ಕರ್ನಾಟಕ

karnataka

ETV Bharat / bharat

ದೇಶದಲ್ಲಿ ಎಲ್ಲ ಬಗೆ ಸ್ವಾತಂತ್ರ್ಯ ಕಿತ್ತುಕೊಳ್ಳಲಾಗ್ತಿದೆ: ಶಿವಸೇನೆ ಆರೋಪ - ನಿರ್ದೇಶಕರ ಮನೆ ಮೇಲೆ ಐಟಿ ದಾಳಿ

ಶಿವಸೇನೆ ಬಾಲಿವುಡ್​ ನಿರ್ದೇಶಕ ಅನುರಾಗ್ ಕಶ್ಯಪ್ ಮತ್ತು ನಟಿ ತಾಪ್ಸಿ ಪನ್ನು ಮನೆ ಮೇಲಿನ ಅವರ ಮೇಲಿನ ಐಟಿ ದಾಳಿಯನ್ನು ಖಂಡಿಸಿದ್ದು, ಅನುರಾಗ್ ಕಶ್ಯಪ್ ಮತ್ತು ತಾಪ್ಸಿ ಪನ್ನು ಮೋದಿ ಸರ್ಕಾರದ ವಿರುದ್ಧ ಸಿಡಿದೆದ್ದಿದ್ದಕ್ಕೆ ಈ ದಾಳಿ ನಡೆದಿದೆ, ದೇಶದಲ್ಲಿ ಕೇಂದ್ರ ತನಿಖಾ ಸಂಸ್ಥೆಯ ನ್ಯಾಯಯುತ ಕಾರ್ಯದ ಸ್ವಾತಂತ್ರ್ಯವೂ ನಾಶವಾಗಿದೆ ಎಂದು ಶಿವಸೇನೆ ತನ್ನ ಮುಖವಾಣಿ ಸಾಮ್ನಾದಲ್ಲಿ ಹೇಳಿದೆ.

bollywood incom tax raid
ಶಿವಸೇನೆ ಆರೋಪ

By

Published : Mar 5, 2021, 10:37 AM IST

ಮುಂಬೈ: ಕೇಂದ್ರ ಸರ್ಕಾರದ ವಿರುದ್ಧ ಮಾತನಾಡುವುದು ದೇಶದ್ರೋಹವಲ್ಲ ಎಂದು ಸುಪ್ರೀಂಕೋರ್ಟ್ ಹೇಳಿದೆ. ಆದರೆ ಇದೇ ಸಮಯದಲ್ಲಿ, ಮೋದಿ ಸರ್ಕಾರದ ವಿರುದ್ಧ ಮಾತನಾಡಿದ ಸಿನಿಮಾ ತಾರೆಯರು, ನಿರ್ಮಾಪಕರು ಮತ್ತು ನಿರ್ದೇಶಕರ ಮನೆ ಮೇಲೆ ಐಟಿ ದಾಳಿ ನಡೆಸಿರುವುದು ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಈ ಬಗ್ಗೆ ಸಾಮ್ನಾ ಸಂಪಾದಕೀಯ ಬರೆದು ಕೇಂದ್ರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದೆ.

ನಟಿ ತಾಪ್ಸಿ ಪನ್ನು, ಅನುರಾಗ್ ಕಶ್ಯಪ್, ವಿಕಾಸ್ ಬಹ್ಲ್ ಮತ್ತು ಸಿನಿಮಾ ವಿತರಕ ಮಧು ಮಂಟೆನಾ ಸೇರಿದಂತೆ ಸಿನಿರಂಗದ ಹಲವರಿಗೆ ಸೇರಿದ ಮುಂಬೈ- ಪುಣೆಯಲ್ಲಿ 30ಕ್ಕೂ ಹೆಚ್ಚು ಸ್ಥಳಗಳ ಮೇಲೆ ದಾಳಿ ನಡೆಸಲಾಯಿತು.

ತಾಪ್ಸಿ ಮತ್ತು ಅನುರಾಗ್ ಕಶ್ಯಪ್ ದೇಶದ ಆಗು - ಹೋಗುಗಳ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಬಹಿರಂಗವಾಗಿ ವ್ಯಕ್ತಪಡಿಸುತ್ತಲೇ ಇರುತ್ತಾರೆ. ಇವರಷ್ಟೇ ಅಲ್ಲ, ಸಿನಿಮಾ ಕ್ಷೇತ್ರದ ಬಹುತೇಕ ಮಂದಿ ಕೇಂದ್ರ ಕಾಯ್ದೆಗಳ ವಿರುದ್ಧ ರೈತರು ನಡೆಸುತ್ತಿರುವ ಪ್ರತಿಭಟನೆ ಬಗ್ಗೆ ಮುಕ್ತವಾಗಿ ಮಾತನಾಡಿದ್ರು. ಕೆಲವರು ಈ ಕಾಯ್ದೆಗಳನ್ನು ಬೆಂಬಲಿಸಿ ಮೋದಿ ಸರ್ಕಾರದ ಪರವಾಗಿ ನಿಂತರು. ರೈತರನ್ನು ಬೆಂಬಲಿಸಿದ ವಿದೇಶಿಗರನ್ನು ವಿರೋಧಿಸಿ ಟ್ವೀಟ್​ ಮಾಡಿದರು. ಆದರೆ ಕೆಲವರು ರೈತರಿಗೆ ತಮ್ಮ ಬೆಂಬಲ ಸೂಚಿಸಿದ್ರು. ಅವರಲ್ಲಿ ತಾಪ್ಸಿ ಮತ್ತು ಅನುರಾಗ್ ಕಶ್ಯಪ್ ಅವರಂತಹ ಕೆಲವರು ರೈತ ಚಳವಳಿಯ ಪರವಾಗಿ ನಿಂತರು. ಇದೇ ಕಾರಣಕ್ಕಾಗಿ ಇವರಿಬ್ಬರ ನಿವಾಸಗಳು ಮತ್ತು ಕಚೇರಿ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆದಿವೆ ಎನ್ನಲಾಗಿದೆ. ನಿರ್ದೇಶಕ ಅನುರಾಗ್​ ಕಶ್ಯಪ್​ ಪ್ರೊಡಕ್ಷನ್​ ಹೌಸ್​ ಸ್ಥಾಪಿಸಿದ್ದು, ತೆರಿಗೆ ಪಾವತಿಸಿಲ್ಲ ಎಂದು ಐಟಿ ದಾಳಿ ನಡೆಸಿದೆ. ಅದರ ಇದರ ಹಿಂದಿನ ಅಸಲಿಯತ್ತೇ ಬೇರೆ ಎಂಬುದು ಸದ್ಯ ಚರ್ಚೆಗೆ ಗ್ರಾಸವಾಗಿದೆ.

