ನವದೆಹಲಿ :ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಅಟ್ಟಹಾಸ ಮುಂದುವರಿದಿದೆ. ಅಲ್ಲಿನ ಪ್ರಜೆಗಳು ಜೀವ ಉಳಿಸಿಕೊಳ್ಳಲು ಬೇರೆ ರಾಷ್ಟ್ರಗಳತ್ತ ಮುಖ ಮಾಡಿದ್ದಾರೆ. ಈ ನಡುವೆ ಅಫ್ಘನ್ ನಿರಾಶ್ರಿತರು ಇ-ವೀಸಾದಲ್ಲಿ ಮಾತ್ರ ಭಾರತಕ್ಕೆ ಆಗಮಿಸುವಂತೆ ಕೇಂದ್ರ ಸರ್ಕಾರ ಸೂಚನೆ ನೀಡಿದೆ.
ಅಫ್ಘನ್ನ ಪ್ರಸ್ತುತ ಪರಿಸ್ಥಿತಿ ಗಮನದಲ್ಲಿಟ್ಟುಕೊಂಡು ಅಲ್ಲಿನ ಪ್ರಜೆಗಳು ಇನ್ನುಮುಂದೆ ಇ-ವೀಸಾದಡಿ ಭಾರತಕ್ಕೆ ಆಗಮಿಸಬೇಕು ಎಂದು ಕೇಂದ್ರ ಗೃಹ ಸಚಿವಾಲಯ ಸೂಚಿಸಿದೆ. ಸಂಪೂರ್ಣ ಅಫ್ಘಾನಿಸ್ತಾನ ತಾಲಿಬಾನ್ ವಶಕ್ಕೆ ಪಡೆದ ಬಳಿಕ ಭಾರತ ಹೊಸ ವೀಸಾ ನೀತಿ ಜಾರಿ ಮಾಡಿದೆ. ‘ಇ-ಎಮರ್ಜೆನ್ಸಿ ಎಕ್ಸ್-ಮಿಸ್ಕ್ ವೀಸಾ’ ಎಂಬ ಹೊಸ ವರ್ಗದ ವೀಸಾದಡಿ ಪ್ರಯಾಣಿಸಲು ಅವಕಾಶ ಕಲ್ಪಿಸಲಾಗಿದೆ.