ಪ್ರಯಾಗರಾಜ್: ವರದಕ್ಷಿಣೆ ಕಿರುಕುಳ ಪ್ರಕರಣಗಳಲ್ಲಿ ಕಾಯ್ದೆ 498ಎ ಇದರ ದುರುಪಯೋಗವನ್ನು ತಡೆಯುವ ನಿಟ್ಟಿನಲ್ಲಿ ಅಲಹಾಬಾದ್ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಐಪಿಸಿ 498ಎ ಅಡಿ ದಾಖಲಾದ ಯಾವುದೇ ಪ್ರಕರಣಗಳಲ್ಲಿ ಎರಡು ತಿಂಗಳುಗಳವರೆಗೆ ಯಾರನ್ನೂ ಬಂಧಿಸುವಂತಿಲ್ಲ. ಈ ಅವಧಿಯಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯು ಪ್ರಕರಣದ ಬಗ್ಗೆ ಸಮಗ್ರ ತನಿಖೆ ನಡೆಸಿ ವರದಿ ಸಲ್ಲಿಸಬೇಕು ಎಂದು ಅಲಹಾಬಾದ್ ಹೈಕೋರ್ಟ್ ನ್ಯಾಯಮೂರ್ತಿ ರಾಹುಲ್ ಚತುರ್ವೇದಿ ಅವರು ಆದೇಶ ನೀಡಿದ್ದಾರೆ.
2 ತಿಂಗಳು ಆರೋಪಿಗಳನ್ನು ಬಂಧಿಸುವಂತಿಲ್ಲ: ವರದಕ್ಷಿಣೆ ಕಿರುಕುಳ ಕೇಸ್ ಕುರಿತು ಮಹತ್ವದ ಆದೇಶ - ಹೈಕೋರ್ಟ್
ಎರಡು ತಿಂಗಳ ಕೂಲಿಂಗ್ ಪೀರಿಯೆಡ್ ನಲ್ಲಿ ಕೌಟುಂಬಿಕ ವಿವಾದವನ್ನು ಸೌಹಾರ್ದಯುತವಾಗಿ ಬಗೆಹರಿಸುವ ಪ್ರಯತ್ನಗಳು ನಡೆಯಲಿ. ದೂರು ದಾಖಲಾಗುತ್ತಲೇ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಮಿತಿಯನ್ನು ಕುಟುಂಬದ ಬಳಿಗೆ ಕಳುಹಿಸಬೇಕು. ಈ ಸಮಿತಿಯು ಸಮಗ್ರ ವರದಿಯನ್ನು ತಯಾರಿಸಿ ಅದನ್ನು ಕೋರ್ಟ್ ಹಾಗೂ ಪೊಲೀಸರಿಗೆ ಸಲ್ಲಿಸಬೇಕು ಎಂದು ನ್ಯಾಯಾಲಯ ಹೇಳಿದೆ.
allahabad-high-court-order-not-to-arrest-for-two-months-in-dowry-harassment-case
ಪ್ರಾಥಮಿಕ ದೂರು ದಾಖಲಾದ ನಂತರ ಎರಡು ತಿಂಗಳವರೆಗೆ ಪೊಲೀಸರು ಕೂಡ ಯಾವುದೇ ಕಠೋರ ಕ್ರಮಗಳನ್ನು ಕೈಗೊಳ್ಳುವಂತಿಲ್ಲ. ಈ ಎರಡು ತಿಂಗಳ ಕೂಲಿಂಗ್ ಪೀರಿಯೆಡ್ ನಲ್ಲಿ ಕೌಟುಂಬಿಕ ವಿವಾದವನ್ನು ಸೌಹಾರ್ದಯುತವಾಗಿ ಬಗೆಹರಿಸುವ ಪ್ರಯತ್ನಗಳು ನಡೆಯಲಿ. ದೂರು ದಾಖಲಾಗುತ್ತಲೇ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಮಿತಿಯನ್ನು ಕುಟುಂಬದ ಬಳಿಗೆ ಕಳುಹಿಸಬೇಕು. ಈ ಸಮಿತಿಯು ಸಮಗ್ರ ವರದಿಯನ್ನು ತಯಾರಿಸಿ ಅದನ್ನು ಕೋರ್ಟ್ ಹಾಗೂ ಪೊಲೀಸರಿಗೆ ಸಲ್ಲಿಸಬೇಕು.
ಸಮಿತಿಯು ವರದಿ ಸಲ್ಲಿಸಿದರೂ ಸಮಿತಿಯ ಯಾವುದೇ ಸದಸ್ಯರನ್ನು ಪ್ರಕರಣದ ಸಾಕ್ಷಿಯಾಗಿ ನ್ಯಾಯಾಲಯಕ್ಕೆ ಕರೆಯುವಂತಿಲ್ಲ ಎಂದೂ ಅಲಹಾಬಾದ್ ಹೈಕೋರ್ಟ್ ಹೇಳಿದೆ.