ಕರ್ನಾಟಕ

karnataka

ETV Bharat / bharat

ಈ ಅಧಿಕಾರಿಗಳು ಇನ್ಮುಂದೆ ಜೀನ್ಸ್, ಟೀ ಶರ್ಟ್ ಧರಿಸುವಂತಿಲ್ಲ..!

ಸೆಂಟ್ರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್​ನ (ಸಿಬಿಐ) ಎಲ್ಲ ಅಧಿಕಾರಿಗಳು ಮತ್ತು ಸಿಬ್ಬಂದಿ ಕಚೇರಿಯಲ್ಲಿ ಫಾರ್ಮಲ್ ಬಟ್ಟೆ ಧರಿಸಬೇಕು ಎಂದು ಆದೇಶ ಹೊರಡಿಸಲಾಗಿದೆ.

CBI
CBI

By

Published : Jun 4, 2021, 7:53 PM IST

ನವದೆಹಲಿ:ಸೆಂಟ್ರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್​ನ (ಸಿಬಿಐ) ಎಲ್ಲ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಕಚೇರಿಯಲ್ಲಿ ಫಾರ್ಮಲ್ ಬಟ್ಟೆ ಧರಿಸಬೇಕಾಗಿರುತ್ತದೆ. ಜೀನ್ಸ್ ಮತ್ತು ಸ್ಪೋರ್ಟ್ಸ್ ಶೂಗಳಂತಹ ಯಾವುದೇ ಕ್ಯಾಶುವಲ್ ಬಟ್ಟೆ ಧರಿಸುವಂತಿಲ್ಲ ಎಂದು ಏಜೆನ್ಸಿಯ ನಿರ್ದೇಶಕ ಸುಬೋಧ್ ಕುಮಾರ್ ಜೈಸ್ವಾಲ್ ಹೇಳಿದ್ದಾರೆ.

ಆದೇಶದ ಪ್ರಕಾರ, ಪುರುಷರು ಶರ್ಟ್, ಫಾರ್ಮಲ್ ಪ್ಯಾಂಟ್ ಮತ್ತು ಫಾರ್ಮಲ್ ಬೂಟುಗಳನ್ನು ಧರಿಸಬೇಕು ಹಾಗೂ ಕ್ಲೀನ್ ಶೇವ್ ಮಾಡಿ ಕಚೇರಿಗೆ ಬರಬೇಕಾಗುತ್ತದೆ.

ಮಹಿಳಾ ಉದ್ಯೋಗಿಗಳು ಸೀರೆ, ಸೂಟ್, ಫಾರ್ಮಲ್ ಶರ್ಟ್ ಮತ್ತು ಪ್ಯಾಂಟ್ ಮಾತ್ರ ಧರಿಸುವಂತೆ ಹೇಳಲಾಗಿದೆ.

"ಯಾವುದೇ ಜೀನ್ಸ್, ಟೀ ಶರ್ಟ್, ಸ್ಪೋರ್ಟ್ಸ್ ಶೂಗಳು, ಚಪ್ಪಲ್​ಗಳು ಮತ್ತು ಕ್ಯಾಶುವಲ್ ಉಡುಪು ಧರಿಸಲು ಕಚೇರಿಯಲ್ಲಿ ಅನುಮತಿಸಲಾಗುವುದಿಲ್ಲ" ಎಂದು ಆದೇಶದಲ್ಲಿ ತಿಳಿಸಲಾಗಿದೆ.

ದೇಶಾದ್ಯಂತ ಸಿಬಿಐ ಕಚೇರಿಗಳಿಗೆ ಈ ನಿಯಮಗಳನ್ನು ಅನ್ವಯಿಸಲಾಗುವುದು ಮತ್ತು ಮಾರ್ಗಸೂಚಿಗಳನ್ನು ಹಾಗೂ ಡ್ರೆಸ್ ಕೋಡ್​ ಅನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಸೂಚಿಸಲಾಗಿದೆ.

ABOUT THE AUTHOR

...view details