ಕರ್ನಾಟಕ

karnataka

ETV Bharat / bharat

ವಡೋದರಾದಲ್ಲಿ ಇಂದು ಮತ್ತು ನಾಳೆ ‘ವ್ಯಾಲಿ ಆಫ್ ವರ್ಡ್ಸ್’ ಆಯೋಜನೆ - ವಡೋದರಾ

ಈ ಪ್ರತಿಷ್ಠಿತ ಸಾಹಿತ್ಯೋತ್ಸವದ ಒಂದು ಅಧ್ಯಾಯವನ್ನು ಗುಜರಾತಿನ ಸಾಂಸ್ಕೃತಿಕ ರಾಜಧಾನಿ ವಡೋದರಾದಲ್ಲಿ ಆಯೋಜಿಸಿರುವುದು ಇದೇ ಮೊದಲು..

ವ್ಯಾಲಿ ಆಫ್ ವರ್ಡ್ಸ್
ವ್ಯಾಲಿ ಆಫ್ ವರ್ಡ್ಸ್

By

Published : Oct 22, 2021, 3:43 PM IST

ವಡೋದರಾ (ಗುಜರಾತ್) :ರಾಷ್ಟ್ರೀಯ ರೈಲ್ವೆ ಅಕಾಡೆಮಿಯು ಇಂದು ಮತ್ತು ನಾಳೆ ವ್ಯಾಲಿ ಆಫ್ ವರ್ಡ್ಸ್​ ಎಂಬ ಅಖಿಲ ಭಾರತ ಸಾಹಿತ್ಯ ಉತ್ಸವ-ಹಿಂದಿ ಕಾರ್ಯಕ್ರಮವನ್ನು ಆಯೋಜಿಸಿದೆ. ಇದರಲ್ಲಿ ಭಾಗವಹಿಸುವ ಸಲುವಾಗಿ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆದ ಬರಹಗಾರರು ಮತ್ತು ಕಲಾವಿದರು ವಡೋದರಾಕ್ಕೆ ಆಗಮಿಸಿದ್ದಾರೆ.

ಈ ಸಮಾರಂಭದ ಉದ್ಘಾಟನೆಯಲ್ಲಿ ಮುಖ್ಯ ಅತಿಥಿಗಳಾಗಿ ನಗರದ ಪೊಲೀಸ್ ಕಮಿಷನರ್​ ಶಂಶೇರ್ ಸಿಂಗ್ ಭಾಗವಹಿಸಿದ್ರು. ವ್ಯಾಲಿ ಆಫ್ ವರ್ಡ್ಸ್ ಲಿಟರೇಚರ್ ಫೆಸ್ಟಿವಲ್‌ನ ರಾಷ್ಟ್ರೀಯ ಸಂಚಾಲಕರು ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ನ್ಯಾಷನಲ್ ಅಕಾಡೆಮಿ ಆಫ್ ಅಡ್ಮಿನಿಸ್ಟ್ರೇಶನ್‌ನ ಮಾಜಿ ಡೈರೆಕ್ಟರ್ ಜನರಲ್ ಆಗಿರುವ ಡಾ.ಸಂಜೀವ್ ಚೋಪ್ರಾ ಭಾಗಿಯಾಗಿದ್ದರು.

ವಂದನಾ ರಾಗ್, ಮಮತಾ ಕಿರಣ್, ಲಕ್ಷ್ಮಿ ಶಂಕರ್ ವಾಜಪೇಯಿ, ಮಮತಾ ಕಾಲಿಯಾ, ನೀತಿ ಸಿಂಗ್ ಸೇರಿದಂತೆ ರಾಷ್ಟ್ರ ಮಟ್ಟದ ಬರಹಗಾರರು ಮತ್ತು ಹಿಂದಿ ವಿದ್ವಾಂಸರು ಕೂಡ ಸಮಾರಂಭದಲ್ಲಿ ಭಾಗವಹಿಸಿದ್ದಾರೆ.

ಇದನ್ನೂ ಓದಿ: ಅಯ್ಯೋ.. 100 ರೂಪಾಯಿ ದುಡಿಯಲು ಹೋಗಿ ₹6000 ಕಳೆದುಕೊಂಡ ಆಟೋ ಚಾಲಕ..

ಈ ಪ್ರತಿಷ್ಠಿತ ಸಾಹಿತ್ಯೋತ್ಸವದ ಒಂದು ಅಧ್ಯಾಯವನ್ನು ಗುಜರಾತಿನ ಸಾಂಸ್ಕೃತಿಕ ರಾಜಧಾನಿ ವಡೋದರಾದಲ್ಲಿ ಆಯೋಜಿಸಿರುವುದು ಇದೇ ಮೊದಲು.

ABOUT THE AUTHOR

...view details