ನವದೆಹಲಿ: ಇಂದು ಆರಂಭಗೊಳ್ಳಲಿರುವ ಸ್ಯಾನ್ ಫ್ರಾನ್ಸಿಸ್ಕೊ- ಬೆಂಗಳೂರು ಮಾರ್ಗದ ವಿಮಾನಗಳನ್ನು ಮಹಿಳಾ ಪೈಲಟ್ಗಳೇ ಚಲಾಯಿಸಲಿದ್ದಾರೆ ಅಂತಾ ನಾಗರಿಕ ವಿಮಾನಯಾನ ಸಚಿವ ಹರ್ದೀಪ್ ಸಿಂಗ್ ಪುರಿ ತಿಳಿಸಿದ್ದಾರೆ.
ಏರ್ ಇಂಡಿಯಾ ವಿಮಾನವು ಅಟ್ಲಾಂಟಿಕ್ ಮಾರ್ಗವಾಗಿ ಬೆಂಗಳೂರು ತಲುಪಲಿದೆ ಎಂದು ವಿಮಾನಯಾನದ ಹಿರಿಯ ಅಧಿಕಾರಿ ಮಾಹಿತಿ ನೀಡಿದ್ದಾರೆ. ಕ್ಯಾಪ್ಟನ್ ಜೋಯಾ ಅಗರ್‌ವಾಲ್, ಕ್ಯಾಪ್ಟನ್ ಪಾಪಗರಿ ತನ್ಮೈ, ಕ್ಯಾಪ್ಟನ್ ಆಕಾಶಾ ಸೋನವೇರ್ ಮತ್ತು ಕ್ಯಾಪ್ಟನ್ ಶಿವಾನಿ ಮನ್ಹಾಸ್ ಅವರನ್ನೊಳಗೊಂಡ ಮಹಿಳಾ ಕಾಕ್‌ಪಿಟ್ ಸಿಬ್ಬಂದಿ ಬೆಂಗಳೂರು ಮತ್ತು ಸ್ಯಾನ್ ಫ್ರಾನ್ಸಿಸ್ಕೊ ನಡುವಿನ ಐತಿಹಾಸಿಕ ಉದ್ಘಾಟನಾ ಹಾರಾಟವನ್ನು ನಿರ್ವಹಿಸಲಿದ್ದಾರೆ ಎಂದು ಸಚಿವ ಪುರಿ ಟ್ವಿಟರ್‌ನಲ್ಲಿ ತಿಳಿಸಿದ್ದಾರೆ.