ಲಾಕ್‌ಡೌನ್ ಅವಧಿಯಲ್ಲಿ 'ಬಾಲಿವುಡ್‌' ಹಲವು ಸಂಕಷ್ಟಕ್ಕೆ ಸಿಲುಕಿದೆ. ಚಿತ್ರೀಕರಣ ಬಂದ್​ ಆಗಿ, ಚಿತ್ರಮಂದಿರಗಳನ್ನು ಮುಚ್ಚಲಾಗಿದೆ. ದೊಡ್ಡ ಉದ್ಯಮ - ವ್ಯವಹಾರವು ಆರ್ಥಿಕ ಬಿಕ್ಕಟ್ಟಿನಲ್ಲಿದ್ದಾಗ, ರಾಜಕೀಯ ಸೇಡು ತೀರಿಸಿಕೊಳ್ಳಲು ಇಂತಹ ದಾಳಿಗಳನ್ನು ನಡೆಸುವುದು ಸರಿಯಲ್ಲ. ಸಿನಿ ಜಗತ್ತಿನಲ್ಲಿ, ಮೋದಿ ಸರ್ಕಾರವನ್ನು ಬಹಿರಂಗವಾಗಿ ದೂಷಿಸುವ ಅನೇಕ ಜನರಿದ್ದಾರೆ. ಅವರಲ್ಲಿ ಹಲವರು ಮೋದಿ ಸರ್ಕಾರದ ನೇರ ಫಲಾನುಭವಿಗಳು ಎಂದು ಶಿವಸೇನೆ ಮುಖವಾಣಿ ಸಾಮ್ನಾದಲ್ಲಿ ಹೇಳಲಾಗಿದೆ.

ದೀಪಿಕಾ ಪಡುಕೋಣೆ ಜೆಎನ್​ಯುಗೆ ಹೋಗಿ ವಿದ್ಯಾರ್ಥಿಗಳ ಪರ ಮಾತನಾಡಿದಾಗ ದೀಪಿಕಾ ಅವರ ಸಿನಿಮಾವನ್ನು ಯೋಜಿತ ರೀತಿಯಲ್ಲಿ ಫ್ಲಾಪ್ ಮಾಡುವ ಪ್ರಯತ್ನ ನಡೆದಿತ್ತು. ಸೋಷಿಯಲ್ ಮೀಡಿಯಾದಲ್ಲಿ ಅವರ ವಿರುದ್ಧ ಅಭಿಯಾನ ಆರಂಭಿಸಲಾಯಿತು. ಪರಿಸರವಾದಿ ಕಾರ್ಯಕರ್ತೆ ದಿಶಾ ರವಿ ಅವರನ್ನು ಬಂಧಿಸಿದ ರೀತಿ ಅಸಹ್ಯಕರ. ಇದು ದೇಶದ ಗೌರವಕ್ಕೆ ಧಕ್ಕೆ ತರುವಂತಿತ್ತು. ಇನ್ನು ಗೋಮಾಂಸ ಪ್ರಕರಣ ಅನೇಕರನ್ನು ಬಲಿ ಪಡೆಯಿತು. ಆದರೆ, ಬಿಜೆಪಿ ಆಡಳಿತದ ರಾಜ್ಯಗಳಲ್ಲಿ ಗೋಮಾಂಸ ಮಾರಾಟ ಭರದಿಂದ ಸಾಗಿದೆ. ಈ ಬಗ್ಗೆ ಯಾರೂ ಏಕೆ ಮಾತನಾಡುವುದಿಲ್ಲ? ದೇಶದಲ್ಲಿ ಎಲ್ಲ ಬಗೆಯ ಸ್ವಾತಂತ್ರ್ಯ ಕಿತ್ತುಕೊಳ್ಳಲಾಗ್ತಿದೆ. ಕೇಂದ್ರ ತನಿಖಾ ಸಂಸ್ಥೆಯ ನ್ಯಾಯಯುತ ಕಾರ್ಯದ ಸ್ವಾತಂತ್ರ್ಯವೂ ನಾಶವಾಗಿದೆ. ತಾಪ್ಸಿ ಮತ್ತು ಅನುರಾಗ್ ಕಶ್ಯಪ್​ ವಿಷಯದಲ್ಲಿ ಆಗಿರುವುದು ಇದೇ ಎಂದು ಸಾಮ್ನಾ ತನ್ನ ಸಂಪಾದಕೀಯದಲ್ಲಿ ಟೀಕಿಸಿದೆ.

ABOUT THE AUTHOR

...view details