ನವದೆಹಲಿ:ವಿಶ್ವವಿಖ್ಯಾತ ತಾಜ್ಮಹಲ್ನಲ್ಲಿ ಮುಚ್ಚಿದ 22 ಕೊಠಡಿಗಳನ್ನು ತೆರೆಯುವಂತೆ ಕೋರಿ ಸಲ್ಲಿಸಲಾದ ಅರ್ಜಿಯನ್ನು ಅಲಹಾಬಾದ್ ಹೈಕೋರ್ಟ್ ತಿರಸ್ಕರಿಸಿದೆ.
ಬಿಜೆಪಿ ಯುವ ಮಾಧ್ಯಮ ಉಸ್ತುವಾರಿ ರಜನೀಶ್ ಸಿಂಗ್ ಅವರು ಲಖನೌ ಪೀಠದ ಮುಂದೆ ಮನವಿ ಸಲ್ಲಿಸಿದ್ದು, ತಾಜ್ ಮಹಲ್ನಲ್ಲಿರುವ 22 ಕೊಠಡಿಗಳಲ್ಲಿ ಏನಿದೆ ಎಂಬುದನ್ನು ತನಿಖೆ ಮಾಡಲು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಗೆ ನಿರ್ದೇಶನ ನೀಡಬೇಕೆಂದು ಅರ್ಜಿಯಲ್ಲಿ ಕೋರಿದ್ದರು.
ಈ ಸಮಸ್ಯೆ ನ್ಯಾಯಾಲಯದ ಪರಿಮಿತಿಯ ಆಚಿನದು. ವಿವಿಧ ವಿಧಾನಗಳ ಮೂಲಕ ಇದನ್ನು ಬಗೆಹರಿಸಿಕೊಳ್ಳಬೇಕು. ಇದನ್ನು ಇತಿಹಾಸಕಾರರಿಗೆ ವಿವೇಚನೆಗೆ ಬಿಡಿ. ಇಂತಹ ಚರ್ಚೆಗಳು ಡ್ರಾಯಿಂಗ್ ರೂಮ್ನಲ್ಲಿಯೇ ಮುಗಿಸಬೇಕೆ ಹೊರತು, ನ್ಯಾಯಾಲಯದಲ್ಲಲ್ಲ ಎಂದು ನ್ಯಾಯಾಲಯ ಹೇಳಿದೆ.
ಮೊಘಲರ ಕಾಲದ ಸ್ಮಾರಕವನ್ನು ಭಾರತೀಯ ಪುರಾತತ್ವ ಇಲಾಖೆಯು ರಕ್ಷಿಸಿದೆ. ತಾಜ್ ಮಹಲ್ ಅನ್ನು ಮೊಘಲ್ ಚಕ್ರವರ್ತಿ ಷಹಜಹಾನ್ ತನ್ನ ಹೆಂಡತಿ ಮುಮ್ತಾಜ್ ಸಮಾಧಿಯಾಗಿ ನಿರ್ಮಿಸಿದ್ದಾನೆ. ಅಮೃತಶಿಲೆಯಿಂದ ಕಟ್ಟಲಾದ ಈ ಪ್ರೀತಿಯ ಸ್ಮಾರಕ 1632 ರಲ್ಲಿ ಪ್ರಾರಂಭವಾಗಿ 1653 ರಲ್ಲಿ ಪೂರ್ಣಗೊಂಡಿದೆ. ಇದಕ್ಕೂ ಮೊದಲು ಇಲ್ಲಿ ಹಿಂದು ದೇವಾಲಯಗಳು ಇದ್ದವು ಎಂಬುದು ವಾದವಾಗಿದೆ.
ಓದಿ:ತಾಜ್ಮಹಲ್ ಅನ್ನೂ ಬಿಡದ ಕೊರೊನಾ : ಮಾರ್ಚ್31ರವರೆಗೆ ಪ್ರೇಮಸೌಧದ ಬಾಗಿಲು ಬಂದ್