ಶ್ರೀನಗರ (ಜಮ್ಮು ಮತ್ತು ಕಾಶ್ಮೀರ): ಕೇಂದ್ರ ವಸತಿ ಮತ್ತು ನಗರಾಭಿವೃದ್ಧಿ ಸಚಿವಾಲಯವು ದೇಶದಲ್ಲಿ 27 ಹೊಸ ಮೆಟ್ರೋ ಮಾರ್ಗಗಳ ಆರಂಭಿಸಲು ಉದ್ದೇಶಿಸಿದೆ. ಈ ಮಾರ್ಗಗಳಲ್ಲಿ ಶ್ರೀನಗರ ಮತ್ತು ಜಮ್ಮು ನಗರಕ್ಕೂ ಮೆಟ್ರೋ ರೈಲುಗಳನ್ನು ಪ್ರಸ್ತಾಪಿಸಲಾಗಿದೆ. ಈ ಪ್ರಸ್ತಾವಿತ ಮೆಟ್ರೋ ಮಾರ್ಗಗಳನ್ನು ನಗರಾಭಿವೃದ್ಧಿ ಸಚಿವಾಲಯವು ಹಂತ ಹಂತವಾಗಿ ಅನುಮೋದಿಸಲಿದ್ದು, ನಂತರ ಅಂತಿಮ ಅನುಮೋದನೆಗಾಗಿ ಸಂಪುಟ ಮುಂದೆ ಇರಿಸಲಾಗುತ್ತದೆ.
ಶ್ರೀನಗರ ಮತ್ತು ಜಮ್ಮು ನಗರದಲ್ಲಿನ ಮೆಟ್ರೋ ಲೈಟ್‌ನ ವಿಸ್ತೃತ ಯೋಜನಾ ವರದಿ (ಡಿಪಿಆರ್)ಯನ್ನು ಕಳೆದ ವರ್ಷ ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗಿತ್ತು. ಈ ಮೆಟ್ರೋಲೈಟ್ ಡಿಪಿಆರ್ಅನ್ನು ರೈಲ್ ಇಂಡಿಯಾ ಟೆಕ್ನಿಕಲ್ ಅಂಡ್ ಎಕನಾಮಿಕ್ ಸರ್ವೀಸ್ ಲಿಮಿಟೆಡ್ (Rail India Technical and Economic Service Limited - RITES) ಸಿದ್ಧಪಡಿಸಿದೆ. ಇದರ ಪ್ರಕಾರ ಈ ಯೋಜನೆಗೆ ಸುಮಾರು 10,599 ಕೋಟಿ ವೆಚ್ಚವಾಗಲಿದೆ.
ಮೊದಲ ಹಂತದಲ್ಲಿ ಬಂಟಲಬ್‌ನಿಂದ ಬದಿ ಬ್ರಾಹ್ಮಣವರೆಗೆ ಲಘು ಮೆಟ್ರೊ ಓಡಿಸುವ ಪ್ರಸ್ತಾವನೆ ಇದೆ. ಮುಂದಿನ ಹಂತದಲ್ಲಿ ವಿಜಯಪುರ ಏಮ್ಸ್‌ಗೆ ಕೊಂಡೊಯ್ಯಬೇಕು ಎಂಬ ಬೇಡಿಕೆಯನ್ನು ಜಮ್ಮು- ಪೂಂಚ್ ಸಂಸದ ಜುಗಲ್ ಕಿಶೋರ್ ಶರ್ಮಾ ಸಂಸತ್ತಿನಲ್ಲಿ ಪ್ರಸ್ತಾಪಿಸಿದ್ದಾರೆ. ಇದನ್ನು ವಿಜಯಪುರ ಏಮ್ಸ್‌ಗೆ ಕೊಂಡೊಯ್ಯುವುದಾಗಿ ಕೇಂದ್ರವು ಭರವಸೆ ನೀಡಿದೆ. 2021ರ ಡಿಸೆಂಬರ್ 21ರಂದು ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವ ಹರ್ದೀಪ್ ಸಿಂಗ್ ಪುರಿ ರಾಜ್ಯದಲ್ಲಿ ಲಘು ಮೆಟ್ರೋ ಶೀಘ್ರದಲ್ಲೇ ಪ್ರಾರಂಭವಾಗಲಿದೆ ಎಂದು ಭರವಸೆ ನೀಡಿದ್ದಾರೆ.
