ಪ್ರಯಾಗರಾಜ್: ಅಜಾನ್‌ಗೆ ಧ್ವನಿವರ್ಧಕಗಳನ್ನು ಬಳಸುವುದನ್ನು ನಿಷೇಧಿಸುವಂತೆ ಒತ್ತಾಯಿಸಿ ಅಲಹಾಬಾದ್ ವಿಶ್ವವಿದ್ಯಾಲಯದ ವೈಸ್ಚಾನ್ಸಲರ್ ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದಾರೆ.
ಅಜಾನ್ ಸಂಬಂಧಿತ ವಿಚಾರಣೆಯ ಅಲಹಾಬಾದ್ ಹೈಕೋರ್ಟ್ ಆದೇಶ ಉಲ್ಲೇಖಿಸಿದ, ವಿಶ್ವವಿದ್ಯಾಲಯದ ವಿಸಿ ಪ್ರೊ. ಸಂಗೀತಾ ಶ್ರೀವಾಸ್ತವ ಅವರು, ಅಜಾನ್ ನಿದ್ರೆಗೆ ಭಂಗ ತರುತ್ತದೆ ಮತ್ತು ಕೆಲಸದ ದಕ್ಷತೆಯ ಮೇಲೂ ಪರಿಣಾಮ ಬೀರುತ್ತದೆ ಎಂದಿದ್ದಾರೆ.
ನಾಗರಿಕ ಪ್ರದೇಶದ ಹತ್ತಿರದ ಮಸೀದಿಯಿಂದ ಪ್ರತಿದಿನ ಬೆಳಗ್ಗೆ 5.30ರ ಸುಮಾರಿಗೆ ಬೆಳಗಿನ ಪ್ರಾರ್ಥನೆ (ಅಜಾನ್) ತನ್ನ ನಿದ್ರೆಗೆ ಭಂಗ ತರುತ್ತದೆ ಎಂದು ಅಲಹಾಬಾದ್ ವಿಶ್ವವಿದ್ಯಾಲಯದ ವಿಸಿ ಸಂಗೀತಾ ಶ್ರೀವಾಸ್ತವ ಅವರು ಜಿಲ್ಲಾಧಿಕಾರಿಗೆ ನೇರವಾಗಿ ಪತ್ರ ಬರೆದಿದ್ದಾರೆ.
ಅಜಾನ್ನಿಂದ ತೊಂದರೆಗೊಳಗಾದ ನಿದ್ರೆಯನ್ನು ಆ ನಂತರ ಸರಿದೂಗಿಸಲು ಸಾಧ್ಯವಿಲ್ಲ. ಅದು ನಿದ್ರಾಹೀನತೆಗೆ ಕಾರಣವಾಗುತ್ತದೆ. ಇದು ಒಟ್ಟಾರೆ ಕೆಲಸದ ದಕ್ಷತೆಯ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ, ಈ ವಿಷಯದಲ್ಲಿ ಹೈಕೋರ್ಟ್ ಆದೇಶಗಳನ್ನು ಉಲ್ಲೇಖಿಸಿ ಅಜಾನ್‌ಗೆ ಸಾರ್ವಜನಿಕ ಪ್ರದೇಶದಲ್ಲಿ ಬಳಸದಂತೆ ಮಸೀದಿಗಳನ್ನು ತಡೆಯಬೇಕೆಂದು ಅವರು ಜಿಲ್ಲಾಧಿಕಾರಿಗೆ ಬರೆದ ಪತ್ರದಲ್ಲಿ ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ಕೆಲಸ ಕೊಡದೇ ಎಸ್ಸಿ, ಎಸ್ಟಿ, ಒಬಿಸಿ ಪದವೀಧರರನ್ನು ಸರ್ಕಾರ ದಂಡಿಸುತ್ತಿದೆ: ರಾಹುಲ್ ಗಾಂಧಿ ಆಕ್ರೋಶ
ಪ್ರತಿದಿನ ಬೆಳಗ್ಗೆ ಸುಮಾರು 5:30ಕ್ಕೆ ಸುತ್ತಮುತ್ತಲಿನ ಮಸೀದಿಯಲ್ಲಿ ಮೌಲ್ವಿಗಳು ಮೈಕ್‌ನಲ್ಲಿ ಜೋರಾಗಿ ಅಜಾನ್ ಮಾಡಿದ್ದರಿಂದ ನನ್ನ ನಿದ್ರೆಗೆ ತೊಂದರೆಗೀಡಾಗಿದೆ. ಒಮ್ಮೆ ನಿದ್ದೆ ಹಾಳಾದರೆ ನಂತರ ತುಂಬಾ ಕಷ್ಟಪಟ್ಟು ಪ್ರಯತ್ನಿಸಿದ ನಂತರವೂ ಮತ್ತೆ ನಿದ್ದೆ ಬರುವುದಿಲ್ಲ. ಇದು ದಿನವಿಡೀ ತಲೆನೋವು ಉಂಟುಮಾಡುತ್ತದೆ. ಕೆಲಸದ ಸಮಯದಲ್ಲಿ ನಷ್ಟ ತಂದೊಡ್ಡಲಿದೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಹಳೆಯ ಗಾದೆ ಹೇಳುತ್ತದೆ- 'ನಿಮ್ಮ ಸ್ವಾತಂತ್ರ್ಯ ಮೂಗು ಪ್ರಾರಂಭವಾಗುವಾಗಿನಿಂದ ಕೊನೆಗೊಳ್ಳುತ್ತದೆ’ ಎಂದು. ಇದು ಇಲ್ಲಿ ನಿಜವಾಗಿದೆ. ನಾನು ಯಾವುದೇ ಧರ್ಮ, ಜಾತಿ ಅಥವಾ ಸಮುದಾಯದ ವಿರೋಧಿಯಲ್ಲ. ಇತರರು ತೊಂದರೆಗೆ ಒಳಗಾಗದಂತೆ ಅವರು ಮೈಕ್ ಇಲ್ಲದೆ ಅಜಾನ್ ಮಾಡಬಹುದು. ಈದ್‌ಗೂ ಮುಂಚೆಯೇ ಅವರು ಬೆಳಗ್ಗೆ 4:00 ಗಂಟೆಗೆ ಮೈಕ್‌ನಲ್ಲಿ ಸೆಹ್ರಿಯನ್ನು ಘೋಷಿಸುತ್ತಾರೆ. ಈ ಅಭ್ಯಾಸವು ಇತರರಿಗೆ ತೊಂದರೆ ಉಂಟುಮಾಡುತ್ತದೆ. ಭಾರತದ ಸಂವಿಧಾನವು ಎಲ್ಲಾ ಸಮುದಾಯಗಳ ಜಾತ್ಯತೀತ ಮತ್ತು ಶಾಂತಿಯುತ ಸಹಬಾಳ್ವೆಯನ್ನು ರೂಪಿಸುತ್ತದೆ. ಇದನ್ನು ಉತ್ಸಾಹದಿಂದ ಅಭ್ಯಸಿಸಬೇಕಾಗಿದೆ ಎಂದು ತಮ್ಮ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ.