ ಕಿರುಕುಳ ನೀಡುತ್ತಿದ್ದ ಆರೋಪ ಪ್ರಕರಣ ಬೆಳಕಿಗೆ ಬಂದಿದ್ದು, ಇದರಿಂದ ಮನನೊಂದು ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

Hijab connection of Muslim principal's resignation
Hijab connection of Muslim principal's resignation

By

Published : Mar 26, 2022, 3:20 PM IST

Updated : Mar 26, 2022, 4:20 PM IST

ವಿರಾರ್​(ಮಹಾರಾಷ್ಟ್ರ): ಕರ್ನಾಟಕದಲ್ಲಿ ಶುರುವಾದ ಉದ್ಭವವಾದ ಹಿಜಾಬ್​ ವಿವಾದ ದೇಶದ ಬಹುತೇಕ ರಾಜ್ಯಗಳಲ್ಲೂ ಹಬ್ಬಿದೆ. ಇದೀಗ ಮಹಾರಾಷ್ಟ್ರದಲ್ಲಿ ಶಾಲಾ ಪ್ರಾಂಶುಪಾಲೆಯಾಗಿ ಸೇವೆ ಸಲ್ಲಿಸುತ್ತಿದ್ದ ಮುಸ್ಲಿಂ ಮಹಿಳೆಗೆ ಹಿಜಾಬ್​ ಹಾಕಿಕೊಂಡು ಬಂದಿದ್ದಕ್ಕಾಗಿ ಕಿರುಕುಳ ನೀಡಲಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಇದೇ ಕಾರಣಕ್ಕಾಗಿ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆಂಬ ಮಾಹಿತಿ ಹೊರಬಿದ್ದಿದೆ.

2019ರ ಜುಲೈನಲ್ಲಿ ವಿರಾರ್​​ನಲ್ಲಿರುವ ವಿವಾ ಕಾನೂನು ಕಾಲೇಜ್​ ಪ್ರಾಂಶುಪಾಲೆಯಾಗಿ ಬತ್ತುಲ್ ಹಮೀದ್​ ನೇಮಕಗೊಂಡಿದ್ದರು. ಕಳೆದ ಕೆಲ ದಿನಗಳಿಂದ ಅವರು ಕಾಲೇಜ್​​ನಲ್ಲಿ ಮಾನಸಿಕವಾಗಿ ಕಿರುಕುಳ ಅನುಭವಿಸುತ್ತಿದ್ದು, ಕಾಲೇಜ್​ಗೆ ಬಂದಾಗ ಅಲ್ಲಿ ಕೆಲಸ ಮಾಡುವ ಸಿಬ್ಬಂದಿ ಕೊಠಡಿಯೊಳಗೆ ಹೋಗಲು ಬಿಡದೇ ಇರುವುದು, ಇತರೆ ಸಿಬ್ಬಂದಿ ಸರಿಯಾಗಿ ಸಹಕಾರ ನೀಡದಿರುವುದು ಸೇರಿದಂತೆ ಅನೇಕ ರೀತಿಯ ತೊಂದರೆ ಅನುಭವಿಸಿದ್ದಾರೆ. ಇದರಿಂದ ಮನನೊಂದಿರುವ ಅವರು ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎನ್ನಲಾಗ್ತಿದೆ.

ಈ ಸಂಬಂಧ ಕಾಲೇಜ್​ ಆಡಳಿತ ಮಂಡಳಿಗೆ ಬರೆದ ಪತ್ರದಲ್ಲಿ 'ಆರಂಭದ ದಿನಗಳಲ್ಲಿ ಆಡಳಿತ ಮಂಡಳಿ, ಬೋಧಕ, ಬೋಧಕೇತರ ವರ್ಗ ಮತ್ತು ವಿದ್ಯಾರ್ಥಿಗಳು ನನ್ನೊಂದಿಗೆ ಉತ್ತಮವಾಗಿ ಮಾತನಾಡುತ್ತಿದ್ದರು. ಆದರೆ, ಕಳೆದ ಕೆಲ ದಿನಗಳಿಂದ ಕಾಲೇಜ್​ನಲ್ಲಿನ ವಾತಾವರಣ ಸರಿಯಾಗಿಲ್ಲ. ಇದರಿಂದ ನನಗೆ ಮಾನಸಿಕವಾಗಿ ಕಿರಿಕಿರಿಯಾಗುತ್ತಿದ್ದು, ಇದೇ ಕಾರಣಕ್ಕಾಗಿ ಪ್ರಾಂಶುಪಾಲ ಹುದ್ದೆಯಿಂದ ಕೆಳಗಿಳಿಯುತ್ತಿದ್ದೇನೆ' ಎಂದು ಉಲ್ಲೇಖಿಸಿದ್ದಾರೆ. ಆದ್ರೆ ರಾಜೀನಾಮೆ ಪತ್ರದಲ್ಲಿ ಹಿಜಾಬ್​​​​ ವಿಚಾರದ ಬಗ್ಗೆ ಯಾವುದೇ ರೀತಿಯ ಉಲ್ಲೇಖ ಮಾಡಿಲ್ಲ. ಇದಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲು ಮಾಡಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಇದನ್ನೂ ಓದಿ:7 ತಿಂಗಳಲ್ಲಿ 3 ಬಾರಿ ಕಚ್ಚಿದ ನಾಗರಹಾವು.. ಸಾವು - ಬದುಕಿನ ಹೋರಾಟದಲ್ಲಿ ಬದುಕುಳಿಯಲಿಲ್ಲ ಪ್ರಣಾಳಿ!

ಇದಕ್ಕೆ ಪ್ರತಿಕ್ರಿಯೆ ನೀಡಿರುವ ಕಾಲೇಜ್ ಆಡಳಿತ ಮಂಡಳಿ, ಹಿಜಾಬ್ ಹಾಕಿಕೊಂಡು ಬರುವುದರಿಂದ ನಾವು ಅವರಿಗೆ ಕಿರುಕುಳ ನೀಡುವುದಾಗಿದ್ದರೆ, ಅವರನ್ನ ನಾವು ನೇಮಕ ಮಾಡಿಕೊಳ್ಳುತ್ತಿರಲಿಲ್ಲ. ನಮ್ಮ ಕಾಲೇಜ್​ನಲ್ಲಿ ಸುಮಾರು 50ಕ್ಕೂ ಅಧಿಕ ವಿದ್ಯಾರ್ಥಿನಿಯರು ಪ್ರತಿದಿನ ಹಿಜಾಬ್ ಹಾಕಿಕೊಂಡು ಬರುತ್ತಾರೆ ಎಂದು ಸ್ಪಷ್ಟಪಡಿಸಿದೆ.

Last Updated : Mar 26, 2022, 4:20 PM IST

ABOUT THE AUTHOR

...view details