ಕರ್ನಾಟಕ

karnataka

ETV Bharat / bharat

ರಾಜ್ಯಸಭಾ ಸದಸ್ಯ ಸೀಚೆವಾಲ್ ವಿರುದ್ಧ ಭೂಕಬಳಿಕೆ ಆರೋಪ: ತನಿಖೆಗೆ ಒತ್ತಾಯ

ರಾಜ್ಯಸಭಾ ಸದಸ್ಯ ಸಂತ ಬಲವೀರ್ ಸಿಂಗ್ ಸೀಚೆವಾಲ್ ವಿರುದ್ಧ ಭೂಕಬಳಿಕೆ ಆರೋಪ. ಮುಖ್ಯಮಂತ್ರಿಗೆ ಪತ್ರ ಬರೆದ ಪಂಜಾಬ್ ಕಾಂಗ್ರೆಸ್ ಶಾಸಕ ಸುಖಪಾಲ್ ಸಿಂಗ್ ಖೈರಾ. ಅಕ್ರಮ ಭೂ ಒತ್ತುವರಿ ತೆರವಿಗೆ ಒತ್ತಾಯ.

Allegation of land grabbing against Rajya Sabha member Seecheval
ರಾಜ್ಯಸಭಾ ಸದಸ್ಯ ಸೀಚೆವಾಲ್ ವಿರುದ್ಧ ಭೂಕಬಳಿಕೆ ಆರೋಪ

By

Published : Aug 11, 2022, 1:14 PM IST

ಚಂಡೀಗಢ: ಪಂಜಾಬ್ ಕಾಂಗ್ರೆಸ್ ಶಾಸಕ ಸುಖಪಾಲ್ ಸಿಂಗ್ ಖೈರಾ, ರಾಜ್ಯಸಭಾ ಸದಸ್ಯ ಸಂತ ಬಲವೀರ್ ಸಿಂಗ್ ಸೀಚೆವಾಲ್ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸುಲ್ತಾನಪುರ ಲೋಧಿಯ ಫತೇವಾಲಾದ ಜಮಿವಾಲದ ಎರಡು ಗ್ರಾಮಗಳಲ್ಲಿನ 7 ಎಕರೆ ಜಮೀನು ಮತ್ತು 14 ಎಕರೆ ಜಮೀನುಗಳನ್ನು ಸಂತ ಬಲವೀರ್ ಸಿಂಗ್ ಸೀಚೆವಾಲ್ ಅಕ್ರಮವಾಗಿ ಕಬಳಿಸಿದ್ದಾರೆ ಎಂದು ಆರೋಪಿಸಿದ್ದಾರೆ.

ಈ ಸಂಬಂಧ ಶಾಸಕ ಸುಖಪಾಲ್ ಸಿಂಗ್ ಖೈರಾ ಅವರು ಸಿಎಂ ಭಗವಂತ್ ಮಾನ್ ಅವರಿಗೆ ಪತ್ರ ಬರೆದಿದ್ದು, ಈ ಎರಡು ಗ್ರಾಮಗಳ ಸರ್ಕಾರಿ ಭೂಮಿಯನ್ನು ಸಂತ ಸೀಚೆವಾಲ್ ಅವರ ಟ್ರಸ್ಟ್ ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿರುವುದನ್ನು ತೆರವುಗೊಳಿಸಬೇಕೆಂದು ಆಗ್ರಹಿಸಿದ್ದಾರೆ. ಮುಖ್ಯಮಂತ್ರಿಗೆ ಬರೆದ ಪತ್ರದ ಪ್ರತಿಯನ್ನು ಪಂಚಾಯತ್ ಸಚಿವ ಕುಲದೀಪ್ ಸಿಂಗ್ ಧಲಿವಾಲ್ ಅವರಿಗೂ ಕಳುಹಿಸಿದ್ದಾರೆ.

ಅಕ್ರಮ ಭೂ ಒತ್ತುವರಿ ತೆರವಿಗೆ ಸರ್ಕಾರ ಗಂಭೀರ ಪ್ರಯತ್ನ ನಡೆಸುತ್ತಿರುವುದು ನಿಜ. ಅದೇ ರೀತಿ ಸಂತ ಬಲವೀರ್ ಸಿಂಗ್ ಸೀಚೆವಾಲ್ ಮಾಡಿಕೊಂಡಿರುವ ಅಕ್ರಮ ಆಸ್ತಿಗಳ ಬಗ್ಗೆಯೂ ಸರಕಾರ ಗಮನ ಹರಿಸಬೇಕಿದೆ. ಸಂತ ಸೀಚೆವಾಲ್ ಅವರ ಸ್ವಾಧೀನದಲ್ಲಿರುವ ಸರ್ಕಾರಿ ಜಮೀನು ತಹಸಿಲ್ ಸುಲ್ತಾನಪುರ ಲೋಧಿಯ ಜಮಿವಾಲ್ ಮತ್ತು ಫತೇವಾಲಾ ಗ್ರಾಮದ ಎರಡು ಗ್ರಾಮಗಳ ವ್ಯಾಪ್ತಿಯಲ್ಲಿದೆ. ಖೈರಾ ಅವರು ಜಮಿವಾಲ್ ಗ್ರಾಮದಲ್ಲಿನ 7 ಎಕರೆ ಭೂಮಿ ಮತ್ತು ಫತೇವಾಲಾ ಗ್ರಾಮದಲ್ಲಿನ 14 ಎಕರೆ ಭೂಮಿಯನ್ನು ತಮ್ಮ ಟ್ರಸ್ಟ್ ಮೂಲಕ ಅಕ್ರಮವಾಗಿ ವಶಪಡಿಸಿಕೊಂಡಿದ್ದಾರೆ ಎಂದು ಮುಖ್ಯಮಂತ್ರಿಗಳಿಗೆ ಬರೆದ ಪತ್ರದಲ್ಲಿ ವಿವರಿಸಲಾಗಿದೆ.

ಟ್ರಸ್ಟ್ ಈ ಭೂಮಿಯನ್ನು ದಶಕಗಳಿಂದ ಕೃಷಿಗೆ ಬಳಸುತ್ತಿದೆ, ಆದರೆ, ಯಾವುದೇ ತೆರಿಗೆಯನ್ನು ಆಯಾ ಪಂಚಾಯತ್‌ಗಳಿಗೆ ಪಾವತಿ ಮಾಡಿಲ್ಲ. ಇದರಿಂದಾಗಿ ಅವರು ಸರ್ಕಾರದ ಸುಸ್ತಿದಾರರಾಗಿದ್ದಾರೆ ಎಂದು ಖೈರಾ ಹೇಳಿದರು. ಈ ವಿಚಾರದಲ್ಲಿ ಸರ್ಕಾರವು ಶೀಘ್ರವೇ ನ್ಯಾಯ ದೊರಕಿಸಿಕೊಡಲಿ ಎಂದು ಅವರು ಆಗ್ರಹಿಸಿದ್ದಾರೆ.

ಇದನ್ನು ಓದಿ:ಪ್ರಧಾನಿ ಹುದ್ದೆಯ ಘನತೆ ಹಾಳು ಮಾಡಬೇಡಿ: ಪ್ರಧಾನಿಗೆ ರಾಹುಲ್ ಸಲಹೆ

ABOUT THE AUTHOR

...view details