ಜಮ್ಮು ಮತ್ತು ಶ್ರೀನಗರದಲ್ಲಿ ಮೆಟ್ರೋ ರೈಲು ಯೋಜನೆಗಳ ಪ್ರಸ್ತಾವನೆಗಳು ಸಾರ್ವಜನಿಕ ಹೂಡಿಕೆ ಮಂಡಳಿಯಿಂದ ಅನುಮೋದನೆಯ ಅಂತಿಮ ಹಂತದಲ್ಲಿವೆ ಎಂದೂ ಹರ್ದೀಪ್ ಸಿಂಗ್ ಪುರಿ ತಿಳಿಸಿದ್ದಾರೆ. ಜಮ್ಮುವಿನ ಹೊರವಲಯದಲ್ಲಿರುವ ಉದ್ದೇಶಿತ ಏಮ್ಸ್ ಆಸ್ಪತ್ರೆಗೆ ಮೆಟ್ರೋ ಯೋಜನೆಗಳನ್ನು ವಿಸ್ತರಿಸುವ ಬೇಡಿಕೆಯನ್ನು ಕೇಂದ್ರವು ಪರಿಗಣಿಸಲಿದೆ.
ಮೂರು ಹಂತದ ಮೆಟ್ರೋ ಯೋಜನೆ: ಚಿನ್ನೋರ್ ನಗರಕ್ಕೆ ಹೊಂದಿಕೊಂಡಿರುವ ಜಮ್ಮು ಬಂಟಲಾಬ್ ಪ್ರದೇಶದಿಂದ ಮೊದಲ ಹಂತದ ಮೆಟ್ರೋ ಸೇವೆ ಆರಂಭವಾಗಲಿದೆ. ರೂಪ್ ನಗರ, ಜಾನಿಪುರ್ ಹೈಕೋರ್ಟ್, ಲೋವರ್ ಲಕ್ಷ್ಮಿ ನಗರ, ಅಂಬ್ಫಾಲಾ, ಸೆಕ್ರೆಟರಿಯೇಟ್, ರಘುನಾಥ ದೇವಸ್ಥಾನ, ಎಕ್ಸಿಬಿಷನ್ ಗ್ರೌಂಡ್, ಯುನಿವರ್ಸಿಟಿ ಮಾರ್ಗ, ಪನಾಮ ಚೌಕ್, ರೈಲ್ವೆ ನಿಲ್ದಾಣ, ತ್ರಿಕೂಟ ನಗರ, ನರ್ವಾಲ್, ಗ್ರೇಟರ್ ಕೈಲಾಶ್ವರೆಗೆ ಇರಲಿದೆ. ಎರಡನೇ ಹಂತದ ಮೆಟ್ರೋವು ಉದಯವಾಲಾ, ತೀರ್ಥ ನಗರ, ಸೂರಜ್ ನಗರ, ಸರ್ಕ್ಯೂಟ್ ಹೌಸ್, ಜ್ಯುವೆಲ್ ಚೌಕ್, ಎಕ್ಸಿಬಿಷನ್ ಗ್ರೌಂಡ್ವರೆಗೆ ಇದ್ದರೆ, ಮೂರನೇ ಹಂತದಲ್ಲಿ ಕಾಲುಚಕ್ಕಕ್, ಸಿಡ್ಕೋ ಚೌಕ್ ಮತ್ತು ಬದಿ ಬ್ರಾಹ್ಮಣ ರೈಲು ನಿಲ್ದಾಣವನ್ನು ಒಳಗೊಂಡಿದೆ.