ಹೈದರಾಬಾದ್: ಈಶಾನ್ಯ ರಾಜ್ಯಗಳ ಸಮಸ್ಯೆಗಳನ್ನು ಪರಿಹರಿಸಲು ಹಲವಾರು ಕ್ರಮಗಳನ್ನು ಕೈಗೊಂಡಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಈ ಪ್ರದೇಶದಲ್ಲಿ ಬಿಜೆಪಿ ಶಾಶ್ವತ ವಿಳಾಸವನ್ನು ಕಂಡುಕೊಂಡಿದೆ ಎಂದು ಹೇಳಿದ್ದಾರೆ. ಮುಂದಿನ ದಿನಗಳಲ್ಲಿ ಈ ಪ್ರದೇಶಕ್ಕೆ ಯಾವುದೇ ಸಮಸ್ಯೆಗಳಿಲ್ಲ ಮತ್ತು 2024 ರ ವೇಳೆಗೆ ಎಲ್ಲಾ ಸಮಸ್ಯೆಗಳನ್ನು ಪರಿಹರಿಸಲಾಗುವುದು ಎಂದು ಹೇಳಿದ್ದಾರೆ.
ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ರಾಜಕೀಯ ನಿರ್ಣಯದ ಕುರಿತು ಭಾಷಣ ಮಾಡುವಾಗ, ನಾಗಾಲ್ಯಾಂಡ್‌ನ ಏಳು ಜಿಲ್ಲೆಗಳಲ್ಲಿ 15 ಪೊಲೀಸ್ ಠಾಣೆ ಪ್ರದೇಶಗಳು, ಮಣಿಪುರದ ಆರು ಜಿಲ್ಲೆಗಳಲ್ಲಿನ 15 ಪೊಲೀಸ್ ಠಾಣೆ ಪ್ರದೇಶಗಳಲ್ಲಿ ಹಾಗೂ ಅಸ್ಸೋಂನಲ್ಲಿ AFPSA (THE ARMED FORCES (SPECIAL POWERS) ACT, 1958. ACT NO. 28 OF 1958. [11th September, 1958.] ) ಅನ್ನು ಕೇಂದ್ರವು ತೆಗೆದುಹಾಕಿದೆ ಎಂದು ವಿವರಿಸಿದರು.
ಅಸ್ಸೋಂ ಮತ್ತು ಮೇಘಾಲಯ ಸರ್ಕಾರಗಳು ತಮ್ಮ 50 ವರ್ಷಗಳ ಬಾಕಿ ಉಳಿದಿರುವ ಗಡಿ ವಿವಾದವನ್ನು ಪರಿಹರಿಸಲು ರಾಷ್ಟ್ರೀಯ ರಾಜಧಾನಿಯಲ್ಲಿ ಐತಿಹಾಸಿಕ ಒಪ್ಪಂದಕ್ಕೆ ಸಹಿ ಹಾಕಿವೆ. ಜನವರಿ 31 ರಂದು ಎರಡು ರಾಜ್ಯಗಳ ಮುಖ್ಯಮಂತ್ರಿಗಳು ಶಾ ಅವರಿಗೆ ಕರಡು ನಿರ್ಣಯವನ್ನು ಸಲ್ಲಿಸಿದ್ದರು.
ಶಾ ಅವರ ಭಾಷಣದ ಕುರಿತು ಮಾತನಾಡಿದ ಅಸ್ಸೋಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ಮಾಧ್ಯಮಗಳಿಗೆ ಮಾಹಿತಿ ನೀಡಿ, ಶಾಶ್ವತ ವಿಳಾಸವನ್ನು ಹೊಂದಿದ್ದೇವೆ ಎಂದು ಗೃಹ ಸಚಿವರು ಸಂತೋಷಪಟ್ಟಿದ್ದಾರೆ, ಈ ಮೂಲಕ ನಾವು ನಾವು ಎಲ್ಲಿಯೂ ಹೋಗುವುದಿಲ್ಲ ಎಂದು ವಿವರಿಸಿದರು.
ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಯಾಗದಿರುವ ಬಗ್ಗೆ ಅಮಿತ್ ಶಾ ಏನು ಹೇಳಿದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ಸಿಎಂ, ಸರ್ಕಾರ ತಂದಿರುವ ಸುಧಾರಣೆಗಳಿಗೆ ಪ್ರತಿಪಕ್ಷಗಳ ಆಕ್ಷೇಪಣೆಯೇ ವಿಳಂಬಕ್ಕೆ ಕಾರಣವಾಗಿದೆ. ಆದರೆ, ಸರ್ಕಾರವು ಇದಕ್ಕೆ ಬದ್ಧವಾಗಿದೆ. ಸಿಎಎ ಅನುಷ್ಠಾನಗೊಳಿಸುತ್ತಿದೆ ಎಂದರು.
ಈಶಾನ್ಯ ಪ್ರದೇಶದ ಸಮಸ್ಯೆಗಳನ್ನು ಪರಿಹರಿಸಲು ಬಿಜೆಪಿ ಹೇಗೆ ಯೋಜಿಸುತ್ತಿದೆ ಎಂಬುದನ್ನು ವಿವರಿಸಿದ ಶರ್ಮಾ, ಅಮಿತ್ ಶಾ ಅವರು ಈಶಾನ್ಯದಲ್ಲಿ ಬಿಜೆಪಿಯ ಪ್ರಯಾಣ ಮತ್ತು 2014 ರಲ್ಲಿ ಮೋದಿ ಸರ್ಕಾರದ ಆಗಮನದ ನಂತರದ ಅಭಿವೃದ್ಧಿಯ ಬಗ್ಗೆ ಮಾತನಾಡಿದ್ದಾರೆ. ಸುಮಾರು 60 ಪ್ರತಿಶತ ಪ್ರದೇಶಗಳಲ್ಲಿ AFSPA ಅನ್ನು ಈಶಾನ್ಯ ಪ್ರದೇಶದಿಂದ ಹೇಗೆ ತೆಗೆದುಹಾಕಲಾಗಿದೆ ಎಂಬುದನ್ನು ಸಹ ಚರ್ಚಿಸಲಾಗಿದೆ. 2024 ರ ವೇಳೆಗೆ ಈಶಾನ್ಯದಲ್ಲಿ ಯಾವುದೇ ದೋಷ ರೇಖೆಗಳಿರುವುದಿಲ್ಲ, ಎಲ್ಲಾ ಸಮಸ್ಯೆಗಳನ್ನು ಪರಿಹರಿಸಲಾಗುವುದು ಎಂದು ಅವರು ಹೇಳಿದರು ಎಂದು ಮಾಹಿತಿ ನೀಡಿದರು.
ಇದನ್ನೂ ಓದಿ: ನೂಪುರ್ ಶರ್ಮಾಗೆ ಸುಪ್ರೀಂ ಛೀಮಾರಿ: ಸಾಮಾಜಿಕ ಮಾಧ್ಯಮಗಳಿಗೆ ಲಗಾಮು ಹಾಕುವಂತೆ ನ್ಯಾಯಮೂರ್ತಿ ಸಲಹೆ