ಮುಂಬೈ(ಮಹಾರಾಷ್ಟ್ರ):ಮಹಾರಾಷ್ಟ್ರದಲ್ಲಿ ಶಿವಸೇನೆ, ಕಾಂಗ್ರೆಸ್ ಮತ್ತು ಎನ್‌ಸಿಪಿ ಒಳಗೊಂಡಿರುವ ಮೈತ್ರಿ ಸರ್ಕಾರ 'ಮಹಾರಾಷ್ಟ್ರ ವಿಕಾಸ ಅಘಾಡಿ' ಆಡಳಿತ ನಡೆಸುತ್ತಿದ್ದು, ಇದರ ಬೆನ್ನಲ್ಲೇ ಕಾಂಗ್ರೆಸ್ಗೆ ಬಹುದೊಡ್ಡ ಹೊಡೆತ ಬಿದ್ದಿದೆ. ಮಾಲೆಗಾಂವ್ನ 28 ಮುನ್ಸಿಪಾಲ್ ಕಾರ್ಪೊರೇಟರ್ ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ(ಎನ್‌ಸಿಪಿ) ಸೇರ್ಪಡೆಯಾಗಿದ್ದಾರೆ.
ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ಮಾಲೆಗಾಂವ್ ಮಹಾನಗರ ಪಾಲಿಕೆಯ ಮೇಯರ್ ಸೇರಿದಂತೆ 28 ಕಾಂಗ್ರೆಸ್ ಕಾರ್ಪೊರೇಟರ್ ಎನ್‌ಸಿಪಿ ಸೇರಿಕೊಂಡಿದ್ದು, ಈ ವೇಳೆ ಉಪಮುಖ್ಯಮಂತ್ರಿ ಅಜಿತ್ ಪವಾರ್ ಮತ್ತು ರಾಜ್ಯ ಎನ್‌ಸಿಪಿ ಅಧ್ಯಕ್ಷ ಜಯಂತ್ ಪಾಟೀಲ್ ಉಪಸ್ಥಿತರಿದ್ದರು.
ಇದನ್ನೂ ಓದಿರಿ:ತ.ನಾಡಿನಲ್ಲಿ ಫೆ.1ರಿಂದ ಶಾಲಾ-ಕಾಲೇಜ್ ಪುನಾರಂಭ.. ನಾಳೆಯಿಂದಲೇ ನೈಟ್ ಕರ್ಫ್ಯೂ ಹಿಂತೆಗೆತ
ಮಾಲೆಗಾಂವ್ ಮಹಾನಗರ ಪಾಲಿಕೆ 84 ಕಾರ್ಪೊರೇಟರ್ಗಳ ಸದಸ್ಯ ಬಲ ಹೊಂದಿದ್ದು, ಈಗಾಗಲೇ ಎನ್‌ಸಿಪಿ 20 ಸದಸ್ಯರನ್ನ ಹೊಂದಿದೆ. ಉಳಿದಂತೆ ಶಿವಸೇನೆ 13, ಬಿಜೆಪಿ 9, ಎಐಎಂಐಎಂ 7, ಜೆಡಿಎಸ್ 6 ಮತ್ತು ಓರ್ವ ಸ್ವತಂತ್ರ ಸದಸ್ಯರಿದ್ದಾರೆ. ಕಾಂಗ್ರೆಸ್ನ 28 ಕಾರ್ಪೊರೇಟರ್ ಎನ್‌ಸಿಪಿ ಸೇರಿಕೊಂಡಿರುವ ಕಾರಣ ಸಂಖ್ಯಾಬಲ 48ಕ್ಕೆ ಏರಿಕೆಯಾಗಿದೆ.