ಪ್ರಯಾಗರಾಜ್(ಉತ್ತರ ಪ್ರದೇಶ):ವಿಶ್ವವಿಖ್ಯಾತ ತಾಜ್ಮಹಲ್ನಲ್ಲಿ ಮುಚ್ಚಿದ 22 ಕೊಠಡಿಗಳನ್ನು ತೆರೆಯುವಂತೆ ಕೋರಿ ಸಲ್ಲಿಸಲಾದ ಅರ್ಜಿಯನ್ನು ಅಲಹಾಬಾದ್ ಹೈಕೋರ್ಟ್ ಇಂದು ವಿಚಾರಣೆ ನಡೆಸಲಿದೆ. ಬಿಜೆಪಿ ಯುವ ಮಾಧ್ಯಮ ಉಸ್ತುವಾರಿ ರಜನೀಶ್ ಸಿಂಗ್ ಅವರು ಲಖನೌ ಪೀಠದ ಮುಂದೆ ಮನವಿ ಸಲ್ಲಿಸಿದ್ದು, ತಾಜ್ ಮಹಲ್ನಲ್ಲಿರುವ 22 ಕೊಠಡಿಗಳಲ್ಲಿ ಏನಿದೆ ಎಂಬುದನ್ನು ತನಿಖೆ ಮಾಡಲು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಗೆ ನಿರ್ದೇಶನ ನೀಡಬೇಕೆಂದು ಅರ್ಜಿಯಲ್ಲಿ ಕೋರಿದ್ದಾರೆ.
ತಾಜ್ಮಹಲ್ ಹಳೆಯ ಶಿವ ದೇವಾಲಯವಾಗಿದೆ ಎಂದು ಕೆಲವು ಇತಿಹಾಸಕಾರರು ಹೇಳಿದ್ದು, ಇದನ್ನು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ. ಕೆಲವು ಹಿಂದೂ ಗುಂಪುಗಳು ಮತ್ತು ಪ್ರತಿಷ್ಠಿತ ಸಂತರು ಈ ಸ್ಮಾರಕವನ್ನು ಹಳೆಯ ಶಿವ ದೇವಾಲಯವೆಂದು ಹೇಳುತ್ತಿದ್ದಾರೆ. ಮೊಘಲ್ ಚಕ್ರವರ್ತಿ ಷಹಜಹಾನ್ ನಿರ್ಮಿಸಿದ ಎಂದು ಅನೇಕ ಇತಿಹಾಸಕಾರರು ನಂಬುತ್ತಾರೆ. ಮತ್ತೆ ಕೆಲವರು ತೇಜೋ ಮಹಾಲಯ ಅಥವಾ ತಾಜ್ ಮಹಲ್ ಎಂದು ನಂಬುತ್ತಾರೆ ಎಂದು ಅರ್ಜಿಯಲ್ಲಿ ವಿವರಿಸಿದ್ದಾರೆ.