ಕರ್ನಾಟಕ

karnataka

ETV Bharat / bharat

ಸಿಸೋಡಿಯಾ ಜತೆಗೆ ಭದ್ರತಾ ಸಿಬ್ಬಂದಿ ಅನುಚಿತ ವರ್ತನೆ: ಸಿಸಿಟಿವಿ ದೃಶ್ಯಾವಳಿ ಸಂರಕ್ಷಿಸುವಂತೆ ಕೋರ್ಟ್ ಆದೇಶ

ಮನೀಶ್​ ಸಿಸೋಡಿಯಾ ಅವರೊಂದಿಗೆ ಭದ್ರತಾ ಸಿಬ್ಬಂದಿ ಕೋರ್ಟ್​ ಆವರಣದಲ್ಲಿ ಅನುಚಿತವಾಗಿ ವರ್ತಿಸಿದೆ ಎಂದು ಅವರ ಕಾನೂನು ತಂಡ ಆರೋಪಿಸಿ ಅರ್ಜಿ ಸಲ್ಲಿಸಿತ್ತು.

APP Leader Manish Sisodia
ಆಪ್​ ನಾಯಕ ಮನೀಶ್​ ಸಿಸೋಡಿಯಾ

By

Published : Jun 1, 2023, 7:18 PM IST

ನವದೆಹಲಿ: ರಾಜಧಾನಿ ದೆಹಲಿಯ ರೋಸ್​ ಅವೆನ್ಯೂ ನ್ಯಾಯಾಲಯದ ಆವರಣದೊಳಗೆ ಭದ್ರತಾ ಸಿಬ್ಬಂದಿ ಮನೀಶ್​ ಸಿಸೋಡಿಯಾ ಅವರೊಂದಿಗೆ ಅನುಚಿತವಾಗಿ ವರ್ತಿಸಿದೆ ಎಂದು ಆರೋಪಿಸಿ ಮನೀಶ್ ಸಿಸೋಡಿಯಾ ಅವರ ಕಾನೂನು ತಂಡ ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದ ದೆಹಲಿಯ ರೋಸ್ ಅವೆನ್ಯೂ ನ್ಯಾಯಾಲಯವು ಕೊರ್ಟ್​​ ಸಂಕೀರ್ಣದ ಮೇ 23 ರ ಸಿಸಿಟಿವಿ ದೃಶ್ಯಗಳನ್ನು ಸಂರಕ್ಷಿಸುವಂತೆ ಗುರುವಾರ ಆದೇಶಿಸಿದೆ.

ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ವಿಚಾರಣೆಗೆ ಮನವಿ: ಸಿಸೋಡಿಯಾ ಅವರ ಕಾನೂನು ತಂಡ ಅವರನ್ನು ಅಮಾನುಷವಾಗಿ ನಡೆಸಿಕೊಳ್ಳಲಾಗಿದೆ ಎಂದು ಆರೋಪ ಮಾಡಿದ ನಂತರ ದೆಹಲಿ ಪೊಲೀಸರು ಸಿಸೋಡಿಯಾ ಅವರನ್ನು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಮಾತ್ರ ಹಾಜರುಪಡಿಸಲು ಅನುಮತಿ ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.

ದೆಹಲಿ ಅಬಕಾರಿ ಹಗರಣ ಪ್ರಕರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬಂಧನಲ್ಲಿರುವ ಸಿಸೋಡಿಯಾ ಅವರನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಇಂದು ಹಾಜರುಪಡಿಸಲಾಯಿತು. ಏತನ್ಮಧ್ಯೆ, ಇಡಿ ಪ್ರಕರಣದಲ್ಲಿ ನ್ಯಾಯಾಲಯವು ಜುಲೈ 19 ರವರೆಗೆ ಅವರ ನ್ಯಾಯಾಂಗ ಬಂಧನವನ್ನು ವಿಸ್ತರಿಸಿದೆ.

ಎಎಪಿ ಬೆಂಬಲಿಗರು ಮತ್ತು ಮಾಧ್ಯಮ ಪ್ರತಿನಿಧಿಗಳು ನ್ಯಾಯಾಲಯದ ಕಾರಿಡಾರ್‌ನಲ್ಲಿ ಜಮಾಯಿಸಿದ್ದರಿಂದ ಸಿಸೋಡಿಯಾ ಅವರನ್ನು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಹಾಜರು ಪಡಿಸಲು ಅವಕಾಶ ನೀಡಬೇಕು ಎಂದು ದೆಹಲಿ ಪೊಲೀಸರು ಕೇಳಿದ್ದರು. ಈ ಅಂಶವನ್ನು ಗಮನಿಸಿದ ವಿಶೇಷ ನ್ಯಾಯಾಧೀಶ ಎಂ.ಕೆ.ನಾಗ್ಪಾಲ್ ಅವರು ಅರ್ಜಿಯ ಬಗ್ಗೆ ನಿರ್ಧಾರವನ್ನು ತೆಗೆದುಕೊಳ್ಳದವರೆಗೆ, ಆಪ್​ ನಾಯಕ ಸಿಸೋಡಿಯಾ ಅವರನ್ನು ಕೇವಲ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಮತ್ತು ನ್ಯಾಯಾಲಯದಲ್ಲಿ ಯಾವುದೇ ವೈಯಕ್ತಿಕ ಹಾಜರಾತಿ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಪೂರಕ ಚಾರ್ಜ್ ಶೀಟ್‌ನಲ್ಲಿ ಸಿಸೋಡಿಯಾ ಮೇಲಿನ ಆರೋಪ: ದೆಹಲಿ ಅಬಕಾರಿ ನೀತಿ ವಿಷಯಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ದೆಹಲಿ ಮಾಜಿ ಉಪ ಮುಖ್ಯಮಂತ್ರಿ ಸಿಸೋಡಿಯಾ ವಿರುದ್ಧ ಸಲ್ಲಿಸಲಾದ ಪೂರಕ ಚಾರ್ಜ್ ಶೀಟ್ ಅನ್ನು ನ್ಯಾಯಾಲಯವು ಗಮನಕ್ಕೆ ತೆಗೆದುಕೊಂಡಿತು. ಇಡಿ ಸಲ್ಲಿಸಿರುವ ಪೂರಕ ಚಾರ್ಜ್‌ಶೀಟ್‌ನಲ್ಲಿ ಪ್ರಸ್ತುತ ಆರೋಪಿ ಸಿಸೋಡಿಯಾ ಅವರು ಸುಮಾರು 622 ಕೋಟಿ ರೂ.ಗಳು ಅಕ್ರಮ ಆದಾಯದಿಂದ ಗಳಿಸಲಾಗಿದೆ ಎಂದು ಆರೋಪಿಸಲಾಗಿದೆ.

ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ನವೀನ್ ಕುಮಾರ್ ಮಟ್ಟಾ ಅವರು ಮೇ 4 ರಂದು ಪೂರಕ ಚಾರ್ಜ್ ಶೀಟ್ ಸಲ್ಲಿಸಿದ್ದರು. ಪೂರಕ ಚಾರ್ಜ್ ಶೀಟ್ 2400ಕ್ಕೂ ಹೆಚ್ಚು ಪುಟಗಳನ್ನು ಹೊಂದಿದೆ. ಕಾರ್ಯಾಚರಣೆಯ ಭಾಗವು 271 ಪುಟಗಳನ್ನು ಒಳಗೊಂಡಿದೆ. ಈ ಪ್ರಕರಣದಲ್ಲಿ ಮಾರ್ಚ್ 9 ರಂದು ಇಡಿ ಸಿಸೋಡಿಯಾ ಅವರನ್ನು ಬಂಧಿಸಿತ್ತು. ಇದಕ್ಕೂ ಮೊದಲು ಅವರನ್ನು ಫೆಬ್ರವರಿ 26 ರಂದು ಸಿಬಿಐ ಬಂಧಿಸಿತ್ತು. ಅವರು ಈ ಪ್ರಕರಣದಲ್ಲಿ 29 ನೇ ಆರೋಪಿಯಾಗಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಈಗಾಗಲೇ ಚಾರ್ಜ್ ಶೀಟ್ ಸಲ್ಲಿಸಿದೆ. ಸಿಬಿಐ ಪ್ರಕರಣದಲ್ಲಿ ಅವರ ಜಾಮೀನನ್ನು ಕಳೆದ ವಾರ ಹೈಕೋರ್ಟ್ ವಜಾಗೊಳಿಸಿತ್ತು. ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಅವರ ಜಾಮೀನು ಹೈಕೋರ್ಟ್‌ನಲ್ಲಿ ಬಾಕಿ ಇದೆ.

ಇದನ್ನೂ ಓದಿ:ಅಬಕಾರಿ ನೀತಿ ಹಗರಣ ಪ್ರಕರಣ: ಸಿಸೋಡಿಯಾಗೆ ಜೂನ್ 2ರವರೆಗೆ ನ್ಯಾಯಾಂಗ ಬಂಧನ

ABOUT THE AUTHOR

...view details