ತಿರುವನಂತಪುರಂ(ಕೇರಳ) :ಭಾರತದ ಅತ್ಯಂತ ಪ್ರಸಿದ್ಧ ದೇವಾಲಯಗಳಲ್ಲಿ ಒಂದಾಗಿರುವ ಶಬರಿಮಲೆ(Sabarimala temple) ಅಯ್ಯಪ್ಪ ಸ್ವಾಮಿ ಭಕ್ತರಿಗೆ ಇದೀಗ ಸಿಹಿ ಸುದ್ದಿ ಸಿಕ್ಕಿದೆ.
ಬರುವ ನವೆಂಬರ್ 16ದಿಂದ ಭಕ್ತರ ದರ್ಶನಕ್ಕೆ ಶಬರಿಮಲೆ ಮುಕ್ತವಾಗಲಿದೆ. ಪ್ರತಿದಿನ 25 ಸಾವಿರ ಭಕ್ತಾಧಿಗಳಿಗೆ ದರ್ಶನ ಪಡೆದುಕೊಳ್ಳಲು ಅವಕಾಶ ನೀಡಲಾಗುವುದು ಎಂದು ದೇವಾಲಯದ ಅಧ್ಯಕ್ಷರು ತಿಳಿಸಿದ್ದಾರೆ.
ಎರಡು ತಿಂಗಳ ವಾರ್ಷಿಕ ಧಾರ್ಮಿಕ(annual pilgrimage to Sabarimala) ಯಾತ್ರೆಯ ಅವಧಿ ಆರಂಭಗೊಂಡಿರುವ ಕಾರಣ, ಪ್ರತಿದಿನ ಸುಮಾರು 25 ಸಾವಿರ ಭಕ್ತರಿಗೆ ಅವಕಾಶ ನೀಡಲು ನಿರ್ಧಾರ ಕೈಗೊಳ್ಳಲಾಗಿದೆ.
ನವೆಂಬರ್ 16ರಿಂದ ಧಾರ್ಮಿಕ ಯಾತ್ರೆ ಆರಂಭಗೊಳ್ಳಲಿದ್ದು, ನವೆಂಬರ್ 15ರ ಸಂಜೆ 5ಕ್ಕೆ ದೇವಾಲಯದ ಬಾಗಿಲು ಓಪನ್ ಆಗಲಿದೆ. ಕೋವಿಡ್ ಮಾರ್ಗಸೂಚಿ ಪಾಲನೆ ಕಡ್ಡಾಯವಾಗಿದೆ.
ಇಲ್ಲಿಗೆ ಭೇಟಿ ನೀಡಲು ಎರಡು ಡೋಸ್ ಕೋವಿಡ್ ಲಸಿಕೆ(Covid vaccine) ಪಡೆದಿರುವುದು ಅಥವಾ ಆರ್ಟಿಪಿಸಿಆರ್(RTPCR negative certificate) ನೆಗೆಟಿವ್ ಪ್ರಮಾಣ ಪತ್ರ ಹೊಂದಿರುವುದು ಕಡ್ಡಾಯವಾಗಿದೆ.